Asia Cup 2022: ಆಟದ ಜೊತೆಗೆ ನಮ್ಮ ತಂಡವೂ ಬದಲಾಗಿದೆ; ಪಾಕ್ ಮಣಿಸಲು ನಾವು ಸಿದ್ದ ಎಂದ ರೋಹಿತ್

Asia Cup 2022: ಕಳೆದ ವರ್ಷ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ್ದೆವು. ಅಲ್ಲಿ ಫಲಿತಾಂಶ ನಮ್ಮ ಪರವಾಗಿರಲಿಲ್ಲ. ಆದರೆ ಏಷ್ಯಾಕಪ್ ಈಗ ವಿಭಿನ್ನವಾಗಿದೆ. ಜೊತೆಗೆ ನಮ್ಮ ತಂಡವು ಕೂಡ ವಿಭಿನ್ನವಾಗಿ ಆಡುತ್ತಿದೆ, ನಮ್ಮ ತಯಾರಿಯೂ ಚೆನ್ನಾಗಿದೆ.

Asia Cup 2022: ಆಟದ ಜೊತೆಗೆ ನಮ್ಮ ತಂಡವೂ ಬದಲಾಗಿದೆ; ಪಾಕ್ ಮಣಿಸಲು ನಾವು ಸಿದ್ದ ಎಂದ ರೋಹಿತ್
Follow us
TV9 Web
| Updated By: ಪೃಥ್ವಿಶಂಕರ

Updated on: Aug 18, 2022 | 8:11 PM

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಹುನಿರೀಕ್ಷಿತ ಏಷ್ಯಾಕಪ್‌ (Asia Cup 2022) ಆರಂಭವಾಗಲಿದ್ದು, ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ಮುಖಾಮುಖಿಯಾಗಲಿವೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋತಿತ್ತು. ಆ ಸೋಲಿನ ಕಹಿಯನ್ನು ಇನ್ನೂ ಕೂಡ ಟೀಂ ಇಂಡಿಯಾ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗಿಲ್ಲ. ಆದರೆ ಅಷ್ಟರಲ್ಲಾಗಲೆ ಮತ್ತೊಮ್ಮೆ, ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವೆ ಕ್ರಿಕೆಟ್ ಯುದ್ಧ ನಡೆಯುತ್ತಿದೆ. ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ಕೂಡ ತಯಾರಿ ನಡೆಸುತ್ತಿದ್ದು, ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೇಳಿಕೆಯೊಂದನ್ನು ನೀಡಿದ್ದಾರೆ.

2021ರ ಟಿ20 ವಿಶ್ವಕಪ್ ಬಳಿಕ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಿರಲಿಲ್ಲ. ಏಷ್ಯಾಕಪ್‌ನಲ್ಲಿ ಮುಂಬರುವ ಭಾರತ-ಪಾಕ್ ಪಂದ್ಯದ ಬಗ್ಗೆ ಮಾತನಾಡಿದ ಭಾರತೀಯ ನಾಯಕ, ದೀರ್ಘ ಸಮಯದ ನಂತರ ಏಷ್ಯಾಕಪ್ ಪ್ರಾರಂಭವಾಗಲಿದೆ. ಆದರೆ ಕಳೆದ ವರ್ಷ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ್ದೆವು. ಅಲ್ಲಿ ಫಲಿತಾಂಶ ನಮ್ಮ ಪರವಾಗಿರಲಿಲ್ಲ. ಆದರೆ ಏಷ್ಯಾಕಪ್ ಈಗ ವಿಭಿನ್ನವಾಗಿದೆ. ಜೊತೆಗೆ ನಮ್ಮ ತಂಡವು ಕೂಡ ವಿಭಿನ್ನವಾಗಿ ಆಡುತ್ತಿದೆ, ನಮ್ಮ ತಯಾರಿಯೂ ಚೆನ್ನಾಗಿದೆ. ಅಲ್ಲದೆ ನಮ್ಮ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಏಷ್ಯಾಕಪ್ ಈ ಬಾರಿ ಮರುಭೂಮಿಯಲ್ಲಿ ನಡೆಯಲಿದ್ದು, ಪರಿಣಾಮವಾಗಿ, ಹವಾಮಾನವು ಒಂದು ದೊಡ್ಡ ಅಂಶವಾಗಿದೆ. ನಾವು ಎದುರಾಳಿಯ ವಿರುದ್ಧ ಹೋರಾಡುವ ಮೊದಲು, ಅಲ್ಲಿನ ಹವಾಮಾನದ ವಿರುದ್ಧ ಹೋರಾಡಬೇಕು. ಏಕೆಂದರೆ 40 ಡಿಗ್ರಿ ತಾಪಮಾನದಲ್ಲಿ ಆಡುವುದು ಬಾಯಿ ಮಾತಲ್ಲ. ಪರಿಣಾಮವಾಗಿ, ನಾವು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ
Image
T20 World Cup: ‘ಟಿ20 ವಿಶ್ವಕಪ್ ಹತ್ತಿರವಾದಂತೆ ತಂಡದಲ್ಲಿ ಆತಂಕ ಮನೆಮಾಡಿದೆ’; ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್
Image
IND vs PAK: ಅಚ್ಚರಿಯಾದರೂ ಇದು ಸತ್ಯ; ಒಮ್ಮೆಯೂ ಭಾರತ- ಪಾಕ್ ಏಷ್ಯಾಕಪ್ ಫೈನಲ್​ ಆಡಿಲ್ಲ..!
Image
ಟಿ20 ವಿಶ್ವಕಪ್​ಗೆ ಜಡೇಜಾರನ್ನು ಆಯ್ಕೆ ಮಾಡುವುದರಿಂದ ಪ್ರಯೋಜನವಿಲ್ಲ ಎಂದ ಲೆಜೆಂಡರಿ ಕ್ರಿಕೆಟರ್..!

ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಆಡುತ್ತಿಲ್ಲ. ಆದ್ದರಿಂದ ಭಾರತ ತಂಡದ ನಾಯಕ ಹಾಗೂ ಕೋಚ್ ದ್ರಾವಿಡ್ ಬೆಂಚ್ ಬಲಗೊಳಿಸುವ ಕೆಲಸ ಆರಂಭಿಸಿದ್ದಾರೆ. ರಾಹುಲ್ ಭಾಯ್ ಮತ್ತು ನಾನು ಬಲವಾದ ಬೆಂಚ್ ನಿರ್ಮಿಸಲು ಬಯಸುತ್ತೇವೆ. ನಾವು ಬಹಳಷ್ಟು ಕ್ರಿಕೆಟ್ ಆಡುತ್ತೇವೆ, ಅದು ಗಾಯಗಳಿಗೆ ಕಾರಣವಾಗಬಹುದು. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಉಳಿದವರುಗಳನ್ನು ಸಿದ್ಧಪಡಿಸಬೇಕು. ನಾವು ಎಂದಿಗೂ ಒಬ್ಬರು ಅಥವಾ ಇಬ್ಬರನ್ನು ಅವಲಂಬಿಸಿರುವ ತಂಡವಾಗಲು ಬಯಸುವುದಿಲ್ಲ. ಎಲ್ಲರೂ ಕೊಡುಗೆ ನೀಡಬಹುದಾದ ತಂಡವಾಗಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ನಾವು ಯುವಕರಿಗೆ ಸಾಧ್ಯವಾದಷ್ಟು ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸುತ್ತೇವೆ. ಹಿರಿಯ ಆಟಗಾರರೂ ತಂಡದಲ್ಲಿದ್ದು, ಯುವಕರಿಗೆ ಅನುಕೂಲವಾಗಲಿದೆ ಎಂದು ರೋಹಿತ್ ಹೇಳಿದ್ದಾರೆ.