ಕೋಟಿ ಕೋಟಿ ನಷ್ಟ ಕಟ್ಟಿಟ್ಟ ಬುತ್ತಿ! ಪಾಕಿಸ್ತಾನಕ್ಕೆ ತಲೆನೋವಾದ ಐಸಿಸಿಯ ಹೊಸ ವೇಳಾಪಟ್ಟಿ

ಐಪಿಎಲ್‌ ಹಾಗೂ ಪಾಕಿಸ್ತಾನದ ಟಿ20 ಲೀಗ್ ಒಂದೇ ಸಮಯದಲ್ಲಿ ಆಯೋಜಿಸುತ್ತಿರುವುದು ಇದೇ ಮೊದಲು. ಎರಡೂ ಲೀಗ್‌ಗಳಲ್ಲಿ ಆಡುವ ಕ್ರಿಕೆಟಿಗರು ಯಾವ ಲೀಗ್ ಅನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು  ನೋಡಬೇಕಿದೆ.

ಕೋಟಿ ಕೋಟಿ ನಷ್ಟ ಕಟ್ಟಿಟ್ಟ ಬುತ್ತಿ! ಪಾಕಿಸ್ತಾನಕ್ಕೆ ತಲೆನೋವಾದ ಐಸಿಸಿಯ ಹೊಸ ವೇಳಾಪಟ್ಟಿ
Follow us
TV9 Web
| Updated By: ಪೃಥ್ವಿಶಂಕರ

Updated on:Aug 17, 2022 | 8:03 PM

ICC ಇತ್ತೀಚೆಗೆ ಹೊಸ FTP ಅಂದರೆ ಫ್ಯೂಚರ್ ಟೂರ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. FTP ಯಲ್ಲಿ ಮುಂಬರುವ ನಾಲ್ಕು ವರ್ಷಗಳಲ್ಲಿ ನಡೆಯುವ ಕ್ರಿಕೆಟ್ ಸರಣಿಗಳು, ICC ಪಂದ್ಯಾವಳಿಗಳು ಮತ್ತು ಲೀಗ್‌ಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಈ ಎಫ್‌ಟಿಪಿಯಲ್ಲಿನ ಕುತೂಹಲಕಾರಿ ವಿಷಯವೆಂದರೆ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ (India and Pakistan) ನಡೆಯುವ ಎರಡೂ ಟಿ20 ಲೀಗ್‌ಗಳು ಏಕಕಾಲದಲ್ಲಿ ನಡೆಯಲಿವೆ. ಐಪಿಎಲ್ ಮತ್ತು ಪಿಎಸ್ಎಲ್ ವೇಳಾಪಟ್ಟಿಯನ್ನು ಬಹುತೇಕ ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹೀಗಾದರೆ ಪಿಸಿಬಿ ಜೇಬಿಗೆ ಕೋಟಿ ಕೋಟಿ ಕತ್ತರಿ ಬೀಳುವುದಂತ್ತೂ ಖಚಿತ.

ಪಾಕಿಸ್ತಾನಕ್ಕೆ ಹೆಚ್ಚಿದ ಸಂಕಷ್ಟ

ಐಸಿಸಿಯ ಹೊಸ ವೇಳಾಪಟ್ಟಿಯಿಂದ ಪಾಕ್ ತಂಡ ಭಾರಿ ನಷ್ಟ ಅನುಭವಿಸಲಿದೆ. ಪಾಕಿಸ್ತಾನವು 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಬೇಕಾಗಿರುವುದು ಅವರ ಸಮಸ್ಯೆಗೆ ಕಾರಣವಾಗಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವುದರ ಹೊರತಾಗಿ, ಬಿಡುವಿಲ್ಲದ ದೇಶೀಯ ಪಂದ್ಯಾವಳಿಗಳ ಕಾರಣದಿಂದಾಗಿ, ಪಾಕಿಸ್ತಾನ್ ಸೂಪರ್ ಲೀಗ್ (PSL) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು 2025 ರಲ್ಲಿ ನಿಗಧಿತ ಸಮಯದಲ್ಲಿ ಆರಂಭಿಸುವುದು ಕಷ್ಟವಾಗಲಿದೆ. ಸಾಮಾನ್ಯವಾಗಿ ಐಪಿಎಲ್‌ ಮಾರ್ಚ್‌ನಲ್ಲಿ ಆರಂಭವಾಗಿ ಜೂನ್ ಮೊದಲ ವಾರದೊಳಗೆ ಅಂತ್ಯವಾಗಿ ಬಿಡುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಕೂಡ ತನ್ನ T20 ಲೀಗನ್ನೂ ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಆಯೋಜಿಸುತ್ತಿತ್ತು. ಆದರೀಗ ಆ ತಿಂಗಳಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸುತ್ತಿದ್ದು, ಪಿಸಿಎಲ್​ ಅನ್ನು ಮಾರ್ಚ್ ಮತ್ತು ಮೇ ನಡುವೆ ಆಯೋಜಿಸಬೇಕಾಗಿದೆ. ಹೀಗಾದರೆ ಐಪಿಎಲ್ ಮತ್ತು ಪಿಸಿಎಲ್ ಒಂದೇ ಸಮಯದಲ್ಲಿ ನಡೆಯಲಿವೆ. ಆದ್ದರಿಂದ ಚಿನ್ನದ ಮೊಟ್ಟೆಯಿಡುವ ಐಪಿಎಲ್​ ಕಡೆ ಪ್ರಮುಖ ಆಟಗಾರರು ವಾಲುವುದರಿಂದ ಪಿಸಿಎಲ್​ನಲ್ಲಿ ಆಡುವ ಪ್ರಮುಖ ಆಟಗಾರರ ಸಂಖ್ಯೆ ಕಡಿಮೆಯಾಗಲಿದೆ.

ಇದನ್ನೂ ಓದಿ
Image
IPL: ಕೆಕೆಆರ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ; ಮೆಕಲಮ್ ಜಾಗಕ್ಕೆ ಬಂದವರ್ಯಾರು ಗೊತ್ತಾ?
Image
ICC: ಬರೋಬ್ಬರಿ 183 ಅಂತಾರಾಷ್ಟ್ರೀಯ ಪಂದ್ಯಗಳು! 2027ರವರೆಗೆ ಟೀಂ ಇಂಡಿಯಾಗೆ ಬಿಡುವೇ ಇಲ್ಲ
Image
ICC Men’s Cricket Schedule: 2027 ರವರೆಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದ ಐಸಿಸಿ

ಬಹಳ ಸಮಯದ ನಂತರ ಐಸಿಸಿ ಟೂರ್ನಿಗೆ ಆತಿಥ್ಯವಹಿಸಲಿದೆ ಪಾಕ್

ಪಾಕಿಸ್ತಾನ ಬಹಳ ದಿನಗಳ ನಂತರ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದೆ. ಐಸಿಸಿಯ ಕಳೆದ ಮೂರು ಎಫ್‌ಟಿಪಿಗಳಲ್ಲಿ ಪಾಕಿಸ್ತಾನಕ್ಕೆ ಯಾವುದೇ ಟೂರ್ನಿಯ ಆತಿಥ್ಯ ನೀಡಿರಲಿಲ್ಲ. 2008ರಲ್ಲಿ ಅಲ್ಲಿಗೆ ತೆರಳಿದ್ದ ಶ್ರೀಲಂಕಾ ತಂಡದ ಮೇಲೆ ನಡೆದ ಉಗ್ರರ ದಾಳಿಯ ನಂತರ ಪಾಕಿಸ್ತಾನಕ್ಕೆ ಈ ಅವಕಾಶ ನೀಡಿರಲಿಲ್ಲ. ಇದಕ್ಕೂ ಮೊದಲು 1996ರಲ್ಲಿ ಮಾತ್ರ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು.

ಐಪಿಎಲ್ ಅವಧಿಯಲ್ಲಿ ಮೊದಲ ಬಾರಿಗೆ ಟಿ20 ಲೀಗ್

ಐಪಿಎಲ್‌ ಹಾಗೂ ಪಾಕಿಸ್ತಾನದ ಟಿ20 ಲೀಗ್ ಒಂದೇ ಸಮಯದಲ್ಲಿ ಆಯೋಜಿಸುತ್ತಿರುವುದು ಇದೇ ಮೊದಲು. ಎರಡೂ ಲೀಗ್‌ಗಳಲ್ಲಿ ಆಡುವ ಕ್ರಿಕೆಟಿಗರು ಯಾವ ಲೀಗ್ ಅನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು  ನೋಡಬೇಕಿದೆ. ಚಾಂಪಿಯನ್ಸ್ ಟ್ರೋಫಿ 2025 ಸುಮಾರು 30 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ICC ಪಂದ್ಯಾವಳಿಯಾಗಿದೆ. ಐಸಿಸಿ ಟಿ20 ಲೀಗ್‌ಗೆ ಯಾವುದೇ ಅವಕಾಶ ನೀಡಿಲ್ಲ. ಹೀಗಾಗಿ, ಎಲ್ಲಾ ಇತರ ದೇಶಗಳು ತಮ್ಮ ದೇಶದ ಆಟಗಾರರನ್ನು ಹೊರತುಪಡಿಸಿ ಆಯ್ದ ವಿದೇಶಿ ಆಟಗಾರರೊಂದಿಗೆ ತಮ್ಮದೇ ಆದ T20 ಲೀಗ್ ಅನ್ನು ಆಯೋಜಿಸಬೇಕಾಗುತ್ತದೆ.

ಭಾರತ ತಂಡದ ವೇಳಾಪಟ್ಟಿ ತುಂಬಾ ಕಾರ್ಯನಿರತ

ಟೀಂ ಇಂಡಿಯಾ ಮುಂದಿನ ಐದು ವರ್ಷಗಳಲ್ಲಿ ಅಂದರೆ ಮೇ 2023 ರಿಂದ ಏಪ್ರಿಲ್ 2027 ರವರೆಗೆ ಐಸಿಸಿಯ ಫ್ಯೂಚರ್ ಟೂರ್ ಪ್ರೋಗ್ರಾಂ (ಎಫ್‌ಟಿಪಿ) ಅಡಿಯಲ್ಲಿ 141 ದ್ವಿಪಕ್ಷೀಯ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಐದು ವರ್ಷಗಳಲ್ಲಿ ಭಾರತ ತಂಡ 38 ಟೆಸ್ಟ್, 42 ಏಕದಿನ ಮತ್ತು 61 ಟಿ20 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುವುದಿಲ್ಲ.

Published On - 8:03 pm, Wed, 17 August 22