Ind vs Zim: ಕ್ಯಾಪ್ಟನ್ ಆಗಿ ಪಾಸ್, ಬ್ಯಾಟರ್ ಆಗಿ ಫೇಲ್; ಕೇವಲ 5 ಎಸೆತಗಳಿಗೆ ಸುಸ್ತಾದ ನಾಯಕ ರಾಹುಲ್

Ind vs Zim: ಜಿಂಬಾಬ್ವೆ ಪ್ರವಾಸದಿಂದ ತಂಡಕ್ಕೆ ವಾಪಸಾಗಿರುವ ಕೆಎಲ್ ರಾಹುಲ್ ಶನಿವಾರ ನಡೆದ ಏಕದಿನ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗದೆ ಎರಡನೇ ಓವರ್‌ನಲ್ಲಿಯೇ ಔಟಾದರು.

Ind vs Zim: ಕ್ಯಾಪ್ಟನ್ ಆಗಿ ಪಾಸ್, ಬ್ಯಾಟರ್ ಆಗಿ ಫೇಲ್; ಕೇವಲ 5 ಎಸೆತಗಳಿಗೆ ಸುಸ್ತಾದ ನಾಯಕ ರಾಹುಲ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 20, 2022 | 6:02 PM

ಕೆಎಲ್ ರಾಹುಲ್ (KL Rahul) ಜಿಂಬಾಬ್ವೆ ಪ್ರವಾಸಕ್ಕೆ ಫಿಟ್ ಎಂದು ಘೋಷಿಸಿದಾಗ, ಅವರು ತಮ್ಮ ಹಳೆಯ ಫಾರ್ಮ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಜೊತೆಗೆ ರಾಹುಲ್ ಆಯ್ಕೆಯ ಮುನ್ನ ತಂಡದ ನಾಯಕತ್ವವಹಿಸಿದ್ದ ಧವನ್ ಅವರನ್ನು ಉಪನಾಯಕನಾಗಿ ನೇಮಿಸಿ, ರಾಹುಲ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು. ರಾಹುಲ್ ಪ್ರಸ್ತುತ ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪ್ರಮುಖರಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli and Rohit Sharma) ನಂತರ ಯಾರದ್ದಾದರೂ ಹೆಸರು ಬಂದರೆ ಅದು ರಾಹುಲ್ ಅವರದ್ದು ಮಾತ್ರ ಆಗಿರುತ್ತದೆ. ಆದರೆ ಬಹಳ ಸಮಯದ ನಂತರ ತಂಡಕ್ಕೆ ಮರಳಿದ ರಾಹುಲ್ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 1 ರನ್​ಗಳಿಗೆ ಸುಸ್ತಾದರು.

ಜಿಂಬಾಬ್ವೆ ಪ್ರವಾಸದಿಂದ ತಂಡಕ್ಕೆ ವಾಪಸಾಗಿರುವ ಕೆಎಲ್ ರಾಹುಲ್ ಶನಿವಾರ ನಡೆದ ಏಕದಿನ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗದೆ ಎರಡನೇ ಓವರ್‌ನಲ್ಲಿಯೇ ಔಟಾದರು. ವಿಕ್ಟರ್ ನ್ಯುಯಿಚಿ ಎಸೆತಕ್ಕೆ ಬಲಿಯಾದ ರಾಹುಲ್ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಐದು ಎಸೆತಗಳನ್ನು ಆಡಿದ ರಾಹುಲ್, ಎರಡನೇ ಓವರ್​ನ ನಾಲ್ಕನೇ ಎಸೆತದಲ್ಲಿ ಪೆವಿಲಿಯನ್​ಗೆ ಮರಳಿದರು.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ

ಇದನ್ನೂ ಓದಿ
Image
Asia Cup 2022: ಭಾರತಕ್ಕೆ ಸಿಹಿ, ಪಾಕಿಸ್ತಾನಕ್ಕೆ ಕಹಿ; ಏಷ್ಯಾಕಪ್​ನಿಂದ ಬಾಬರ್ ತಂಡದ ಸ್ಟಾರ್ ಬೌಲರ್ ಔಟ್..!
Image
Virat Kohli: 1000 ದಿನಗಳು ಪೂರ್ಣ; ಪಾಕ್ ವಿರುದ್ಧವಾದರೂ ಕೊಹ್ಲಿ ಬ್ಯಾಟ್ ಆಗಸದತ್ತ ಮುಖ ಮಾಡುತ್ತಾ?
Image
Asia Cup 2022: ಆಟದ ಜೊತೆಗೆ ನಮ್ಮ ತಂಡವೂ ಬದಲಾಗಿದೆ; ಪಾಕ್ ಮಣಿಸಲು ನಾವು ಸಿದ್ದ ಎಂದ ರೋಹಿತ್

ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಇದಾಗಿದೆ. ಈ ಸರಣಿಯಲ್ಲಿ ರಾಹುಲ್ ಮೊದಲ ಬಾರಿಗೆ ಬ್ಯಾಟಿಂಗ್‌ಗೆ ಇಳಿದಿದ್ದರು. ಏಕೆಂದರೆ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಜೊತೆಗೆ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಓಪನರ್ ಆಗಿ ಕಣಕ್ಕಿಳಿದಿದ್ದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕದ ಜೊತೆಯಾಟ ನಡೆಸಿ ತಂಡವನ್ನು 10 ವಿಕೆಟ್‌ಗಳಿಂದ ಗೆಲ್ಲಿಸಿದರು. ಹಾಗಾಗಿಯೇ ರಾಹುಲ್​ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ರಾಹುಲ್ ಆರಂಭಿಕರಾಗಿ ಪುನರಾಗಮನ ಮಾಡಿದರೂ ಆವೇಗವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಮೂರು ಸರಣಿಗಳಿಂದ ಔಟ್

ರಾಹುಲ್ ಗಾಯದ ಸಮಸ್ಯೆಯಿಂದಾಗಿ ಮೂರು ಸರಣಿಗಳಿಂದ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಿದ ಐದು ಪಂದ್ಯಗಳ T20 ಸರಣಿಗೆ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಯಿತು. ಆದರೆ ಅವರು ಗಾಯಗೊಂಡಿದ್ದರಿಂದ ಸರಣಿಯಲ್ಲಿ ಆಡಲಿಲ್ಲ. ಇದಾದ ಬಳಿಕ ವಿಂಡೀಸ್ ಪ್ರವಾಸದಲ್ಲೂ ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಡಿರಲಿಲ್ಲ. ಜಿಂಬಾಬ್ವೆ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಿದಾಗ ಅದರಲ್ಲಿ ರಾಹುಲ್ ಹೆಸರು ಇರಲಿಲ್ಲ, ಆದರೆ ನಂತರ ಅವರು ಫಿಟ್ ಎಂದು ಘೋಷಿಸಿದಾಗ ಅವರನ್ನು ಈ ಪ್ರವಾಸದಲ್ಲಿ ಸೇರಿಸಲಾಯಿತು ಮತ್ತು ಶಿಖರ್ ಧವನ್ ಬದಲಿಗೆ ನಾಯಕತ್ವವನ್ನು ನೀಡಲಾಯಿತು.

ಏಷ್ಯಾ ಕಪ್ ಮೇಲೆ ಕಣ್ಣು

ರಾಹುಲ್ ಫಾರ್ಮ್‌ಗೆ ಮರಳುವುದು ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಆಗಸ್ಟ್ 27 ರಿಂದ ಆರಂಭವಾಗಲಿರುವ ಈ ಸರಣಿಯ ನಂತರ ಭಾರತ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಬೇಕಾಗಿದೆ. ಈ ಟೂರ್ನಿಯಲ್ಲಿ ಭಾರತ ಆಗಸ್ಟ್ 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಭಾರತಕ್ಕೆ ರಾಹುಲ್ ಫಾರ್ಮ್​ ಮುಖ್ಯವಾಗಿದೆ ಏಕೆಂದರೆ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

Published On - 5:35 pm, Sat, 20 August 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು