ICC: ಬರೋಬ್ಬರಿ 183 ಅಂತಾರಾಷ್ಟ್ರೀಯ ಪಂದ್ಯಗಳು! 2027ರವರೆಗೆ ಟೀಂ ಇಂಡಿಯಾಗೆ ಬಿಡುವೇ ಇಲ್ಲ

ICC: ಕಳೆದ ಎಫ್‌ಟಿಪಿಯಲ್ಲಿ 151 ಟೆಸ್ಟ್‌ಗಳು, 241 ಏಕದಿನ ಪಂದ್ಯಗಳು ಮತ್ತು 301 T20 ಪಂದ್ಯಗಳು ಇದ್ದವು. ಆದರೆ ಈ ಬಾರಿ 173 ಟೆಸ್ಟ್, 281 ಏಕದಿನ, 326 ಟಿ20 ಪಂದ್ಯಗಳು ನಡೆಯಲಿವೆ.

ICC: ಬರೋಬ್ಬರಿ 183 ಅಂತಾರಾಷ್ಟ್ರೀಯ ಪಂದ್ಯಗಳು! 2027ರವರೆಗೆ ಟೀಂ ಇಂಡಿಯಾಗೆ ಬಿಡುವೇ ಇಲ್ಲ
rohit sharma
Follow us
TV9 Web
| Updated By: ಪೃಥ್ವಿಶಂಕರ

Updated on: Aug 17, 2022 | 5:01 PM

ಐಸಿಸಿಯ (ICC) ಬಿಡುವಿಲ್ಲದ ವೇಳಾಪಟ್ಟಿಯಿಂದ ಬೇಸತ್ತಿರುವ ಹಲವು ಕ್ರಿಕೆಟಿಗರು ಈಗಾಗಲೇ ಒಂದು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಆರಂಭ ಮಾಡಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೆ, ಇತ್ತೀಚೆಗೆ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ ಬೆನ್ ಸ್ಟೋಕ್ಸ್ (Ben Stokes). ವಿದಾಯದ ಸಂದರ್ಭದಲ್ಲಿ ಸ್ಟೋಕ್ಸ್ ಬಿಡುವಿಲ್ಲದ ವೇಳಾಪಟ್ಟಿ ನನ್ನ ಈ ನಿರ್ಧಾರಕ್ಕೆ ಕಾರಣ ಎಂಬ ಹೇಳಿಕೆ ನೀಡಿದ್ದರು. ಸ್ಟೋಕ್ಸ್ ಅವರ ಈ ನಿರ್ಧಾರವು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿತು. ಆದರೆ ಸ್ಟೋಕ್ಸ್ ನಿರ್ಧಾರ ಇನ್ನೂ ಐಸಿಸಿ ಮತ್ತು ಇತರ ಕ್ರಿಕೆಟ್ ಮಂಡಳಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದೆನಿಸುತ್ತಿದೆ. ವಾಸ್ತವವಾಗಿ, ICC ಇಂದು 2027ರ ವರೆಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಐಸಿಸಿಯ ಹೊಸ ವೇಳಾಪಟ್ಟಿ ಅನೇಕ ಕ್ರಿಕೆಟಿಗರು ಬೆವರುವಂತೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು.

  1. ವಾಸ್ತವವಾಗಿ, ಬುಧವಾರ ಐಸಿಸಿ ಬಿಡುಗಡೆ ಮಾಡಿದ ಎಫ್‌ಟಿಪಿ 2023-27 ರಲ್ಲಿ, ಪಂದ್ಯಗಳ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಾಗಿದೆ. ಅಂದರೆ ಮುಂದಿನ ಐದು ವರ್ಷಗಳಲ್ಲಿ 777 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ 2 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2 ಏಕದಿನ ವಿಶ್ವಕಪ್, 2 T20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಕೂಡ ಇರುತ್ತದೆ.
  2. ಕಳೆದ ಎಫ್‌ಟಿಪಿಯಲ್ಲಿ 151 ಟೆಸ್ಟ್‌ಗಳು, 241 ಏಕದಿನ ಪಂದ್ಯಗಳು ಮತ್ತು 301 T20 ಪಂದ್ಯಗಳು ಇದ್ದವು. ಆದರೆ ಈ ಬಾರಿ 173 ಟೆಸ್ಟ್, 281 ಏಕದಿನ, 326 ಟಿ20 ಪಂದ್ಯಗಳು ನಡೆಯಲಿವೆ. ಹೊಸ ಎಫ್‌ಟಿಪಿಯಲ್ಲಿ, ಹಿಂದಿನ ವೇಳಾಪಟ್ಟಿಗಿಂತ 22 ಟೆಸ್ಟ್‌, 40 ಏಕದಿನ ಮತ್ತು 25 T20 ಪಂದ್ಯಗಳನ್ನು ಹೆಚ್ಚಾಗಿ ಆಡಲಾಗುತ್ತದೆ.
  3. ಭಾರತದ ಬಗ್ಗೆ ಮಾತನಾಡುವುದಾದರೆ, ಹೊಸ ಎಫ್‌ಟಿಪಿ ಪ್ರಕಾರ, ಟೀಮ್ ಇಂಡಿಯಾ 2023 ರಿಂದ ಫೆಬ್ರವರಿ 2027 ರವರೆಗೆ 44 ಟೆಸ್ಟ್, 63 ಏಕದಿನ ಮತ್ತು 76 T20 ಪಂದ್ಯಗಳನ್ನು ಆಡಲಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಟೀಮ್ ಇಂಡಿಯಾ ಏಪ್ರಿಲ್ 2027 ರವರೆಗೆ ಪ್ರತಿ ತಿಂಗಳು ಮೈದಾನದಲ್ಲಿ ಕಾಣಿಸಿಕೊಳ್ಳಲ್ಲಿದೆ. ಆದರೆ ಆಗಸ್ಟ್ 2024 ರಲ್ಲಿ ಮಾತ್ರ ಟೀಮ್ ಇಂಡಿಯಾ ಯಾವುದೇ ದೇಶದೆದುರು ಸರಣಿಯನ್ನು ಆಡುವುದಿಲ್ಲ.
  4. 2023ರ ವಿಶ್ವಕಪ್‌ಗೂ ಮುನ್ನ ಭಾರತ ತಂಡ 27 ಏಕದಿನ ಪಂದ್ಯಗಳನ್ನು ಆಡಲಿದೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ತವರಿನಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಳಿಕ ವಿದೇಶದಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
  5. ಇದನ್ನೂ ಓದಿ
    Image
    ICC Men’s Cricket Schedule: 2027 ರವರೆಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದ ಐಸಿಸಿ
    Image
    ಸೂರ್ಯಕುಮಾರ್​ನನ್ನು ಡಿವಿಲಿಯರ್ಸ್​ಗೆ ಹೋಲಿಸಿದ ಪಾಂಟಿಂಗ್; ಲೇವಡಿ ಮಾಡಿದ ಪಾಕ್ ಕ್ರಿಕೆಟರ್
    Image
    MS Dhoni: 2 ವರ್ಷಗಳ ಹಿಂದೆ ಇದೆ ದಿನ ಯಾರೂ ಊಹಿಸದ ನಿರ್ಧಾರ ಪ್ರಕಟಿಸಿದ್ದ ಧೋನಿ- ರೈನಾ..!
  6. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ತಲಾ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 5, ಬಾಂಗ್ಲಾದೇಶ ವಿರುದ್ಧ 2 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಹಾಗೆಯೇ, ಡಿಸೆಂಬರ್ 2024 ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ