Yuzvendra Chahal-Dhanashree: ಚಹಾಲ್-ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು..?
Yuzvendra Chahal-Dhanashree Verma: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಮೊದಲ ಬಾರಿಗೆ ಆನ್‌ಲೈನ್ ತರಗತಿಯ ಸಮಯದಲ್ಲಿ ಭೇಟಿಯಾಗಿದ್ದರು. ಚಹಾಲ್ ನೃತ್ಯ ಕಲಿಯಲು ಧನಶ್ರೀ ವರ್ಮಾ ಅವರನ್ನು ಆನ್ಲೈನ್ನಲ್ಲಿ ಸಂಪರ್ಕಿಸಿದ್ದರು.
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ (Yuzvendra Chahal-Dhanashree Verma) ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯಾ? ಇಂತಹದೊಂದು ಪ್ರಶ್ನೆಗೆ ಕಾರಣವಾಗಿದ್ದು ಈ ತಾರಾ ಜೋಡಿಯ ಸೋಷಿಯಲ್ ಮೀಡಿಯಾ ಖಾತೆಗಳು. ಅದರಲ್ಲೂ ಧನಶ್ರೀ ವರ್ಮಾ ಪತಿಯ ಉಪನಾಮವನ್ನೇ ತೆಗೆದುಹಾಕುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುವ ಧನಶ್ರೀ ಮತ್ತು ಚಹಾಲ್ ಜೋಡಿ ಇತ್ತೀಚಿನ ದಿನಗಳಲ್ಲಿ ಎಲ್ಲೂ ಕೂಡ ಜೊತೆಯಾಗಿ ಕಾಣಿಸಿಕೊಂಡಿಲ್ಲ ಎಂಬುದೇ ಸತ್ಯ. ಇದೀಗ ಪತಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಚಾಹಲ್ ಅವರ ಉಪನಾಮವನ್ನು ತೆಗೆದುಹಾಕಿದ್ದಾರೆ.
ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಧನಶ್ರೀ ಅವರ ಯೂಸರ್ ನೇಮ್ ಧನಶ್ರೀ ವರ್ಮಾ ಚಹಾಲ್ ಆಗಿತ್ತು. ಆದರೆ ಏಕಾಏಕಿ ತಮ್ಮ ಹೆಸರಿನ ಹಿಂದಿದ್ದ ಪತಿಯ ಸರ್ ನೇಮ್ ಅನ್ನು ತೆಗೆದು ಹಾಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಮತ್ತೊಂದೆಡೆ ಯುಜ್ವೇಂದ್ರ ಚಹಾಲ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ವೊಂದು ಇದೀಗ ಚರ್ಚೆಗೆ ಕಾರಣವಾಗಿದೆ.
View this post on Instagram
ಈ ಪೋಸ್ಟ್ನಲ್ಲಿ ಚಹಾಲ್ ಹೊಸ ಜೀವನ ಪ್ರಾರಂಭವಾಗುತ್ತಿದೆ ಎನ್ನುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ತಾರಾ ಜೋಡಿಯ ನಡುವೆ ಬಿರುಕುಂಟಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೇ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ ದಂಪತಿಗಳು ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ ಎನ್ನಲಾಗುತ್ತಿದೆ.
Instagram story of Yuzi chahal ? pic.twitter.com/HjQSBraLCH
— Mufaddal Vohra (@mufaddol_vohra) August 16, 2022
ಆನ್‌ಲೈನ್ ಲವ್:
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಮೊದಲ ಬಾರಿಗೆ ಆನ್‌ಲೈನ್ ತರಗತಿಯ ಸಮಯದಲ್ಲಿ ಭೇಟಿಯಾಗಿದ್ದರು. ಚಹಾಲ್ ನೃತ್ಯ ಕಲಿಯಲು ಧನಶ್ರೀ ವರ್ಮಾ ಅವರನ್ನು ಆನ್ಲೈನ್ನಲ್ಲಿ ಸಂಪರ್ಕಿಸಿದ್ದರು. ಅಲ್ಲದೆ ಧನಶ್ರೀ ನಡೆಸುವ ಡ್ಯಾನ್ಸ್ ಕ್ಲಾಸ್ಗೆ ಸೇರಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಅಲ್ಲದೆ 2020, ಡಿಸೆಂಬರ್ 22 ರಂದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ತಾರಾ ಜೋಡಿಗಳ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಬೇಕಾದ ಯುವ ಜೋಡಿ ಮಾತ್ರ ಜಾಣಮೌನಕ್ಕೆ ಶರಣಾಗಿದ್ದಾರೆ.