AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಭಾರತಕ್ಕೆ ಸಿಹಿ, ಪಾಕಿಸ್ತಾನಕ್ಕೆ ಕಹಿ; ಏಷ್ಯಾಕಪ್​ನಿಂದ ಬಾಬರ್ ತಂಡದ ಸ್ಟಾರ್ ಬೌಲರ್ ಔಟ್..!

Asia Cup 2022: ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಗಾಯದ ಸಮಸ್ಯೆಯಿಂದಾಗಿ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

Asia Cup 2022: ಭಾರತಕ್ಕೆ ಸಿಹಿ, ಪಾಕಿಸ್ತಾನಕ್ಕೆ ಕಹಿ; ಏಷ್ಯಾಕಪ್​ನಿಂದ ಬಾಬರ್ ತಂಡದ ಸ್ಟಾರ್ ಬೌಲರ್ ಔಟ್..!
TV9 Web
| Updated By: ಪೃಥ್ವಿಶಂಕರ|

Updated on:Aug 20, 2022 | 5:39 PM

Share

ಏಷ್ಯಾಕಪ್ 2022 (Asia Cup 2022) ಪ್ರಾರಂಭವಾಗುವ ಒಂದು ವಾರದ ಮೊದಲು, ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ಅತಿದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ (Shaheen Shah Afridi) ಗಾಯದ ಸಮಸ್ಯೆಯಿಂದಾಗಿ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಶನಿವಾರ ಆಗಸ್ಟ್ 20 ರಂದು ಈ ಮಾಹಿತಿ ನೀಡಿದೆ. ಮೊಣಕಾಲಿನ ಗಾಯದಿಂದಾಗಿ ಅಫ್ರಿದಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಪಾಕಿಸ್ತಾನಿ ಮಂಡಳಿ ಮಾಹಿತಿಯಲ್ಲಿ ತಿಳಿಸಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಆಗಸ್ಟ್ 28 ರಂದು ಭಾರತವನ್ನು ಎದುರಿಸಬೇಕಾಗಿದೆ.

4 ರಿಂದ 6 ವಾರಗಳವರೆಗೆ ವಿಶ್ರಾಂತಿ ಪಡೆಯಲು ಸಲಹೆ

ಏಷ್ಯಾಕಪ್‌ನಲ್ಲಿ ಶಾಹೀನ್ ಶಾ ಆಫ್ರಿದಿ ಆಡದಿರುವುದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿದೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಆಫ್ರಿದಿಗೆ ವೈದ್ಯರು 4 ರಿಂದ 6 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಈ ಎಡಗೈ ವೇಗದ ಬೌಲರ್ ಏಷ್ಯಾಕಪ್ ಮತ್ತು ಇಂಗ್ಲೆಂಡ್ ವಿರುದ್ಧದ ತವರು ಸರಣಿಯನ್ನು ಕಳೆದುಕೊಳ್ಳಲಿದ್ದಾರೆ. ಆದರೆ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ತ್ರಿಕೋನ ಸರಣಿಯಲ್ಲಿ ಆಡುವ ನಿರೀಕ್ಷೆ ಇದೆ. ಆ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಕಾಣಿಸಿಕೊಳ್ಳಲಿದೆ.

ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶಾಹೀನ್ ಶಾ ಅಫ್ರಿದಿ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಪಿಸಿಬಿಯ ಮುಖ್ಯ ವೈದ್ಯಾಧಿಕಾರಿ ಡಾ. ನಜೀಬುಲ್ಲಾ ಮಾತನಾಡಿ, “ನಾನು ಶಾಹೀನ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಈ ಸುದ್ದಿ ಕೇಳಿ ನಿರಾಶೆಗೊಂಡರು. ಅವನೊಬ್ಬ ವೀರ ಯುವಕ, ಅವರು ದೇಶಕ್ಕೆ ಸೇವೆ ಸಲ್ಲಿಸಲು ಬಲವಾದ ಪುನರಾಗಮನವನ್ನು ಮಾಡುತ್ತಾರೆ. ಅವನು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಅಕ್ಟೋಬರ್ ತಿಂಗಳಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ನಿರೀಕ್ಷೆ ಇದೆ ಎಂದಿದ್ದಾರೆ.

ಪಾಕ್ ಮಂಡಳಿ ಮೇಲೆ ಪ್ರಶ್ನೆಗಳ ಸುರಿಮಳೆ

ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಎಡಗೈ ಸ್ಟಾರ್ ಯುವ ವೇಗದ ಬೌಲರ್ ಶಾಹೀನ್ ಅಫ್ರಿದಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಎರಡನೇ ಟೆಸ್ಟ್‌ನಲ್ಲೂ ಆಡಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಅವರು ಇತ್ತೀಚೆಗೆ ತಂಡದ ತರಬೇತಿ ಶಿಬಿರದ ಭಾಗವಾಗಿರುವುದರಿಂದ ಶಾಹೀನ್ ಅವರ ಗಾಯದ ಸ್ಥಿತಿಯನ್ನು ಸರಿಯಾಗಿ ತಿಳಿದಿರಲಿಲ್ಲವೇ ಎಂಬ ಪ್ರಶ್ನೆಗಳನ್ನು ಪಾಕಿಸ್ತಾನಿ ತಂಡದ ನಿರ್ವಹಣೆಯ ಮೇಲೆ ಎತ್ತಲಾಗುತ್ತಿದೆ. ಅಲ್ಲದೆ, ಅವರು ಪ್ರಸ್ತುತ ಪಾಕಿಸ್ತಾನಿ ತಂಡದೊಂದಿಗೆ ನೆದರ್ಲ್ಯಾಂಡ್ಸ್ನಲ್ಲಿದ್ದಾರೆ, ಅಲ್ಲಿ ತಂಡವು ODI ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲು, ನಾಯಕ ಬಾಬರ್ ಅಜಮ್ ಕೂಡ ಶಾಹೀನ್ ಅವರನ್ನು ಬಹುಶಃ ಈ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಕಣಕ್ಕಿಳಿಸಬಹುದು ಎಂದು ಹೇಳಿದ್ದರು.

ಟೀಮ್ ಇಂಡಿಯಾಗೆ ರಿಲೀಫ್

ಕಳೆದ ವರ್ಷ T20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಭಾರತದ ಬ್ಯಾಟಿಂಗ್ ಬೆನ್ನೇಲುಬು ಮುರಿದಿದ್ದರು. ಹೀಗಾಗಿ ಶಾಹೀನ್ ಅವರ ಈ ಅಲಭ್ಯತೆ ಭಾರತ ತಂಡಕ್ಕೆ ಸ್ವಲ್ಪ ಲಾಭವನ್ನು ನೀಡುತ್ತದೆ. ಅಂದಿನ ಪಂದ್ಯದಲ್ಲಿ ಶಾಹಿನ್ ಮೊದಲ ಎರಡು ಓವರ್‌ಗಳಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್‌ಗಳನ್ನು ಪಡೆದರೆ, ನಂತರ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಆದರೆ, ಒಂದೆಡೆ ಶಾಹೀನ್ ಹಾಗೂ ಮತ್ತೊಂದೆಡೆ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ನಿರ್ಗಮನದಿಂದಾಗಿ ಭಾರತ-ಪಾಕಿಸ್ತಾನ ಪಂದ್ಯದ ರೋಚಕತೆ ಕೊಂಚ ಕಳೆಗುಂದಿದೆ.

Published On - 4:28 pm, Sat, 20 August 22