CWG 2022: ಭಾರತದೆದುರು ಆಡುವ ಮುನ್ನವೇ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ರುಚಿ ತೋರಿದ ಕ್ರಿಕೆಟ್ ಶಿಶು ಬಾರ್ಬಡೋಸ್
CWG 2022: ಗುಂಪು ಹಂತದಿಂದ ಮುಂದಿನ ಸುತ್ತಿಗೆ ಅಂದರೆ ಸೆಮಿಫೈನಲ್‌ಗೆ ತಲುಪಲು, ತಂಡಗಳು ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಬೇಕು. ಆದರೆ ಗುಂಪಿನಲ್ಲಿ ದುರ್ಬಲ ತಂಡದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಿದೆ.
ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಆರಂಭ ಅಷ್ಟು ಉತ್ತಮವಾಗಿಲ್ಲ. ಇದನ್ನು ನಾವು ಏಕೆ ಹೇಳುತ್ತಿದ್ದೇವೆ ಎಂದರೆ, ಇದೀಗ ಅಂತರರಾಷ್ಟ್ರೀಯ ಪಾದಾರ್ಪಣೆ ಮಾಡಿದ ಬಾರ್ಬಡೋಸ್ ತಂಡ ಪಾಕಿಸ್ತಾನಕ್ಕೆ ಸೋಲಿನ ಆಘಾತ ನೀಡಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಭಾರತ ತಂಡ ಏನು ಮಾಡಲಿದೆ ಎಂಬುದನ್ನು ಊಹಿಸಿಕೊಳ್ಳಿ. ಅನನುಭವಿ ತಂಡವನ್ನು ಸೋಲಿಸಲು ಸಾಧ್ಯವಾಗದ ಹರ್ಮನ್‌ಪ್ರೀತ್ (Harmanpreet) ಮತ್ತು ತಂಡ ಪಾಕಿಸ್ತಾನಕ್ಕೆ ಇನ್ನೆಂತ ಸೋಲನ್ನು ನೀಡಬಹುದು ಉಂಬುದನ್ನು ಈಗಲೇ ಊಹಿಸಿಕೊಳ್ಳಿ.
ಗುಂಪು ಹಂತದಿಂದ ಮುಂದಿನ ಸುತ್ತಿಗೆ ಅಂದರೆ ಸೆಮಿಫೈನಲ್‌ಗೆ ತಲುಪಲು, ತಂಡಗಳು ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಬೇಕು. ಆದರೆ ಗುಂಪಿನಲ್ಲಿ ದುರ್ಬಲ ತಂಡದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಿದೆ. ಈಗ ಪಾಕಿಸ್ತಾನಕ್ಕೆ ಮುಂದಿನ ಎರಡು ಪಂದ್ಯಗಳಲ್ಲಿ, ಒಂದು ಭಾರತ ಮತ್ತು ಇನ್ನೊಂದು ಆಸ್ಟ್ರೇಲಿಯಾ ಎದುರಾಳಿಯಾಗಿದೆ. ಹೀಗಾಗಿ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಕ್ಕೆ ಗೆಲುವು ಕಷ್ಟಕರವಾಗಿದೆ. ಏಕೆಂದರೆ ಈ ಎರಡೂ ತಂಡಗಳ ದಾಖಲೆಯು ಪಾಕಿಸ್ತಾನವನ್ನು ಸೋಲಿಸುವಲ್ಲಿ ಉತ್ತಮವಾಗಿದೆ.
ಬಾರ್ಬಡೋಸ್ ಅಚ್ಚರಿ ಪ್ರದರ್ಶನ
ಈಗ ಪಂದ್ಯಕ್ಕೆ ಬರೋಣ, ತಂಡ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅನನುಭವಿ ತಂಡದ ವಿರುದ್ಧ ಪಾಕಿಸ್ತಾನದ ಗೆಲುವು ಬಹುತೇಕ ಖಚಿತವೆಂದು ಪರಿಗಣಿಸಲಾಗಿತ್ತು. ಆದರೆ ಬಾರ್ಬಡೋಸ್ನ ಮಹಿಳಾ ತಂಡ ನಿರೀಕ್ಷೆಗಳನ್ನು ರಿವರ್ಸ್ ಮಾಡುವ ಮೂಲಕ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದರು.
ಪಾಕಿಸ್ತಾನಕ್ಕೆ 145 ರನ್ ಗುರಿ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾರ್ಬಡೋಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 144 ರನ್ ಗಳಿಸಿತು. ಬಾರ್ಬಡೋಸ್ ತಂಡವು ಸಹಜವಾಗಿಯೇ ಹೊಸದು, ಆದರೆ ವೆಸ್ಟ್ ಇಂಡೀಸ್ ಮಹಿಳಾ ತಂಡವನ್ನು ಪ್ರತಿನಿಧಿಸುವ ಆಟಗಾರರಲ್ಲಿ ಒಂದಕ್ಕಿಂತ ಹೆಚ್ಚು ಧೀಮಂತರನ್ನು ಹೊಂದಿತ್ತು. ಬಾರ್ಬಡೋಸ್ ಡೇಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್, ಕಿಸ್ಸಿಯಾ ನೈಟ್, ಅಲಿಸ್ಸಾ ಅಲಿನ್ರಂತಹ ಸ್ಪೋಟಕ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡಿದೆ.
ಈ ಎಲ್ಲದರಲ್ಲೂ ಡಾಟಿನ್ ಅವರ ಬ್ಯಾಟ್ ಮೌನವಾಗಿತ್ತು, ಆದರೆ ಹೇಲಿ ಮ್ಯಾಥ್ಯೂಸ್ ಮತ್ತು ಕಿಸ್ಸಿಯಾ ನೈಟ್ ಪ್ರಬಲ ಅರ್ಧಶತಕಗಳನ್ನು ಗಳಿಸಿದರು. ಬಾರ್ಬಡೋಸ್ ತಂಡದ ನಾಯಕಿ ಮ್ಯಾಥ್ಯೂಸ್ 51 ರನ್ ಗಳಿಸಿದರೆ, ನೈಟ್ ಅಜೇಯ 62 ರನ್ ಗಳಿಸಿದರು. ಈ ಮೂಲಕ ಬಾರ್ಬಡೋಸ್ ಮಹಿಳೆಯರು ಪಾಕಿಸ್ತಾನಕ್ಕೆ 145 ರನ್ ಟಾರ್ಗೆಟ್ ನೀಡಿದರು.
ಪಾಕಿಸ್ತಾನದ ಬ್ಯಾಟಿಂಗ್ ಮುಳುಗಿತು
ಗುರಿ ಬೆನ್ನಟ್ಟಿದ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡ ನಿದಾ ದಾರ್ ಅವರ 31 ಎಸೆತಗಳಲ್ಲಿ 50 ರನ್ ಗಳಿಸಿದ ನಂತರವೂ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 129 ರನ್ ಗಳಿಸಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟ್ಸ್‌ಮನ್‌ಗಳು ಬ್ಯಾಟ್ ಮಾಡಿದ ರೀತಿ ಅವರು ಟೆಸ್ಟ್ ಪಂದ್ಯ ಆಡುತ್ತಿರುವಂತೆ ಕಾಣುತ್ತಿದ್ದ ಕಾರಣ ಪಾಕಿಸ್ತಾನದ ಸೋಲು ಕೂಡ ಖಚಿತವಾಗಿತ್ತು.
ಪಾಕ್ ನಾಯಕಿ ಬಿಸ್ಮಹ್ ಮಹ್ರೂಫ್ 28 ಎಸೆತಗಳಲ್ಲಿ 12 ರನ್ ಗಳಿಸಿದರು. ಆಲಿಯಾ ರಿಯಾಜ್ 24 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದರು. ಮುನೀಬಾ ಅಲಿ 19 ಎಸೆತಗಳಲ್ಲಿ 17 ರನ್ ಗಳಿಸಿದರೆ, ಒಮೈನಾ ಸೊಹೈಲ್ 14 ಎಸೆತಗಳಲ್ಲಿ 10 ರನ್ ಗಳಿಸಿದರು. ಅಂದರೆ, ನಿದಾ ದಾರ್ ಹೊರತುಪಡಿಸಿ, ತಂಡದ ಪ್ರತಿಯೊಬ್ಬ ದೊಡ್ಡ ಬ್ಯಾಟರ್ ರನ್ ಗಳಿಸಲು ಹೆಚ್ಚು ಎಸೆತಗಳನ್ನು ಆಡಿದರು. ಹೀಗಾಗಿ ಪಾಕ್ ತಂಡಕ್ಕೆ ಗೆಲುವಿನ ದಡ ಮುಟ್ಟಲು ಸಾಧ್ಯವಾಗಲಿಲ್ಲ.
Published On - 2:39 pm, Sat, 30 July 22