Virat Kohli: 1000 ದಿನಗಳು ಪೂರ್ಣ; ಪಾಕ್ ವಿರುದ್ಧವಾದರೂ ಕೊಹ್ಲಿ ಬ್ಯಾಟ್ ಆಗಸದತ್ತ ಮುಖ ಮಾಡುತ್ತಾ?

Virat Kohli: ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕವನ್ನು 23 ನವೆಂಬರ್ 2019 ರಂದು ಬಾರಿಸಿದ್ದರು. ಆದರೆ ಆ ಬಳಿಕ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದ ಕೊಹ್ಲಿಗೆ ಶತಕ ಬಾರಿಸಲಾಗಲೇ ಇಲ್ಲ.

Virat Kohli: 1000 ದಿನಗಳು ಪೂರ್ಣ; ಪಾಕ್ ವಿರುದ್ಧವಾದರೂ ಕೊಹ್ಲಿ ಬ್ಯಾಟ್ ಆಗಸದತ್ತ ಮುಖ ಮಾಡುತ್ತಾ?
Virat Kohli
Follow us
| Updated By: ಪೃಥ್ವಿಶಂಕರ

Updated on: Aug 19, 2022 | 7:06 PM

ಅಸಂಖ್ಯಾತ ಮನಸ್ಸುಗಳು ಕಾಯುತ್ತಿರುವ ಆ ಒಂದು ಕ್ಷಣಕ್ಕೆ ಇಂದಿಗೆ 1000 ದಿನಗಳು ಪೂರೈಸಿವೆ. ಯಾರು ಕ್ರಿಕೆಟ್ ಅಂಗಳದಲ್ಲಿ ಬ್ಯಾಟಿಂಗ್​ಗೆ ಇಳಿದರೆ ಆತನ ಬ್ಯಾಟ್ ಆಗಸ ನೋಡದೆ ಪೆವಿಲಿಯನ್​ಗೆ ಸೇರುವುದಿಲ್ಲ ಎಂಬ ಮಾತಿತ್ತೋ, ಅಂತಹ ಮಾತುಗಳಿಗೆ ಬ್ರೇಕ್ ಬಿದ್ದು, ಸಾವಿರ ದಿನಗಳು ಪೂರ್ಣಗೊಂಡಿವೆ. ವಾಸ್ತವವಾಗಿ ವಿರಾಟ್ ಕೊಹ್ಲಿ ಅವರ 71 ನೇ ಶತಕಕ್ಕಾಗಿ ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟ್ಸ್‌ಮನ್ ಕೊಹ್ಲಿ (Virat Kohli) ಅವರ ಶತಕ ಪೂರೈಸಿ 1000 ದಿನಗಳು ಪೂರ್ಣಗೊಂಡಿವೆ. ಶುಕ್ರವಾರ ಆಗಸ್ಟ್ 19 ರಂದು, ಕೊಹ್ಲಿಯ ಶತಕಗಳ ಬರ 1000 ದಿನಗಳನ್ನು ಪೂರೈಸಿತು. ಅಂದರೆ ಸುಮಾರು ಮೂರು ವರ್ಷಗಳು ಪೂರ್ಣಗೊಂಡಿವೆ.

ಕಳೆದ ದಶಕದಲ್ಲಿ ತಮ್ಮ ಇಚ್ಛೆಯ ಪ್ರಕಾರ ಯಾವಾಗ ಬೇಕಾದರೂ ಶತಕ ಬಾರಿಸುತ್ತಿದ್ದ ವಿರಾಟ್ ಕೊಹ್ಲಿ ತಮ್ಮ 70ನೇ ಶತಕವನ್ನು ತಲುಪಲು ಸುಮಾರು 10 ವರ್ಷಗಳನ್ನು ತೆಗೆದುಕೊಂಡರು. ಈ ಸಮಯದಲ್ಲಿ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಹೊರತುಪಡಿಸಿ, ಕೊಹ್ಲಿ ಟೆಸ್ಟ್‌ನಲ್ಲಿ 27 ಶತಕಗಳನ್ನು ಮತ್ತು ಏಕದಿನದಲ್ಲಿ 43 ಶತಕಗಳನ್ನು ಪೂರೈಸಿದ್ದರು. ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳನ್ನು ಮುರಿಯಲು ಅವರು ಕೇವಲ 7 ಶತಕಗಳ ದೂರದಲ್ಲಿದ್ದಾರೆ. ಈ ಬರ ಶುರುವಾಗುವ ಮುನ್ನ ಕೊಹ್ಲಿ ಈ 7 ಶತಕಗಳನ್ನು ಒಂದೋ ಹೆಚ್ಚೆಂದರೆ ಎರಡು ವರ್ಷಗಳಲ್ಲಿ ಕಲೆಹಾಕುತ್ತಿದ್ದರು ಆದರೆ ಸದ್ಯದ ಪರಿಸ್ಥಿತಿಯೇ ಬೇರೆ.

ಹಗಲು-ರಾತ್ರಿ ಟೆಸ್ಟ್‌ನಲ್ಲಿ ಬಂದಿತ್ತು ಶತಕ

ಇದನ್ನೂ ಓದಿ
Image
Virat Kohli: 12 ರನ್​ಗಳಿಂದ 12 ಸಾವಿರ ರನ್! ಕೊಹ್ಲಿಯ ಏಕದಿನ ವೃತ್ತಿ ಬದುಕು ಆರಂಭವಾಗಿ 14 ವರ್ಷ ಭರ್ತಿ
Image
Virat Kohli: ಏಷ್ಯಾಕಪ್‌ಗಾಗಿ ಪೂರ್ವ ತಯಾರಿ ಆರಂಭಿಸಿದ ಕೊಹ್ಲಿ; ವಿಡಿಯೋ ನೋಡಿ
Image
IND vs ZIM: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಧವನ್‌ಗೆ ನಾಯಕತ್ವ, ಕೊಹ್ಲಿ- ರಾಹುಲ್​ಗೆ ಮತ್ತೆ ವಿಶ್ರಾಂತಿ

ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕವನ್ನು 23 ನವೆಂಬರ್ 2019 ರಂದು ಬಾರಿಸಿದ್ದರು. ಆದರೆ ಆ ಬಳಿಕ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದ ಕೊಹ್ಲಿಗೆ ಶತಕ ಬಾರಿಸಲಾಗಲೇ ಇಲ್ಲ. ವಿರಾಟ್ ತಮ್ಮ ಕೊನೆಯ ಶತಕವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗಳಿಸಿದ್ದರು. ಈ ಶತಕವು ಕೂಡ ಕೊಹ್ಲಿಗೆ ವಿಶೇಷವಾಗಿತ್ತು ಏಕೆಂದರೆ ಟೀಮ್ ಇಂಡಿಯಾ ಗುಲಾಬಿ ಚೆಂಡಿನೊಂದಿಗೆ ಮತ್ತು ಮೊದಲ ಬಾರಿಗೆ ಡೇ-ನೈಟ್ ಟೆಸ್ಟ್‌ನಲ್ಲಿ ಆಡುತ್ತಿತ್ತು. ಈ ಮೂಲಕ ಡೇ-ನೈಟ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.

ಅನೇಕ ಬಾರಿ ಶತಕ ವಂಚಿತ

ಆ ದಿನದಿಂದ ಕೊಹ್ಲಿಗೆ ಒಮ್ಮೆಯೂ ಶತಕ ಸಿಡಿಸಲಾಗಲಿಲ್ಲ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಅವರು ಶತಕದ ಸಮೀಪವೂ ಬಂದರು. ಈ ಶತಕದ ನಂತರ ಕೇವಲ 2-3 ವಾರಗಳ ನಂತರ ಅವರು ವೆಸ್ಟ್ ಇಂಡೀಸ್ ವಿರುದ್ಧದ T20 ಪಂದ್ಯದಲ್ಲಿ ಅಜೇಯ 94 ರನ್ ಗಳಿಸಿದರು. ನಂತರದ ತಿಂಗಳುಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ 80 ಕ್ಕೂ ಹೆಚ್ಚು ರನ್​ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಅದೇ ಸಮಯದಲ್ಲಿ, ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ 80 ಕ್ಕಿಂತ ಹೆಚ್ಚು ರನ್‌ಗಳ ಕೆಲವು ಇನ್ನಿಂಗ್ಸ್‌ಗಳನ್ನು ಆಡಿದರು. ಟೆಸ್ಟ್‌ನಲ್ಲಿ ಈ ಶತಕದ ನಂತರ, ಅವರು ಒಮ್ಮೆಯೂ 80 ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಕೇವಲ ಮೂರು ಬಾರಿ 70 ರಿಂದ 80 ರ ನಡುವೆ ಸ್ಕೋರ್ ಮಾಡಿದರು. ಆದರೆ ಈ ಇನ್ನಿಂಗ್ಸ್‌ಗಳನ್ನು ಒಮ್ಮೆಯೂ ಸಹ ಶತಕಕ್ಕೆ ಪರಿವರ್ತಿಸಲಾಗಲಿಲ್ಲ

ಪಾಕ್ ವಿರುದ್ಧ ಅವಕಾಶ

ಸದ್ಯ ವಿರಾಮದಲ್ಲಿರುವ ಕೊಹ್ಲಿ ಈಗ ಏಷ್ಯಾಕಪ್‌ನೊಂದಿಗೆ ಮರಳಲಿದ್ದಾರೆ. ಭಾರತವು ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಅಲ್ಲದೆ ಪಾಕಿಸ್ತಾನದ ವಿರುದ್ಧ ಕೊಹ್ಲಿಯ ದಾಖಲೆ ಯಾವಾಗಲೂ ಉತ್ತಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ಪಾಕಿಸ್ತಾನದ ಮೇಲೆ 1000 ದಿನಗಳ ಕೋಪವನ್ನು ಹೊರಹಾಕುವ ನಿರೀಕ್ಷೆ ಇದೆ. ಕೊಹ್ಲಿ ಶತಕ ಬಾರಿಸುವುದರ ಜೊತೆಗೆ ಟೀಂ ಇಂಡಿಯಾಗೆ ಜಯವನ್ನು ನೀಡಲಿ ಎಂದು ಭಾರತೀಯ ಅಭಿಮಾನಿಗಳು ಹಾರೈಸುತ್ತಿದ್ದಾರೆ.