IND vs ZIM: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಧವನ್‌ಗೆ ನಾಯಕತ್ವ, ಕೊಹ್ಲಿ- ರಾಹುಲ್​ಗೆ ಮತ್ತೆ ವಿಶ್ರಾಂತಿ

IND vs ZIM: ನಿರೀಕ್ಷೆಯಂತೆ, ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಎಲ್ಲಾ ಊಹಾಪೋಹಗಳ ಹೊರತಾಗಿಯೂ, ವಿರಾಟ್ ಕೊಹ್ಲಿಯನ್ನೂ ಆಯ್ಕೆ ಮಾಡಲಾಗಿಲ್ಲ.

IND vs ZIM: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಧವನ್‌ಗೆ ನಾಯಕತ್ವ, ಕೊಹ್ಲಿ- ರಾಹುಲ್​ಗೆ ಮತ್ತೆ ವಿಶ್ರಾಂತಿ
Follow us
| Updated By: ಪೃಥ್ವಿಶಂಕರ

Updated on:Jul 30, 2022 | 8:59 PM

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು (Indian cricket team) ಪ್ರಕಟಿಸಲಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಶಿಖರ್ ಧವನ್ (Shikhar Dhawan) ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಲಾಗಿದೆ. ಧವನ್ ನಾಯಕತ್ವದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 3-0 ಐತಿಹಾಸಿಕ ಜಯವನ್ನು ಸಾಧಿಸಿದ ನಂತರ ಜಿಂಬಾಬ್ವೆಯಲ್ಲಿ ಅದೇ ಪ್ರದರ್ಶನವನ್ನು ಪುನರಾವರ್ತಿಸಲು ಯುವ ಬ್ರಿಗೇಡ್ ಪ್ರಯತ್ನಿಸಲಿದೆ. ನಿರೀಕ್ಷೆಯಂತೆ, ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಎಲ್ಲಾ ಊಹಾಪೋಹಗಳ ಹೊರತಾಗಿಯೂ, ವಿರಾಟ್ ಕೊಹ್ಲಿಯನ್ನೂ (Virat Kohli) ಆಯ್ಕೆ ಮಾಡಲಾಗಿಲ್ಲ.

ಶನಿವಾರ ಜುಲೈ 30 ರಂದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಪ್ರವಾಸಕ್ಕಾಗಿ ತಂಡವನ್ನು ಪ್ರಕಟಿಸಿತು. ಈ ಆಯ್ಕೆಯಲ್ಲಿ ದೊಡ್ಡ ಸುದ್ದಿಯೆಂದರೆ, ದೀರ್ಘಕಾಲದವರೆಗೆ ಗಾಯದಿಂದ ಹೊರಗುಳಿದಿದ್ದ ಇಬ್ಬರು ಆಟಗಾರರು ತಂಡಕ್ಕೆ ಮರಳಿದ್ದಾರೆ. ಆಫ್ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಮಧ್ಯಮ ವೇಗಿ ದೀಪಕ್ ಚಹಾರ್ ದೀರ್ಘಕಾಲದ ಗಾಯದ ನಂತರ ಅಂತಿಮವಾಗಿ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ ರಾಹುಲ್ ತ್ರಿಪಾಠಿ ಕೂಡ ಮರು ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ
Image
CWG 2022: ಕೇವಲ ಒಂದೇ ಒಂದು ಕೆ.ಜಿ ಭಾರ ಪದಕದ ಬಣ್ಣವನ್ನೇ ಬದಲಾಯಿಸಿತು..!
Image
CWG 2022: ಚಿನ್ನ ಜಸ್ಟ್ ಮಿಸ್; ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿಯೊಂದಿಗೆ ಭಾರತದ ಖಾತೆ ತೆರೆದ ಸಂಕೇತ್ ಸರ್ಗರ್..!
Image
CWG 2022: ಭಾರತದೆದುರು ಆಡುವ ಮುನ್ನವೇ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ರುಚಿ ತೋರಿದ ಕ್ರಿಕೆಟ್ ಶಿಶು ಬಾರ್ಬಡೋಸ್

ಈ ಪ್ರವಾಸಕ್ಕೆ ತಂಡದ ಆಯ್ಕೆಗೆ ಸಂಬಂಧಿಸಿದಂತೆ ದೊಡ್ಡ ಊಹಾಪೋಹಗಳಿದಿದ್ದು ವಿರಾಟ್ ಕೊಹ್ಲಿ ಹೆಸರಿನ ಬಗ್ಗೆ. ಈ ಪ್ರವಾಸದಲ್ಲಿ ಕೊಹ್ಲಿ ತಂಡದೊಂದಿಗೆ ಬರಬೇಕು ಮತ್ತು ಫಾರ್ಮ್‌ಗೆ ಮರಳಲು ಪ್ರಯತ್ನಿಸಬೇಕು ಎಂದು ಆಯ್ಕೆದಾರರು ಬಯಸಿದ್ದರು ಎಂದು ವರದಿಗಳಿವೆ. ಆದರೆ ಇದು ಆಗಲಿಲ್ಲ. ಈ ಪ್ರವಾಸದಲ್ಲಿ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡ್ ಪ್ರವಾಸದ ನಂತರ ವೆಸ್ಟ್ ಇಂಡೀಸ್‌ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದರು. ಹೀಗಿರುವಾಗ ಒಂದು ತಿಂಗಳ ನಂತರ ಆರಂಭವಾಗಲಿರುವ ಏಷ್ಯಾಕಪ್‌ಗೆ ಅವರು ಆಯ್ಕೆಯಾಗುತ್ತಾರೋ ಇಲ್ಲವೋ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ರಾಹುಲ್ ಹೆಸರೇ ಇಲ್ಲ

ಅದೇ ಸಮಯದಲ್ಲಿ, ಈ ತಂಡದಿಂದ ಕಾಣೆಯಾದ ಒಂದು ಆಘಾತಕಾರಿ ಹೆಸರು ಕೆಎಲ್ ರಾಹುಲ್. ಟೀಂ ಇಂಡಿಯಾದ ಉಪನಾಯಕ ರಾಹುಲ್ ಗಾಯದ ಸಮಸ್ಯೆಯಿಂದ ಐಪಿಎಲ್ ನಂತರ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ. ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ 20 ಸರಣಿಯಲ್ಲಿ ಭಾಗವಹಿಸಬೇಕಿತ್ತು, ಆದರೆ ಕೊರೊನಾ ಸೋಂಕಿನಿಂದ ಅವರು ಅದರಿಂದ ಹೊರಗುಳಿದಿದ್ದರು. ಇದೀಗ ಅವರಿಗೆ ಸ್ವಲ್ಪ ವಿಶ್ರಾಂತಿ ನೀಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ.

ಭಾರತ ತಂಡ

ಶಿಖರ್ ಧವನ್ (ನಾಯಕ), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹಾರ್.

Published On - 8:32 pm, Sat, 30 July 22