Sourav Ganguly: ಧೋನಿ, ಕೊಹ್ಲಿ, ರೋಹಿತ್.. ಈ ಮೂವರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್? ದಾದಾ ನೀಡಿದ ಉತ್ತರವೇನು ಗೊತ್ತಾ?

Sourav Ganguly: ಹಲವು ವರ್ಷಗಳಿಂದ ಭಾರತ ಶ್ರೇಷ್ಠ ನಾಯಕರನ್ನು ನಿರ್ಮಿಸಿದೆ. ಇದರಲ್ಲಿ ಎಲ್ಲರೂ ವಿಭಿನ್ನರು. ನಾನು ನಾಯಕರನ್ನು ಹೋಲಿಸುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ದಾರಿ ಇರುತ್ತದೆ.

Sourav Ganguly: ಧೋನಿ, ಕೊಹ್ಲಿ, ರೋಹಿತ್.. ಈ ಮೂವರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್? ದಾದಾ ನೀಡಿದ ಉತ್ತರವೇನು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Aug 18, 2022 | 3:22 PM

ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಜಿಂಬಾಬ್ವೆ (India vs Zimbabwe) ಪ್ರವಾಸ ಕೈಗೊಂಡಿದ್ದು, ಇಂದು ಮೊದಲ ಏಕದಿನ ಪಂದ್ಯ ಆರಂಭವಾಗಿದೆ. ಈ ಸರಣಿಗೆ ಟೀಂ ಇಂಡಿಯಾದ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಈ ಮಧ್ಯೆ ಬಿಸಿಸಿಐ (BCCI) ಮುಖ್ಯಸ್ಥ ಸೌರವ್ ಗಂಗೂಲಿ (Sourav Ganguly), ಟೀಂ ಇಂಡಿಯಾದ ಮೂವರು ಲೆಜೆಂಡರಿ ನಾಯಕರ ಬಗ್ಗೆ ಹೇಳಿಕೆ ನೀಡುವ ಮೂಲಕ ಮೂವರಲ್ಲಿರುವ ವಿಶೇಷ ಗುಣಗಳನ್ನು ಬಹಿರಂಗಪಡಿಸಿದ್ದಾರೆ.

ಮೊದಲನೆಯಾದಾಗಿ ಗಂಗೂಲಿ, ರೋಹಿತ್ ಶರ್ಮಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸುವ ಮೊದಲು ನಾವು ಅವರಿಗೆ ಸಮಯ ನೀಡಬೇಕು. ಆಗ ಮಾತ್ರ ಸರಿಯಾದ ಫಲಿತಾಂಶ ನೀಡಲು ಸಾಧ್ಯ ಎಂದಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ಅವರನ್ನು ತುಂಬಾ ತಾಳ್ಮೆಯ ನಾಯಕ ಎಂದು ದಾದಾ ಬಣ್ಣಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರವಾಗಿ ದಾಖಲೆಯ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ರೋಹಿತ್ ತಮ್ಮ ತಾಳ್ಮೆಯ ಗುಣದಿಂದಲೇ ಟೀಂ ಇಂಡಿಯಾವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅಲ್ಲದೆ 2021ರ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಏಳು ನಾಯಕರನ್ನು ಬದಲಾಯಿಸಿರುವುದು ಗೊತ್ತೇ ಇದೆ.

ಧೋನಿ, ಕೊಹ್ಲಿ ಮತ್ತು ಶರ್ಮಾ.. ಈ ಮೂವರಲ್ಲಿ ಯಾರು ಉತ್ತಮ ನಾಯಕ?

ಇದನ್ನೂ ಓದಿ
Image
BCCI: ನೋ ವೇ ಚಾನ್ಸೇ ಇಲ್ಲ; ಧೋನಿ ಹಾಗೂ ಸಿಎಸ್​ಕೆ ಕನಸಿಗೆ ಬ್ರೇಕ್ ಹಾಕಿದ ಬಿಸಿಸಿಐ
Image
Breaking News: ಆರ್​ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಹ್ಯಾಕ್! ವಿಡಿಯೋಗಳೆಲ್ಲವೂ ಡಿಲೀಟ್
Image
IPL: ಮಹಿಳಾ ಐಪಿಎಲ್​ಗೆ ಮುಹೂರ್ತ ಫಿಕ್ಸ್; ಪಂದ್ಯಾವಳಿ ಯಾವಾಗ ಆರಂಭ ಗೊತ್ತಾ?

‘ಧೋನಿ, ಕೊಹ್ಲಿ ಮತ್ತು ಶರ್ಮಾ ಅವರಲ್ಲಿ ಉತ್ತಮ ನಾಯಕ ಯಾರು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗೂಲಿ, ಹಲವು ವರ್ಷಗಳಿಂದ ಭಾರತ ಶ್ರೇಷ್ಠ ನಾಯಕರನ್ನು ನಿರ್ಮಿಸಿದೆ. ಇದರಲ್ಲಿ ಎಲ್ಲರೂ ವಿಭಿನ್ನರು. ನಾನು ನಾಯಕರನ್ನು ಹೋಲಿಸುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ದಾರಿ ಇರುತ್ತದೆ ಎಂದ ದಾದಾ ಈ ಮೂವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ಸಹ ಹಂಚಿಕೊಂಡರು.

ಎಂಎಸ್ ಧೋನಿ: ಧೋನಿ ತಂಡವನ್ನು ಅದ್ಭುತವಾಗಿಸಿದರು. ಭಾರತ ಮಾತ್ರವಲ್ಲದೆ ಅವರ ಫ್ರಾಂಚೈಸಿ (ಚೆನ್ನೈ ಸೂಪರ್ ಕಿಂಗ್ಸ್) ಕೂಡ ಅವರ ನಾಯಕತ್ವದಲ್ಲಿ ದಾಖಲೆಯ ಗೆಲುವು ಸಾಧಿಸಿದೆ.

ವಿರಾಟ್ ಕೊಹ್ಲಿ: ವಿರಾಟ್ ದಾಖಲೆಯೂ ಅದ್ಭುತವಾಗಿದೆ. ಕೊಹ್ಲಿಗೆ ಒಂದು ರೀತಿಯ ವಿಭಿನ್ನ ನಾಯಕತ್ವದ ಗುಣಗಳಿದ್ದು, ಅವರು ಉತ್ಸಾಹದಿಂದ ತಂಡವನ್ನು ಮುನ್ನಡೆಸುವ ರನ್ ಮಷಿನ್ ಎಂದಿದ್ದಾರೆ.

ರೋಹಿತ್ ಶರ್ಮಾ: ಸ್ವಲ್ಪ ಶಾಂತ, ಹೆಚ್ಚು ಆಕ್ರಮಣಕಾರಿ ಅಲ್ಲ ಆದರೆ ತಾಳ್ಮೆ ಮತ್ತು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಂಡು ತಂಡವನ್ನು ಮುನ್ನಡೆಸುತ್ತಾರೆ ಎಂದಿದ್ದಾರೆ.

ವಿಶ್ವಕಪ್ ಫೈನಲ್ ಸೋಲಿನ ಬಗ್ಗೆ ಗಂಗೂಲಿ- ಆಸ್ಟ್ರೇಲಿಯಾ ವಿರುದ್ಧ 2003 ರ ವಿಶ್ವಕಪ್ ಫೈನಲ್‌ನಲ್ಲಿ ಮೊದಲು ಬೌಲಿಂಗ್ ಮಾಡುವ ನಿರ್ಧಾರದ ಬಗ್ಗೆ ಮಾತನಾಡಿದ ದಾದಾ, ನಾನು ಹಳೆಯದನ್ನು ಮತ್ತೆ ನೆನಪಿಸಿಕೊಳ್ಳಲು ಬಯಸುವುದಿಲ್ಲ. ಆದರೆ ಫೈನಲ್‌ನಲ್ಲಿ ಸೋತಿದ್ದಕ್ಕೆ ನನಗೆ ನಿರಾಸೆಯಾಗಿದೆ. ಆದರೆ ಫೈನಲ್ ಸೋಲಿಗೆ ಟಾಸ್ ಕಾರಣ ಎಂದು ನನಗನಿಸುವುದಿಲ್ಲ. ನಾವು ಚೆನ್ನಾಗಿ ಆಡದಿರುವುದೇ ತಂಡದ ಸೋಲಿಗೆ ಕಾರಣವೆಂದು ಗಂಗೂಲಿ ಹೇಳಿದ್ದಾರೆ .

Published On - 3:22 pm, Thu, 18 August 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ