Vinod Kambli: ಸಂಕಷ್ಟದಲ್ಲಿದ್ದ ವಿನೋದ್ ಕಾಂಬ್ಳಿಗೆ ಕೆಲಸದ ಆಫರ್ ನೀಡಿದ ಉದ್ಯಮಿ; ತಿಂಗಳಿಗೆ ಸಂಬಳವೆಷ್ಟು ಗೊತ್ತಾ?

Vinod Kambli: ಉದ್ಯಮಿ ಸಂದೀಪ್ ಥೋರಟ್ ಅವರು ವಿನೋದ್ ಕಾಂಬ್ಳಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳದಲ್ಲಿ ಉದ್ಯೋಗದ ಆಫರ್ ನೀಡಿದ್ದಾರೆ. ಮುಂಬೈನ ಸಹ್ಯಾದ್ರಿ ಇಂಡಸ್ಟ್ರಿಯಲ್ ಗ್ರೂಪ್‌ನ ಫೈನಾನ್ಸ್ ಕಂಪನಿಯಲ್ಲಿ ಅವರಿಗೆ ಕೆಲಸ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.

Vinod Kambli: ಸಂಕಷ್ಟದಲ್ಲಿದ್ದ ವಿನೋದ್ ಕಾಂಬ್ಳಿಗೆ ಕೆಲಸದ ಆಫರ್ ನೀಡಿದ ಉದ್ಯಮಿ; ತಿಂಗಳಿಗೆ ಸಂಬಳವೆಷ್ಟು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Aug 18, 2022 | 9:23 PM

ಕೆಲಸವಿಲ್ಲದೆ, ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಗೆ (Vinod Kambli) ಕೆಲಸ ಕೊಡಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ. ಜೊತೆಗೆ ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂ. ಸಂಬಳವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಾಂಬ್ಳಿ, ನಾನು ನಿರುದ್ಯೋಗಿಯಾಗಿದ್ದೇನೆ. ನಮ್ಮ ಕುಟುಂಬವು ಬಿಸಿಸಿಐ (BCCI) ನೀಡುವ ಪಿಂಚಣಿಯಿಂದ ಬದುಕು ಸಾಗಿಸುತ್ತಿದೆ. ತಿಂಗಳಿಗೆ 30 ಸಾವಿರ ಪಿಂಚಣಿ ಬರುತ್ತಿದ್ದು, ಇದರೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ ಎಂದು ನೋವು ಹಂಚಿಕೊಂಡಿದ್ದರು.

ಉದ್ಯಮಿ ಸಂದೀಪ್ ಥೋರಟ್ ಅವರು ವಿನೋದ್ ಕಾಂಬ್ಳಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳದಲ್ಲಿ ಉದ್ಯೋಗದ ಆಫರ್ ನೀಡಿದ್ದಾರೆ. ಮುಂಬೈನ ಸಹ್ಯಾದ್ರಿ ಇಂಡಸ್ಟ್ರಿಯಲ್ ಗ್ರೂಪ್‌ನ ಫೈನಾನ್ಸ್ ಕಂಪನಿಯಲ್ಲಿ ಅವರಿಗೆ ಕೆಲಸ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ. 2019 ರವರೆಗೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಾ ಬದುಕು ಸಾಗಿಸುತ್ತಿದ್ದ ಕಾಂಬ್ಳಿಗೆ ಕೊರೊನಾ ಸರಿಯಾದ ಹೊಡೆತವನ್ನೇ ನೀಡಿತ್ತು. ಕೊರೊನಾದಿಂದ ಇಡೀ ದೇಶವನ್ನೇ ಲಾಕ್​ಡೌನ್ ಮಾಡಬೇಕಾಯಿತು. ಇದರಿಂದ ವಿನೋದ್ ಕಾಂಬ್ಳಿಗೆ ಯಾವುದೇ ಕೆಲಸ ಇರಲಿಲ್ಲ. ಈಗ ವಿನೋದ್ ಕಾಂಬ್ಳಿ ಈ ಹೊಸ ಉದ್ಯೋಗದ ಪ್ರಸ್ತಾಪವನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಕಾದುನೋಡಬೇಕಾದ ವಿಷಯವಾಗಿದೆ.

ಇದು ನಮ್ಮೆಲ್ಲರ ವೈಫಲ್ಯ

ಉದ್ಯೋಗದ ಪ್ರಸ್ತಾಪವನ್ನು ನೀಡಿದ ಕೈಗಾರಿಕೋದ್ಯಮಿ ಸಂದೀಪ್ ಥೋರಟ್, ವಿನೋದ್ ಕಾಂಬ್ಳಿ ಇಂತಹ ಪರಿಸ್ಥಿತಿಯನ್ನು ಏಕೆ ಎದುರಿಸಬೇಕು?. ಅವರು ಭಾರತೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂದು ಕುಟುಂಬದ ಖರ್ಚು ಭರಿಸಲಾಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ನಮ್ಮೆಲ್ಲರ ವೈಫಲ್ಯ ಎಂದಿದ್ದಾರೆ.

ಈ ಹಿಂದೆ ವಿನೋದ್ ಕಾಂಬ್ಳಿ ಅವರು ಸಚಿನ್ ತೆಂಡೂಲ್ಕರ್ ಅವರ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಮಾರ್ಗದರ್ಶಕರಾಗಿದ್ದರು. ಆದರೆ ನಂತರ ಅವರು ಅಲ್ಲಿನ ಕೆಲಸವನ್ನು ಕಾರಣಾಂತರಗಳಿಂದ ತೊರೆದಿದ್ದರು. ನಾನು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುತ್ತಿದ್ದೆ. ಇದಾದ ಬಳಿಕ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಕ್ಯಾಬ್​ನಲ್ಲಿ ಹೋಗುತ್ತಿದ್ದೆ. ಅಲ್ಲದೆ ಸಂಜೆಯವರೆಗೆ ಬಿಕೆಸಿ ಗ್ರೌಂಡ್ ನಲ್ಲಿ ಕೋಚಿಂಗ್ ಕೊಡುತ್ತಿದ್ದೆ. ಇದು ನನಗೆ ತುಂಬಾ ಬೇಸರದ ದಿನಚರಿಯಾಗಿತ್ತು ಎಂದು ಕಾಂಬ್ಳಿ ತಿಳಿಸಿದ್ದಾರೆ.

ಸಚಿನ್‌ಗೆ ಎಲ್ಲವೂ ಗೊತ್ತು

ನನ್ನ ಪರಿಸ್ಥಿತಿಯ ಬಗ್ಗೆ ಸಚಿನ್‌ಗೆ ಎಲ್ಲವೂ ಗೊತ್ತು. ಆದರೆ ನಾನು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ತೆಂಡೂಲ್ಕರ್ ನನಗೆ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೆಲಸ ನೀಡಿದರು. ಅದರಿಂದ ನಾನು ತುಂಬಾ ಸಂತೋಷಪಟ್ಟಿದ್ದೆ. ಆತ ನನಗೆ ಬಹಳ ಒಳ್ಳೆಯ ಸ್ನೇಹಿತ. ಅವರು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ವಿನೋದ್ ಕಾಂಬ್ಳಿ ತಿಳಿಸಿದ್ದಾರೆ.

ಬಿಸಿಸಿಐನ ಪಿಂಚಣಿಯೊಂದೇ ಆಸರೆ

ಇನ್ನು ವಿನೋದ್ ಕಾಂಬ್ಳಿ, ‘ನಾನೊಬ್ಬ ನಿವೃತ್ತ ಕ್ರಿಕೆಟಿಗ. ನಾನು ಬಿಸಿಸಿಐ ಪಿಂಚಣಿ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿದ್ದೇನೆ. ಆಡಳಿತ ಮಂಡಳಿಯಿಂದ ಸಿಗುವ ಪಿಂಚಣಿಯೇ ನನ್ನ ಬದುಕಿಗೆ ಆಸರೆ. ಇದಕ್ಕಾಗಿ ನಾನು ಮಂಡಳಿಗೆ ಆಭಾರಿಯಾಗಿದ್ದೇನೆ. ಇದರಿಂದ ಹೇಗೋ ನನ್ನ ಕುಟುಂಬ ಬದುಕಲು ಸಾಧ್ಯವಾಗಿದೆ ಎಂದಿದ್ದಾರೆ.

Published On - 9:23 pm, Thu, 18 August 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ