ದಾಂಪತ್ಯ ಜೀವನದಲ್ಲಿ ಬಿರುಕು: ವದಂತಿಗೆ ತೆರೆ ಎಳೆದ ಯುಜ್ವೇಂದ್ರ ಚಹಾಲ್; ಹೇಳಿದ್ದೇನು ಗೊತ್ತಾ?
Yuzvendra Chahal-Dhanashree: ನಮ್ಮ ವೈವಾಹಿಕ ಬದುಕಿಗೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಿಗೂ ವಿನಮ್ರ ವಿನಂತಿ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಎಂದು ನೆಟ್ಟಿಗರ ಬಳಿ ಚಹಾಲ್ ವಿನಂತಿ ಮಾಡಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಬ್ಬುತ್ತಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಗುರುವಾರ, ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳು ಮತ್ತು ವದಂತಿಗಳು ಹಬ್ಬಿದ್ದವು. ಇದನ್ನು ಗಮನಿಸಿದ ಚಹಾಲ್ ವದಂತಿಗಳಿಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಜೊತೆಗೆ ಇಂತಹ ವದಂತಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಚಹಲ್ ಪತ್ನಿ ಧನಶ್ರೀ ತನ್ನ ಸೋಶಿಯಲ್ ಮೀಡಿಯಾ ಖಾತೆಯಿಂದ ಚಹಾಲ್ ಹೆಸರನ್ನು ತೆಗೆದ ಬಳಿಕ ಈ ವದಂತಿಗಳು ಹಬ್ಬಲು ಆರಂಭಿಸಿದ್ದವು. ಬಳಕೆದಾರರು ಇದ್ದಕ್ಕಿದ್ದಂತೆ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಊಹಿಸಲು ಪ್ರಾರಂಭಿಸಿದ್ದರು. ಜೊತೆಗೆ ಬಹುಶಃ ಇಬ್ಬರೂ ವಿಭಿನ್ನ ಹಾದಿಯಲ್ಲಿ ನಡೆಯಲು ತಯಾರಿ ನಡೆಸುತ್ತಿದ್ದಾರೆ ಎಂಬ ಗುಸುಗುಸು ಆರಂಭಿಸಿದ್ದರು.
ಈ ವದಂತಿಗಳಿಗೆ ಈಗ ತೆರೆ ಎಲೆದಿರುವ ಯುಜ್ವೇಂದ್ರ ಚಹಾಲ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಒಂದನ್ನು ಹಾಕಿದ್ದು, ಇದರಲ್ಲಿ ಅವರು ತಮ್ಮ ಸಂಬಂಧದ ಬಗ್ಗೆ ಎದ್ದಿರುವ ವದಂತಿಗಳನ್ನು ಅಲ್ಲಗಳೆದಿದ್ದಾರೆ. ನಮ್ಮ ವೈವಾಹಿಕ ಬದುಕಿಗೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಿಗೂ ವಿನಮ್ರ ವಿನಂತಿ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಎಂದು ನೆಟ್ಟಿಗರ ಬಳಿ ಚಹಾಲ್ ವಿನಂತಿ ಮಾಡಿಕೊಂಡಿದ್ದಾರೆ.
ಚಹಾಲ್ ಮತ್ತು ಧನಶ್ರೀ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಂದ ಈ ಇಡೀ ವದಂತಿ ಪ್ರಾರಂಭವಾಯಿತು. ವಾಸ್ತವವಾಗಿ, ಚಹಾಲ್ ಇತ್ತೀಚೆಗೆ Instagram ಪೋಸ್ಟ್ನಲ್ಲೊ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ಹೊಸ ಜೀವನ ಪ್ರಾರಂಭವಾಗುತ್ತಿದೆ ಎಂದು ಬರೆಯಲಾಗಿತ್ತು. ಇದನ್ನು ನೋಡಿದ ನೆಟ್ಟಿಗರು ಬಹುಶಃ ಚಹಾಲ್ ಮತ್ತು ಧನಶ್ರೀ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ಊಹಿಸಿದ್ದರು. ನಂತರ ಇದ್ದಕ್ಕಿದ್ದಂತೆ ಧನಶ್ರೀ ತಮ್ಮ Instagram ಖಾತೆಯಲ್ಲಿ ತಮ್ಮ ಹೆಸರಿನೊಂದಿಗೆ ಇದ್ದ ಚಹಾಲ್ ಅವರ ಹೆಸರನ್ನು ತೆಗೆದುಹಾಕಿದ್ದರು. ಈ ಒಂದು ಬದಲಾವಣೆಯು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಬಳಿಕ ಇಷ್ಟೆಲ್ಲ ವದಂತಿಗಳು ಕೇಳಲಾರಂಭಿಸಿದವು.
ಇಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೀಗೆ
ಚಹಾಲ್ ಮತ್ತು ಧನಶ್ರೀ ಅವರ ಪ್ರೇಮಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ಕೋವಿಡ್‌ನಿಂದಾಗಿ ಲಾಕ್‌ಡೌನ್ ವಿಧಿಸಿದಾಗ, ಚಹಲ್ ನೃತ್ಯ ಕಲಿಯಲು ನಿರ್ಧರಿಸಿದ್ದರು. ಅದೇ ಸಮಯದಲ್ಲಿ ಧನಶ್ರೀ ನೃತ್ಯ ಶಿಕ್ಷಕಿಯಾಗಿದ್ದು, ನೃತ್ಯ ಕಲಿಯಲು ಚಹಲ್, ಧನಶ್ರೀಯನ್ನು ಸಂಪರ್ಕಿಸಿದರು. ಈ ವೇಳೆ ನೃತ್ಯ ಕಲಿಯುವ, ಕಲಿಸುವ ನಡುವೆ ಇಬ್ಬರ ನಡುವೆ ಪ್ರೀತಿ ಅರಳಿತು ಮತ್ತು ಇಬ್ಬರ ಪ್ರೇಮಕಥೆ ಪ್ರಾರಂಭವಾಯಿತು. ಆ ನಂತರ ಇಬ್ಬರೂ ಮದುವೆಯಾದರು.