IPL2023: ಪಂಜಾಬ್ ಜೊತೆಗಿನ ಅನಿಲ್ ಕುಂಬ್ಳೆ ಪ್ರಯಾಣ ಅಂತ್ಯ; ಹೊಸ ಕೋಚ್‌ಗಾಗಿ ಕಿಂಗ್ಸ್ ಹುಡುಕಾಟ

IPL2023: ತಂಡವು ಹೊಸ ಕೋಚ್‌ಗಾಗಿ ಹುಡುಕಾಟವನ್ನು ಪ್ರಾರಂಭಿಸಿದೆ. ಮುಖ್ಯ ಕೋಚ್ ಹುದ್ದೆಗೆ ಇದುವರೆಗೆ ಹೆಸರು ಬಹಿರಂಗಗೊಂಡಿರುವ ಸಂಭಾವ್ಯ ಅಭ್ಯರ್ಥಿಗಳಲ್ಲಿ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ಜೋಡಿ ಕೂಡ ಸೇರಿದೆ.

IPL2023: ಪಂಜಾಬ್ ಜೊತೆಗಿನ ಅನಿಲ್ ಕುಂಬ್ಳೆ ಪ್ರಯಾಣ ಅಂತ್ಯ; ಹೊಸ ಕೋಚ್‌ಗಾಗಿ ಕಿಂಗ್ಸ್ ಹುಡುಕಾಟ
Follow us
TV9 Web
| Updated By: ಪೃಥ್ವಿಶಂಕರ

Updated on:Aug 18, 2022 | 10:15 PM

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಸೀಸನ್ ಮುಗಿದು ಎರಡೂವರೆ ತಿಂಗಳುಗಳು ಕಳೆದಿವೆ. ಹೊಸ ಸೀಸನ್ ಪ್ರಾರಂಭವಾಗಲು ಸುಮಾರು 8 ತಿಂಗಳುಗಳು ಉಳಿದಿವೆ. ಇದರ ಹೊರತಾಗಿಯೂ, ಐಪಿಎಲ್ ವಿಭಿನ್ನ ಕಾರಣಗಳಿಗಾಗಿ ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಹೊಸ ಕೋಚ್ ನೇಮಕ ಆಗಿತ್ತು. ಈಗ ಮತ್ತೊಂದು ತಂಡ ತನ್ನ ಕೋಚಿಂಗ್ ಸಿಬ್ಬಂದಿಯನ್ನು ಬದಲಾವಣೆ ಮಾಡಲಿದೆ ಎಂಬ ವರದಿಗಳು ಕೇಳಿ ಬಂದಿವೆ. ಕನ್ನಡಿಗ ಅನಿಲ್ ಕುಂಬ್ಳೆಯೊಂದಿಗಿನ (Anil Kumble) ಪಯಣಕ್ಕೆ ಪಂಜಾಬ್ ಕಿಂಗ್ಸ್ (Punjab Kings) ಅಂತ್ಯ ಹಾಡುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ.

ಕುಂಬ್ಳೆಯೊಂದಿಗಿನ ಒಪ್ಪಂದ ಮುಂದುವರೆಯುವುದಿಲ್ಲ

ಕ್ರಿಕೆಟ್ ಪೋರ್ಟಲ್ ಕ್ರಿಕ್‌ಬಝ್‌ನಲ್ಲಿನ ವರದಿಯ ಪ್ರಕಾರ, ಭಾರತದ ದಂತಕಥೆ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಮೂರು ವರ್ಷಗಳ ಒಪ್ಪಂದವು ಈ ವರ್ಷ ಕೊನೆಗೊಳ್ಳುತ್ತಿದೆ. ಅಲ್ಲದೆ ಫ್ರಾಂಚೈಸಿ ಕೂಡ ಕುಂಬ್ಳೆ ಜೊತೆಗಿನ ಒಪ್ಪಂದವನ್ನು ವಿಸ್ತರಿಸಲು ಉತ್ಸುಕವಾಗಿಲ್ಲ. 2019 ರಲ್ಲಿ ಪಂಜಾಬ್ ಮತ್ತು ಕುಂಬ್ಳೆ ನಡುವೆ ಒಪ್ಪಂದ ಆಗಿತ್ತು, ಆದರೆ ಆಗಿನಿಂದ ತಂಡಕ್ಕೆ ಪ್ಲೇ ಆಫ್ ತಲುಪುವ ಅವಕಾಶ ಸಿಗಲಿಲ್ಲ. ಈ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಬಲಿಷ್ಟ ತಂಡವನ್ನೇ ಕಟ್ಟಿತ್ತು. ಆದರೆ ಅನೇಕ ಶ್ರೇಷ್ಠ ಆಟಗಾರರ ಉಪಸ್ಥಿತಿಯ ಹೊರತಾಗಿಯೂ, ತಂಡ ಯಶಸ್ಸನ್ನು ಪಡೆಯಲಿಲ್ಲ.

ಇದನ್ನೂ ಓದಿ
Image
ಕೋಟಿ ಕೋಟಿ ನಷ್ಟ ಕಟ್ಟಿಟ್ಟ ಬುತ್ತಿ! ಪಾಕಿಸ್ತಾನಕ್ಕೆ ತಲೆನೋವಾದ ಐಸಿಸಿಯ ಹೊಸ ವೇಳಾಪಟ್ಟಿ
Image
IPL: ಕೆಕೆಆರ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ; ಮೆಕಲಮ್ ಜಾಗಕ್ಕೆ ಬಂದವರ್ಯಾರು ಗೊತ್ತಾ?
Image
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ಗೆ ಉಳಿಗಾಲವಿಲ್ಲ ಎಂದ ವಿಶ್ವಕಪ್ ವಿಜೇತ ನಾಯಕ..! ಕಾರಣವೇನು ಗೊತ್ತಾ?

ಹೀಗಾಗಿ ಫ್ರಾಂಚೈಸಿ ಕುಂಬ್ಳೆ ಜತೆಗಿನ ಪಯಣ ಮುಗಿಸುವ ಹುಮ್ಮಸ್ಸಿನಲ್ಲಿದೆ. ವರದಿಯ ಪ್ರಕಾರ, ತಂಡವು ಹೊಸ ಕೋಚ್‌ಗಾಗಿ ಹುಡುಕಾಟವನ್ನು ಪ್ರಾರಂಭಿಸಿದೆ. ಮುಖ್ಯ ಕೋಚ್ ಹುದ್ದೆಗೆ ಇದುವರೆಗೆ ಹೆಸರು ಬಹಿರಂಗಗೊಂಡಿರುವ ಸಂಭಾವ್ಯ ಅಭ್ಯರ್ಥಿಗಳಲ್ಲಿ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ಜೋಡಿ ಕೂಡ ಸೇರಿದೆ. ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಮತ್ತು ಆ ಸಮಯದಲ್ಲಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಅವರನ್ನು ಕೋಚ್ ಮಾಡಲು ಪಂಜಾಬ್ ಉಸ್ತುಕವಾಗಿದೆ ಎಂಬ ವರದಿ ಹೊರಬಿದ್ದಿದೆ.

ಇವರಿಬ್ಬರಲ್ಲದೆ ಭಾರತದ ಮಾಜಿ ಕೋಚ್ ಮುಂದೆಯೂ ಪ್ರಸ್ತಾವನೆ ಇಡಲಾಗಿದೆ. ಆದರೆ, ಭಾರತದ ಆ ಮಾಜಿ ಕೋಚ್ ಯಾರು ಎಂಬ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಮುಂದಿನ ಒಂದು ವಾರದೊಳಗೆ ಹೊಸ ಕೋಚ್ ಬಗ್ಗೆ ಫ್ರಾಂಚೈಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಮಾರ್ಗನ್ ಮತ್ತು ಬೇಲಿಸ್ ಐಪಿಲ್ ಲಿಂಗ್

ಲೆಜೆಂಡರಿ ಎಡಗೈ ಬ್ಯಾಟ್ಸ್‌ಮನ್ ಮಾರ್ಗನ್ ಈ ವರ್ಷದ ಜೂನ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. IPL ನಲ್ಲಿ, ಅವರು ಕಳೆದ ವರ್ಷ ಅಂದರೆ IPL 2021 ರ ಸೀಸನ್​ ತನಕ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದರು. ಅಲ್ಲಿ ಅವರ ನಾಯಕತ್ವದಲ್ಲಿ ತಂಡ ಆ ಸೀಸನ್​ನಲ್ಲಿ ಫೈನಲ್‌ಗೆ ಪ್ರಯಾಣಿಸಿತು. ಆದಾಗ್ಯೂ, ಐಪಿಎಲ್ 2022 ರಲ್ಲಿ ಅವರನ್ನು ಯಾವುದೇ ತಂಡ ಖರೀದಿಸಲಿಲ್ಲ. ಅಲ್ಲದೆ ಮೋರ್ಗನ್ ಇನ್ನೂ ಕೋಚಿಂಗ್ ಅನುಭವವನ್ನು ಹೊಂದಿಲ್ಲ. ಮತ್ತೊಂದೆಡೆ, ಟ್ರೆವರ್ ಬೇಲಿಸ್ ಈ ಮೊದಲು ಐಪಿಎಲ್‌ನಲ್ಲಿ ಕೋಚ್ ಆಗಿದ್ದಾರೆ. ಅವರು 2015 ರಲ್ಲಿ ಇಂಗ್ಲೆಂಡ್‌ನ ಕೋಚ್ ಆಗುವ ಮೊದಲು ಎರಡು ಸೀಸನ್​ಗಳಲ್ಲಿ KKR ನ ತರಬೇತುದಾರರಾಗಿದ್ದರು. ಬಳಿಕ 2020 ಮತ್ತು 2021 ರ ಸೀಸನ್​ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

Published On - 10:15 pm, Thu, 18 August 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ