Asia Cup 2022: ಏಷ್ಯಾಕಪ್‌ಗೆ ಬಾಂಗ್ಲಾ ತಂಡ ಪ್ರಕಟ; ಜೊತೆಗೆ ತಂಡದ ನಾಯಕತ್ವದಲ್ಲೂ ಬದಲಾವಣೆ..!

Asia Cup 2022: ಮಹಮುದುಲ್ಲಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅದರ ನಂತರ ಅವರೇ ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಇದರಿಂದಾಗಿ ಜಿಂಬಾಬ್ವೆ ಪ್ರವಾಸಕ್ಕೆ ಶಕೀಬ್ ಅಲ್ ಹಸನ್‌ಗೆ ಟಿ20 ತಂಡದ ನಾಯಕತ್ವವನ್ನು ಮಂಡಳಿ ವಹಿಸಿದೆ.

Asia Cup 2022: ಏಷ್ಯಾಕಪ್‌ಗೆ ಬಾಂಗ್ಲಾ ತಂಡ ಪ್ರಕಟ; ಜೊತೆಗೆ ತಂಡದ ನಾಯಕತ್ವದಲ್ಲೂ ಬದಲಾವಣೆ..!
Follow us
TV9 Web
| Updated By: ಪೃಥ್ವಿಶಂಕರ

Updated on:Aug 13, 2022 | 7:48 PM

ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ (Bangladesh cricket team) ನಿರಂತರವಾಗಿ ಏರುಪೇರು ಮತ್ತು ಬದಲಾವಣೆಗಳು ಸಾಮಾನ್ಯವಾಗಿದ್ದರೆ, ಇನ್ನೂ ಕೆಲವೊಮ್ಮೆ ಮಂಡಳಿ ಮತ್ತು ಆಟಗಾರರ ನಡುವಿನ ಘರ್ಷಣೆ ಮುನ್ನೆಲೆಗೆ ಬರುತ್ತದೆ. ಈ ತಂಡದ ನಾಯಕತ್ವದಲ್ಲೂ ಸಾಕಷ್ಟು ಏರಿಳಿತಗಳಿದ್ದು, ಇದರ ಪರಿಣಾಮವಾಗಿ ಏಷ್ಯಾಕಪ್‌ಗೂ ಮುನ್ನವೇ ಮತ್ತೊಮ್ಮೆ ತಂಡದ ಟಿ20 ನಾಯಕತ್ವ ಬದಲಾಗಿದೆ. ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ಗೆ (Asia Cup and T20 World Cup) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಲೆಜೆಂಡರಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದೆ. ಜೊತೆಗೆ ಏಷ್ಯಾಕಪ್​ಗಾಗಿ 17 ಸದಸ್ಯರ ತಂಡವನ್ನು ಸಹ ಪ್ರಕಟಿಸಿದೆ.

ಶನಿವಾರ, ಆಗಸ್ಟ್ 13 ರಂದು ಏಷ್ಯಾಕಪ್‌ಗೆ ತಂಡವನ್ನು ಪ್ರಕಟಿಸುವುದರ ಜೊತೆಗೆ, ಬಾಂಗ್ಲಾದೇಶ ಮಂಡಳಿಯು ಶಕೀಬ್‌ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸುವುದಾಗಿ ಘೋಷಿಸಿತು. ಕಳೆದ ಒಂದೆರಡು ತಿಂಗಳಿಂದ ತಂಡದ ನಾಯಕತ್ವದ ಬಗ್ಗೆ ಗೊಂದಲವಿದ್ದು, ಮಹಮುದುಲ್ಲಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅದರ ನಂತರ ಅವರೇ ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಇದರಿಂದಾಗಿ ಜಿಂಬಾಬ್ವೆ ಪ್ರವಾಸಕ್ಕೆ ಶಕೀಬ್ ಅಲ್ ಹಸನ್‌ಗೆ ಟಿ20 ತಂಡದ ನಾಯಕತ್ವವನ್ನು ಮಂಡಳಿ ವಹಿಸಿದೆ.

ಶಕೀಬ್​ಗೆ ನಾಯಕತ್ವ ಜವಾಬ್ದಾರಿ

ಇದೀಗ ಬಾಂಗ್ಲಾದೇಶದ ಮಂಡಳಿಯು ಮುಂಬರುವ ಎರಡು ದೊಡ್ಡ ಪಂದ್ಯಾವಳಿಗಳಿಗೆ ತನ್ನ ತಂಡಕ್ಕೆ ಸ್ಥಿರತೆಯನ್ನು ನೀಡಲು ದಿಗ್ಗಜ ಆಲ್‌ರೌಂಡರ್ ಶಕೀಬ್‌ಗೆ ಈ ಜವಾಬ್ದಾರಿಯನ್ನು ನೀಡಿದೆ. ಈ ಹಿಂದೆ ಶಕೀಬ್ ಕಂಪನಿಯೊಂದಿಗೆ ಪ್ರಾಯೋಜಕತ್ವದ ಒಪ್ಪಂದವನ್ನು ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಶಕೀಬ್ ಮತ್ತು ಮಂಡಳಿ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಇದಾದ ನಂತರ ಶಕೀಬ್ ರಾಷ್ಟ್ರೀಯ ತಂಡದಲ್ಲಿ ಆಡಲು ಬಯಸಿದರೆ, ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಮಂಡಳಿ ಎಚ್ಚರಿಕೆ ನೀಡಿತ್ತು. ಹೀಗಾಗಿ ಶಕೀಬ್ ಒಪ್ಪಂದವನ್ನು ರದ್ದುಗೊಳಿಸಿದ ನಂತರವೇ ಮಂಡಳಿಯು ಅವರನ್ನು ನಾಯಕನನ್ನಾಗಿ ನೇಮಿಸಿದೆ.

ಏಷ್ಯಾ ಕಪ್‌ಗಾಗಿ ಬಾಂಗ್ಲಾದೇಶ ತಂಡ

ಅದೇ ಸಮಯದಲ್ಲಿ, ಆಯ್ಕೆದಾರರು ಏಷ್ಯಾ ಕಪ್‌ಗಾಗಿ 17 ಸದಸ್ಯರ ತಂಡವನ್ನು ಸಹ ಪ್ರಕಟಿಸಿದ್ದಾರೆ. ಇದರಲ್ಲಿ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಮುಶ್ಫಿಕರ್ ರಹೀಮ್ ಮತ್ತು ಮೆಹಮುದುಲ್ಲಾ ಕೂಡ ತಂಡಕ್ಕೆ ಮರಳಿದ್ದಾರೆ. ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದೊಂದಿಗೆ ಒಂದು ಗುಂಪಿನಲ್ಲಿ ಸ್ಥಾನ ಪಡೆದಿದೆ.

ಬಾಂಗ್ಲಾ ತಂಡ: ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ನಸುಮ್ ಅಹ್ಮದ್, ಸಬ್ಬೀರ್ ರಹಮಾನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಪರ್ವೇಜ್ ಹೊಸೈನ್ ಎಮನ್, ನೂರುಲ್ ಹಸನ್ ಸೋಹನ್, ತಸ್ಕಿನ್ ಅಹ್ಮದ್.

Published On - 7:06 pm, Sat, 13 August 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು