Viral Video: ವಾಟ್ ಎ ಕ್ಯಾಚ್: ಅತ್ಯಾದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಆಸೀಸ್ ಆಟಗಾರ
Matt Renshaw: ಈ ಪಂದ್ಯದಲ್ಲಿ ಈ ಕ್ಯಾಚ್ ನಿರ್ಣಾಯಕ ಪಾತ್ರವಹಿಸಿಲ್ಲ ಎಂಬುದು ವಿಶೇಷ. ಏಕೆಂದರೆ ಮಳೆಗೆ ಅಹುತಿಯಾದ ಈ ಪಂದ್ಯದಲ್ಲಿ ಸರ್ರೆ ತಂಡವು ಜಯ ಸಾಧಿಸಿದೆ.
ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂತಹದೊಂದು ಅದ್ಭುತ ಕ್ಯಾಚ್ಗೆ ಇಂಗ್ಲೆಂಡ್ನ ರಾಯಲ್ ಲಂಡನ್ ಕಪ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಸರ್ರೆ ಹಾಗು ಸೋಮರ್ಸೆಟ್ ತಂಡಗಳು ಮುಖಾಮುಖಿಯಾಗಿತ್ತು. ಇದೇ ವೇಳೆ ಸ್ಲಿಪ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಆಸ್ಟ್ರೇಲಿಯಾ ಆಟಗಾರ ರೆನ್‌ಶಾ ಹಿಡಿದಿರುವ ಕ್ಯಾಚ್ ಎಲರನ್ನು ನಿಬ್ಬೆರಗಾಗಿಸಿತ್ತು.
ಸರ್ರೆ ತಂಡವು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸೋಮರ್‌ಸೆಟ್‌ನ ಮ್ಯಾಟ್ ರೆನ್‌ಶಾ ಸ್ಲಿಪ್‌ಗಳಲ್ಲಿ ಫೀಲ್ಡಿಂಗ್ನಲ್ಲಿದ್ದರು. ಇದೇ ವೇಳೆ ದಾಳಿಗಿಳಿದ ಕೇಸ್ಲಿ ಆಲ್ಡ್ರಿಡ್ಜ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ರಿಯಾನ್ ಪಟೇಲ್ ಎಡವಿದ್ದಾರೆ. ಅಲ್ಲದೆ ಚೆಂಡು ಅವರ ಬ್ಯಾಟ್ಗೆ ತಗುಲಿ ಸ್ಲಿಪ್ನತ್ತ ಚಿಮ್ಮಿದೆ.
ತಕ್ಷಣವೇ ಮ್ಯಾಟ್ ರೇನ್ಶಾ ಚಕ್ಕನೆ ಜಿಗಿದು ಚೆಂಡನ್ನು ಕೈಯಲ್ಲಿ ಬಂಧಿಸಿದರು. ಕೇವಲ 16 ಸೆಕೆಂಡ್ಗಳಲ್ಲಿ ಅಧ್ಭುತ ರಿಯಾಕ್ಷನ್ ಕ್ಯಾಚ್ ಹಿಡಿಯುವ ಮೂಲಕ ರೇನ್ಶಾ ಎಲ್ಲರನ್ನು ನಿಬ್ಬೆರಗಾಗಿಸಿದರು. ಇದೀಗ ರೇನ್ಶಾ ಅವರ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಈ ವರ್ಷದ ಬೆಸ್ಟ್ ರಿಯಾಕ್ಷನ್ ಕ್ಯಾಚ್ ಎಂದು ಈ ಫೀಲ್ಡಿಂಗ್ ಅನ್ನು ಹಾಡಿ ಹೊಗಳುತ್ತಿದ್ದಾರೆ.
One of the greatest catches you will see in a long time…
LIVE STREAM ➡️ https://t.co/dF6GhNA901 #SURvSOM#WeAreSomerset https://t.co/hEzrqhCsx8 pic.twitter.com/cIGNGmLhhX
— Somerset Cricket ? (@SomersetCCC) August 17, 2022
ಇದಾಗ್ಯೂ ಈ ಪಂದ್ಯದಲ್ಲಿ ಈ ಕ್ಯಾಚ್ ನಿರ್ಣಾಯಕ ಪಾತ್ರವಹಿಸಿಲ್ಲ ಎಂಬುದು ವಿಶೇಷ. ಏಕೆಂದರೆ ಮಳೆಗೆ ಅಹುತಿಯಾದ ಈ ಪಂದ್ಯದಲ್ಲಿ ಸರ್ರೆ ತಂಡವು ಜಯ ಸಾಧಿಸಿದೆ. 50 ಓವರ್ಗಳ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ 9 ವಿಕೆಟ್ ನಷ್ಟಕ್ಕೆ 302 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಸೋಮರ್ಸೆಟ್ ತಂಡವು 68 ರನ್ಗಳಿಸಿದ್ದ ವೇಳೆ ಮಳೆ ಬರಲಾರಂಭಿಸಿತು. ಈ ವೇಳೆ ಫಲಿತಾಂಶ ನಿರ್ಣಯಿಸಲು ಡಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಬೇಕಾಯಿತು. ಅದರಂತೆ ಸರ್ರೆ ತಂಡವು 43 ರನ್ಗಳ ಜಯ ಸಾಧಿಸಿದೆ.