Virat Kohli: ಕಿಂಗ್ ಕೊಹ್ಲಿ ಎಂಟ್ರಿಗೆ 14 ವರ್ಷಗಳು..!

Virat Kohli: ಟಿ20 ಕ್ರಿಕೆಟ್​ನಲ್ಲೂ ರನ್ ಸರದಾರನಾಗಿ ಮೆರೆದಿರುವ ಕಿಂಗ್ ಕೊಹ್ಲಿ 99 ಪಂದ್ಯಗಳಿಂದ 3308 ರನ್​ ಕಲೆಹಾಕಿದ್ದಾರೆ. ಈ ಭರ್ಜರಿ ಇನಿಂಗ್ಸ್​ ವೇಳೆ 30 ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

Virat Kohli: ಕಿಂಗ್ ಕೊಹ್ಲಿ ಎಂಟ್ರಿಗೆ 14 ವರ್ಷಗಳು..!
Virat Kohli
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 18, 2022 | 11:55 AM

ಆಗಸ್ಟ್ 18, 2008…ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಿಂದ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಪ್ರಮುಖ ಆಟಗಾರರು ಹೊರಗುಳಿದಿದ್ದರು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಆಗಷ್ಟೇ ಟೀಮ್ ಇಂಡಿಯಾಗೆ (Team India) ಅಂಡರ್​ 19 ವಿಶ್ವಕಪ್ ಗೆದ್ದುಕೊಟ್ಟಿದ್ದ ಯುವ ನಾಯಕನನ್ನು ಆಯ್ಕೆ ಮಾಡಲಾಗಿತ್ತು. ಇತ್ತ ಸೆಹ್ವಾಗ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಯಾರನ್ನು ಕಣಕ್ಕಿಳಿಯಲ್ಲಿದ್ದಾರೆ ಎಂಬ ಪ್ರಶ್ನೆಯೊಂದು ಹಲವರಲ್ಲಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಮ್ ಇಂಡಿಯಾ ಪರ ಯುವ ತರುಣನೊಬ್ಬ ಬ್ಯಾಟಿಂಗ್​ಗೆ ಇಳಿದಿದ್ದರು. ಅದು ಕೂಡ ಗೌತಮ್ ಗಂಭೀರ್ ಜೊತೆ ಎಂಬುದು ವಿಶೇಷ.

ಕೇವಲ 2 ಎಸೆತಗಳನ್ನು ಎದುರಿಸಿದ ಗಂಭೀರ್ ಮೊದಲ ಓವರ್​ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇತ್ತ ಚೊಚ್ಚಲ ಪಂದ್ಯವಾಡುತ್ತಿದ್ದ ಯುವ ಆಟಗಾರ ಒತ್ತಡಕ್ಕೊಳಗಾಗಿತ್ತು. ಏಕೆಂದರೆ ಅಂದಿನ ಶ್ರೇಷ್ಠ ಎಡಗೈ ವೇಗಿ ಚಮಿಂಡಾ ವಾಸ್, ಬಲಗೈ ವೇಗಿ ನುವಾನ್ ಕುಲಸೇಕರರನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇದಾಗ್ಯೂ ಆ ಆಟಗಾರ ಬರೋಬ್ಬರಿ 22 ಎಸೆತಗಳನ್ನು ಎದುರಿಸಿದರು. ಈ ನಡುವೆ ಒಂದು ಫೋರ್ ಬಾರಿಸಿ ಬೌಂಡರಿ ಖಾತೆಯನ್ನು ತೆರೆದರು.

ಆದರೆ 12 ರನ್​ಗಳಿಸಿದ್ದ ವೇಳೆ ನುವಾನ್ ಕುಲಸೇಕರ ಎಸೆತವನ್ನು ಗುರುತಿಸುವಲ್ಲಿ ಎಡವಿ ಎಲ್​ಬಿಡಬ್ಲ್ಯೂ ಆಗಿ ಭಾರದ ಹೆಜ್ಜೆಯೊಂದಿಗೆ ಪೆವಿಲಿಯನ್​ಗೆ ಮರಳಿದರು. ಅಂದು ಕೇವಲ 12 ರನ್​ಗಳಿಸಿ ನೋವಿನಲ್ಲೇ ಹೆಜ್ವೆ ಹಾಕುತ್ತಿದ್ದ ಆ ದುಂಡು ಮುಖದ ಯುವಕನ ನೋಡಿ ಯಾರೂ ಕೂಡ ಈತ ಕ್ರಿಕೆಟ್ ಅಂಗಳವನ್ನು ಆಳಲಿದ್ದಾರೆ ಎಂದು ಊಹಿಸಿರಲು ಕೂಡ ಸಾಧ್ಯವಿಲ್ಲ. ಆದರೆ ಆ ಬಳಿಕ ನಡೆದಿದ್ದೆಲ್ಲಾ ಇತಿಹಾಸ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅಂದು ಭಾರದ ಹೆಜ್ಜೆಯಾಗಿದ್ದ ಇದೇ ತರುಣ ಆ ಬಳಿಕ 70 ಶತಕ ಸಿಡಿಸಿ ಎದೆಯುಬ್ಬಿಸಿ ಪೆವಿಲಿಯನ್​ಗೆ ಮರಳಿದ್ದ…ಅಷ್ಟೇ ಅಲ್ಲದೆ ಕ್ರಿಕೆಟ್ ಅಂಗಳದ ಹೊಸ ಕಿಂಗ್ ಆಗಿ ರಾಜ್ಯಭಾರ ಆರಂಭಿಸಿದ್ದ. ಮೊದಲ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹೆಸರಿನೊಂದಿಗೆ ಕಾಣಿಸಿಕೊಂಡಿದ್ದ ಯುವ ಬ್ಯಾಟ್ಸ್​ಮನ್ ಆ ಬಳಿಕ ಕಿಂಗ್ ಕೊಹ್ಲಿಯಾಗಿ ಬದಲಾಗಿದ್ದರು.

ಅಂದಹಾಗೆ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇಂದಿಗೆ 14 ವರ್ಷಗಳಾಗಿವೆ. ಈ 14 ವರ್ಷಗಳಲ್ಲಿ ಹಲವು ಏಳು ಬೀಳುಗಳನ್ನು ನೋಡಿರುವ ಕೊಹ್ಲಿ ಈ ದಶಕ ಶ್ರೇಷ್ಠ ಬ್ಯಾಟ್ಸ್​ಮನ್ ಆಗಿ ಗುರುತಿಸಿಕೊಂಡಿದ್ದಾರೆ.

ಇದೀಗ ಟೀಮ್ ಇಂಡಿಯಾ ಪರ 262 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 253 ಇನಿಂಗ್ಸ್​ನಲ್ಲಿ 12344 ರನ್​ ಕಲೆಹಾಕಿದ್ದಾರೆ. ಈ ವೇಳೆ ಕೊಹ್ಲಿಯ ಬ್ಯಾಟ್​ನಿಂದ 43 ಶತಕ ಹಾಗೂ 64 ಅರ್ಧಶತಕಗಳು ಮೂಡಿಬಂದಿವೆ. ಹಾಗೆಯೇ 173 ಟೆಸ್ಟ್ ಇನಿಂಗ್ಸ್​ಗಳಿಂದ 8074 ರನ್ ಬಾರಿಸಿದ್ದಾರೆ. ಈ ವೇಳೆ 7 ದ್ವಿಶತಕ, 27 ಶತಕ ಹಾಗೂ 28 ಅರ್ಧಶತಕ ಸಿಡಿಸಿದ್ದಾರೆ.

ಇನ್ನು ಟಿ20 ಕ್ರಿಕೆಟ್​ನಲ್ಲೂ ರನ್ ಸರದಾರನಾಗಿ ಮೆರೆದಿರುವ ಕಿಂಗ್ ಕೊಹ್ಲಿ 99 ಪಂದ್ಯಗಳಿಂದ 3308 ರನ್​ ಕಲೆಹಾಕಿದ್ದಾರೆ. ಈ ಭರ್ಜರಿ ಇನಿಂಗ್ಸ್​ ವೇಳೆ 30 ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅಂದರೆ ಚೊಚ್ಚಲ ಪಂದ್ಯದಲ್ಲಿ ಕೇವಲ 12 ರನ್​ಗಳಿಸಿ ಔಟಾಗಿದ್ದ ಅದೇ ತರುಣ ಇದೀಗ ಕ್ರಿಕೆಟ್ ಅಂಗಳದ ರನ್​ ಮೆಷಿನ್ ಆಗಿ ಗುರುತಿಸಿಕೊಂಡಿರುವುದು ವಿಶೇಷ.

Published On - 11:55 am, Thu, 18 August 22

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ