WI vs NZ: 4 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಪತನ; ಕಿವೀಸ್ ಎದುರು ಹೀನಾಯವಾಗಿ ಸೋತ ವಿಂಡೀಸ್
WI vs NZ: ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ಗೆ ಮರಳಿದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಂಡೀಸ್ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದರು.
ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ( New Zealand defeated West Indies) ತಂಡವನ್ನು 50 ರನ್ ಗಳಿಂದ ಸೋಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮನಾಗಿದೆ. ಮಳೆ ಪೀಡಿತ ಪಂದ್ಯದಲ್ಲಿ ಕಿವೀಸ್ ತಂಡ ವಿಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕೆರಿಬಿಯನ್ ತಂಡಕ್ಕೆ 213 ರನ್ ಗಳ ಟಾರ್ಗೆಟ್ ನೀಡಿತ್ತು. ಆದರೆ, ಇದಾದ ಬಳಿಕ ಮಳೆಯಿಂದಾಗಿ ಕೆಲಕಾಲ ಪಂದ್ಯ ಸ್ಥಗಿತಗೊಂಡು ಡಕ್‌ವರ್ತ್ ಲೂಯಿಸ್ (Duckworth-Lewis) ಆಧಾರದ ಮೇಲೆ ಪಂದ್ಯವನ್ನು 41 ಓವರ್‌ಗಳಿಗೆ ಕಡಿತಗೊಳಿಸಿ ವೆಸ್ಟ್ ಇಂಡೀಸ್‌ಗೆ 212 ರನ್‌ಗಳ ಗುರಿ ನೀಡಲಾಯಿತು. ಉತ್ತರವಾಗಿ ವಿಂಡೀಸ್ ತಂಡ 35.3 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಯಿತು.
ಫಿನ್ ಅಲೆನ್ ಶತಕ ವಂಚಿತ
ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ವಿಫಲರಾದರು. ಅಲೆನ್, ಡಾರ್ಲಿ ಮಿಚೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. 7 ಬ್ಯಾಟ್ಸ್‌ಮನ್‌ಗಳು ಎರಡಂಕ್ಕಿ ಸಂಖ್ಯೆಯನ್ನು ದಾಟಲು ಸಾಧ್ಯವಾಗಲಿಲ್ಲ. ಅಲೆನ್ ಮತ್ತು ಮಿಚೆಲ್ ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ಕಿವೀಸ್ ತಂಡವು ಗೆಲುವು ದಾಖಲಿಸಲು ಸಾಧ್ಯವಾಯಿತು. ಆದರೆ ಅಲೆನ್ ಶತಕ ವಂಚಿತರಾದರು. 96 ರನ್ಗಳಲ್ಲಿ ಅಲೆನ್, ಹೋಲ್ಡರ್ ಎಸೆತದಲ್ಲಿ ಬೌಲ್ಡ್ ಆದರು. ಅಲೆನ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಅದೇ ಸಮಯದಲ್ಲಿ, ಮಿಚೆಲ್ ಅವರ 41 ರನ್‌ಗಳ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಹೊಡೆದರು. ಸ್ಯಾಂಟ್ನರ್ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಹೋಲ್ಡರ್ 24 ರನ್ ನೀಡಿ 3 ವಿಕೆಟ್ ಹಾಗೂ ಕೆವಿನ್ ಸಿಂಕ್ಲೇರ್ 41 ರನ್ ನೀಡಿ 4 ವಿಕೆಟ್ ಪಡೆದರು. ವಿಂಡೀಸ್ ದಾಳಿಗೆ ಕಿವೀಸ್ ತಂಡ 48.2 ಓವರ್‌ಗಳಲ್ಲಿ 212 ರನ್‌ಗಳಿಗೆ ಸೀಮಿತವಾಯಿತು.
Good fight in the end boys. @BLACKCAPS level the series 1- 1. #WIvNZ #MenInMaroon pic.twitter.com/wGtvcItmxR
— Windies Cricket (@windiescricket) August 20, 2022
ವಿಂಡೀಸ್ ಲಯವನ್ನು ಹಾಳು ಮಾಡಿತು ಮಳೆ
ಪಂದ್ಯ ಕಠಿಣವಾಗಿ ಕಂಡುಬಂದರೂ ಮಳೆಯು ವಿಂಡೀಸ್‌ನ ಲಯವನ್ನು ಹಾಳು ಮಾಡಿತು. ಹೀಗಾಗಿ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ಗೆ ಮರಳಿದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಂಡೀಸ್ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದರು. ಆದರೆ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ವಿಂಡೀಸ್ ಬ್ಯಾಟ್ಸ್‌ಮನ್‌ಗಳ ಸ್ಥಿತಿಯನ್ನು ಶೋಚನೀಯಗೊಳಿಸಿದರು. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೈಲ್ ಮೇಯರ್ಸ್, ಶಮ್ರಾ ಬ್ರೂಕ್ಸ್ ಮತ್ತು ಜೇಸನ್ ಹೋಲ್ಡರ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಬ್ರೆಂಡನ್ ಕಿಂಗ್ ಮತ್ತು ನಾಯಕ ನಿಕೋಲ್ಸ್ ಪೂರನ್ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು. ಶಾಯ್ ಹೋಪ್ ಮತ್ತು ಕಾರ್ಟಿ ತಲಾ 16 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಯಾನಿಕ್ ಕಾರಿಯಾ ಗರಿಷ್ಠ 52 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಅಲ್ಜಾರಿ ಜೋಸೆಫ್ 49 ರನ್ ಗಳಿಸಿದರು. ಸೌದಿ 22 ರನ್ ನೀಡಿ 4 ವಿಕೆಟ್ ಹಾಗೂ ಬೌಲ್ಟ್ 18 ರನ್ ನೀಡಿ 3 ವಿಕೆಟ್ ಪಡೆದರು.