BCCI: ನೋ ವೇ ಚಾನ್ಸೇ ಇಲ್ಲ; ಧೋನಿ ಹಾಗೂ ಸಿಎಸ್​ಕೆ ಕನಸಿಗೆ ಬ್ರೇಕ್ ಹಾಕಿದ ಬಿಸಿಸಿಐ

BCCI: ಒಬ್ಬ ಆಟಗಾರ ಮುಂಬರುವ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಬಯಸಿದರೆ, ಅವನು ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಮಾತ್ರ ವಿದೇಶಿ ಲೀಗ್​ಗಳಲ್ಲಿ ಭಾಗವಹಿಸುವ ಅವಕಾಶವಿದೆ ಎಂದಿದ್ದಾರೆ.

BCCI: ನೋ ವೇ ಚಾನ್ಸೇ ಇಲ್ಲ; ಧೋನಿ ಹಾಗೂ ಸಿಎಸ್​ಕೆ ಕನಸಿಗೆ ಬ್ರೇಕ್ ಹಾಕಿದ ಬಿಸಿಸಿಐ
ಧೋನಿ 2020 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಅಂದಿನಿಂದ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುತ್ತಿದ್ದಾರೆ. ಕಳೆದ ವರ್ಷ ಐಪಿಎಲ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆದಾಗ್ಯೂ ಸೀಸನ್​ ಮಧ್ಯದಲ್ಲಿ, ಅವರು ಮತ್ತೊಮ್ಮೆ ನಾಯಕತ್ವವಹಿಸಿಕೊಳ್ಳಬೇಕಾಯಿತು. ವರದಿಗಳ ಪ್ರಕಾರ ಧೋನಿ 2023 ರ ಆವೃತ್ತಿಯಲ್ಲೂ ಸಿಎಸ್​ಕೆ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
Follow us
TV9 Web
| Updated By: ಪೃಥ್ವಿಶಂಕರ

Updated on: Aug 13, 2022 | 5:23 PM

ಐಪಿಎಲ್ (IPL) ಮಹಾ ಯಶಸ್ಸಿನ ಬಳಿಕ ಇತರ ದೇಶಗಳು ಕೂಡ ಐಪಿಎಲ್​ ರೀತಿಯ ಲೀಗ್​ಗಳನ್ನು ಆರಂಭಿಸಲು ಮುಂದಾಗಿವೆ. ಇದರ ಪ್ರಯುಕ್ತ ಸೌತ್ ಆಫ್ರಿಕಾ ಹಾಗೂ ಯುಎಇ ದೇಶಗಳು ಕೂಡ ಟಿ20 ಲೀಗ್​ಗಳನ್ನು ಆರಂಭಿಸಿದ್ದವು. ಈ ದೇಶಗಳಲ್ಲೂ ಐಪಿಎಲ್ ತಂಡಗಳ ಒಡೆತನ ಹೊಂದಿರುವ ಫ್ರಾಂಚೈಸಿಗಳೇ ತಂಡಗಳನ್ನು ಖರೀದಿಸಿದ್ದವು. ಜೊತೆಗೆ ಭಾರತದ ಹಿರಿಯ ಆಟಗಾರರನ್ನು ಈ ಲೀಗ್​ಗಳಲ್ಲಿ ಬಳಸಿಕೊಳ್ಳಲು ಮುಂದಾಗಿದ್ದವು. ಆದರೆ ಈಗ ಫ್ರಾಂಚೈಸಿಗಳ ಇಂತಹ ಯೋಚನೆಗೆ ಬಿಸಿಸಿಐ (BCCI) ಬ್ರೇಕ್ ಹಾಕಿದೆ.

ಆಟಗಾರರಿಗೆ ಖಡಕ್ ಸಂದೇಶ ನೀಡಿರುವ ಬಿಸಿಸಿಐ, ಟೀಂ ಇಂಡಿಯಾದಲ್ಲಿ ಆಡಿ ನಿವೃತ್ತಿಯಾಗಿರುವ ಆಟಗಾರರು ಒಂದು ವೇಳೆ ಐಪಿಎಲ್ ಆಡುತ್ತಿದ್ದರೆ ಅಂತಹ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಲೀಗ್ ಮತ್ತು ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಭಾಗವಹಿಸುವಂತಿಲ್ಲ ಎಂಬ ಆದೇಶವನ್ನು ಬಿಸಿಸಿಐ ಹೊರಡಿಸಿದೆ. ಇದರಿಂದ ಐಪಿಎಲ್‌ನಲ್ಲಿ ಆಡುವ ಆಟಗಾರರು ಸಹ ಈ ವಿದೇಶಿ ಲೀಗ್‌ಗಳಲ್ಲಿ ಮೆಂಟರ್ ಪಾತ್ರವನ್ನು ವಹಿಸಲು ಸಾಧ್ಯವಾಗುವುದಿಲ್ಲ.

ಬಿಸಿಸಿಐನ ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ, ಆಫ್ರಿಕಾ ದೇಶದಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ತಂಡವನ್ನು ಖರೀದಿಸಿರುವ ಸಿಎಸ್​ಕೆ ಫ್ರಾಂಚೈಸಿ, ತನ್ನ ತಂಡದ ಐಕಾನ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ದಕ್ಷಿಣ ಆಫ್ರಿಕಾದ ಟಿ 20 ಲೀಗ್‌ನಲ್ಲಿ ಮಾರ್ಗದರ್ಶಕರಾಗಿ ಬಳಸಲು ನಿರ್ಧರಿಸಿತ್ತು. ಏಕೆಂದರೆ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಪರ ಆಡುತ್ತಿದ್ದು, ಇದರ ಲಾಭ ಪಡೆಯಲು ಮುಂದಾಗಿತ್ತು. ಆದರೀಗ ಬಿಸಿಸಿಐನ ಈ ಮಹತ್ವದ ನಿರ್ಧಾರದಿಂದಾಗಿ ಚೆನ್ನೈ ಕನಸಿಗೆ ಬೆಂಕಿ ಬಿದ್ದಿದೆ.

ಇದನ್ನೂ ಓದಿ
Image
IPL: ಮಹಿಳಾ ಐಪಿಎಲ್​ಗೆ ಮುಹೂರ್ತ ಫಿಕ್ಸ್; ಪಂದ್ಯಾವಳಿ ಯಾವಾಗ ಆರಂಭ ಗೊತ್ತಾ?
Image
‘ಐಪಿಎಲ್​​ನಲ್ಲಿ ಉತ್ತರ ಕೊಡುವೆ’; ಬಿಸಿಸಿಐ ಮೇಲೆ ಮುನಿದ ಶಾರುಖ್ ತಂಡದ ಸ್ಟಾರ್ ಬ್ಯಾಟರ್
Image
Sourav Ganguly: ಬ್ಯಾಟ್​ನೊಂದಿಗೆ ಮತ್ತೆ ಕ್ರಿಕೆಟ್ ಅಖಾಡಕ್ಕಳಿಯುತ್ತಾರಾ ಗಂಗೂಲಿ; ಹೌದು ಎನ್ನುತ್ತಿವೆ ಈ ಫೋಟೋಗಳು

ನಿವೃತ್ತಿ ಹೊಂದಿದರೆ ಮಾತ್ರ ಅವಕಾಶ

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ದೇಶೀಯ ಕ್ರಿಕೆಟಿಗರು ಸೇರಿದಂತೆ ಯಾವುದೇ ಟೀಂ ಇಂಡಿಯಾ ಆಟಗಾರ ಅವನು / ಅವಳು ಎಲ್ಲಾ ರೀತಿಯ ಆಟದಿಂದ ನಿವೃತ್ತಿಯಾಗುವವರೆಗೆ ಇತರ ಲೀಗ್‌ಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಒಬ್ಬ ಆಟಗಾರ ಮುಂಬರುವ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಬಯಸಿದರೆ, ಅವನು ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಮಾತ್ರ ವಿದೇಶಿ ಲೀಗ್​ಗಳಲ್ಲಿ ಭಾಗವಹಿಸುವ ಅವಕಾಶವಿದೆ ಎಂದಿದ್ದಾರೆ.

ಧೋನಿಯಂತಹ ಆಟಗಾರರು ಈ ಲೀಗ್‌ಗಳಲ್ಲಿ ಮೆಂಟರ್ ಅಥವಾ ಕೋಚ್ ಆಗಿ ಪಾಲ್ಗೊಳ್ಳಬಹುದೇ ಎಂದು ಕೇಳಿದಾಗ? ಇದಕ್ಕೆ ಉತ್ತರಿಸಿದ ಬಿಸಿಸಿಐ ಅಧಿಕಾರಿ, “ಹಾಗಾದರೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ ಪರ ಐಪಿಎಲ್ ಆಡಲು ಸಾಧ್ಯವಿಲ್ಲ. ವಿದೇಶಿ ಲೀಗ್​ಗಳಲ್ಲಿ ಕಾಣಿಸಿಕೊಳ್ಳಬೇಕೆಂದರೆ ಅವರು ಮೊದಲು ಐಪಿಎಲ್​ನಿಂದ ನಿವೃತ್ತಿ ಹೊಂದಬೇಕು ಎಂದಿದ್ದಾರೆ.

ತಂಡ ಖರೀದಿಸಿದ ಐಪಿಎಲ್ ಮಾಲೀಕರು

ದಕ್ಷಿಣ ಆಫ್ರಿಕಾ ತನ್ನದೇ ಆದ ಟಿ 20 ಲೀಗ್‌ ಆರಂಭಿಸುವುದರೊಂದಿಗೆ ದೇಶದಲ್ಲಿ ಕ್ರಿಕೆಟ್ ಬೆಳೆಸಲು ಮುಂದಾಗಿದೆ. ಈ ಲೀಗ್​ಗಳಲ್ಲಿರುವ 6 ತಂಡಗಳ ಒಡೆತನವನ್ನು ಐಪಿಎಲ್​ನಲ್ಲಿ ತಂಡ ಖರೀದಿಸಿರುವ ಫ್ರಾಂಚೈಸಿಗಳು ಹೊಂದಿವೆ. ಮುಂಬೈ, ಲಕ್ನೋ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ದೆಹಲಿ ಫ್ರಾಂಚೈಸಿಗಳು ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿವೆ. ಅದೇ ರೀತಿ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಆರು ಫ್ರಾಂಚೈಸಿಗಳ ಪೈಕಿ ಐದು ಫ್ರಾಂಚೈಸಿಗಳು ಭಾರತದ ಪಾಲಾಗಿವೆ. ಇವುಗಳಲ್ಲಿ ಮೂರು ತಂಡಗಳು ಐಪಿಎಲ್‌ನಲ್ಲಿ ತಂಡಗಳನ್ನು ಹೊಂದಿವೆ.

ಕಠಿಣವಾದ ಬಿಸಿಸಿಐ ನಿಯಮಗಳು

ವಿದೇಶಿ ಟಿ20 ಲೀಗ್‌ಗಳಲ್ಲಿ ಭಾರತೀಯ ಆಟಗಾರರು ಭಾಗವಹಿಸಲು ಬಿಸಿಸಿಐ ಅತ್ಯಂತ ಕಠಿಣ ನಿಯಮಗಳನ್ನು ಮಾಡಿದೆ. ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ತಂಡಗಳನ್ನು ಖರೀದಿಸಿದೆ. 2019 ರಲ್ಲಿ, ಕೋಲ್ಕತ್ತಾ ಫ್ರಾಂಚೈಸ್‌ನ ಭಾಗವಾಗಿರುವ ದಿನೇಶ್ ಕಾರ್ತಿಕ್, ಸಿಪಿಎಲ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಜೆರ್ಸಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇದಾದ ನಂತರ, ಬಿಸಿಸಿಐ ಕಾರ್ತಿಕ್ ಮೇಲೆ ಅಸಮಾಧಾನ ವ್ಯಕ್ತಪಡಿಸಿತು. ಬಳಿಕ ಕಾರ್ತಿಕ್ ಲಿಖಿತವಾಗಿ ಕ್ಷಮೆಯಾಚಿಸಬೇಕಾಯಿತು. ಕೆಕೆಆರ್‌ನ ಹೊಸ ಕೋಚ್ ಬ್ರೆಂಡನ್ ಮೆಕಲಮ್ ಅವರ ಮನವಿಯ ಮೇರೆಗೆ ಡ್ರೆಸ್ಸಿಂಗ್ ಕೋಣೆಗೆ ಹೋಗಿದ್ದೆ ಎಂದು ಕಾರ್ತಿಕ್ ತಮ್ಮ ಕ್ಷಮೆಯಾಚನೆಯಲ್ಲಿ ತಿಳಿಸಿದ್ದರು.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ