‘ಬಿಸಿಸಿಐ ಮಾಡುತ್ತಿರುವುದು ಸರಿ ಇಲ್ಲ’; ಕ್ರಿಕೆಟ್​ ಬಿಗ್​ಬಾಸ್​ಗಳ ಮೇಲೆ ಮುನಿದ ಐಪಿಎಲ್ ಫ್ರಾಂಚೈಸಿಗಳು

ಆಫ್ರಿಕಾ T20 ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಒಂದು ತಂಡವನ್ನು ಖರೀದಿಸಿದೆ. ಹೀಗಾಗಿ ಆ ತಂಡಕ್ಕೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮೆಂಟರ್ ಆಗಿ ತೆಗೆದುಕೊಳ್ಳಲು ಚೆನ್ನೈ ಬಯಸಿತ್ತು.

‘ಬಿಸಿಸಿಐ ಮಾಡುತ್ತಿರುವುದು ಸರಿ ಇಲ್ಲ’; ಕ್ರಿಕೆಟ್​ ಬಿಗ್​ಬಾಸ್​ಗಳ ಮೇಲೆ ಮುನಿದ ಐಪಿಎಲ್ ಫ್ರಾಂಚೈಸಿಗಳು
TV9kannada Web Team

| Edited By: pruthvi Shankar

Aug 15, 2022 | 4:37 PM

ಇಂಡಿಯನ್ ಪ್ರೀಮಿಯರ್ ಲೀಗ್​ನ (Indian Premier League) ಯಶಸ್ಸನ್ನು ನೋಡಿದ ಬಳಿಕ ವಿವಿಧ ದೇಶಗಳು ತಮ್ಮ ದೇಶದಲ್ಲೂ ಐಪಿಎಲ್ ಮಾದರಿಯ ಕ್ರಿಕೆಟ್ ಲೀಗ್ ಆರಂಭಿಸಲು ಪ್ರಾರಂಭಿಸಿವೆ. ಐಪಿಎಲ್‌ಗೆ ಸಮಾನವಾದ ಯಶಸ್ಸನ್ನು ಬೇರೆ ಯಾವುದೇ ಲೀಗ್‌ಗೆ ಪಡೆಯುವ ಸಾಧ್ಯತೆಯಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಬಿಸಿಸಿಐನ (BCCI) ಒಂದು ನಿರ್ಧಾರವು ಈ ಎಲ್ಲಾ ಲೀಗ್‌ಗಳು ಜನಪ್ರಿಯತೆ ಮತ್ತು ದೊಡ್ಡ ಆದಾಯವನ್ನು ಗಳಿಸುವುದನ್ನು ತಡೆಯುತ್ತಿದೆ. ಅದೆನೆಂದರೆ, ವಿದೇಶಿ ಲೀಗ್‌ನಲ್ಲಿ ಭಾರತದ ಆಟಗಾರರಿಗೆ ಆಡಲು ಬಿಸಿಸಿಐ ಅವಕಾಶ ನೀಡಿಲ್ಲ. ಹೀಗಾಗಿ ಈ ನಿರ್ಧಾರವು ಇತರ ಲೀಗ್ ಕ್ರಿಕೆಟ್ ಸ್ಪರ್ಧೆಗಳ ಮೇಲೆ ಪರಿಣಾಮ ಬೀರಲಿದೆ. ವಿಶ್ವ ಪ್ರಸಿದ್ಧ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುತ್ತಾರೆ. ಆದರೆ ಭಾರತದ ಕ್ರಿಕೆಟಿಗರು ಬೇರೆ ಲೀಗ್‌ಗಳಲ್ಲಿ ಆಡುವುದಿಲ್ಲ. ಬಿಸಿಸಿಐನ ಅದೇ ನಿರ್ಧಾರ ಇದೀಗ ಐಪಿಎಲ್ ಫ್ರಾಂಚೈಸಿಗಳಿಗೆ ಸಂಕಷ್ಟ ತಂದೊಡ್ಡಿದೆ.

ವಿದೇಶಿ ಲೀಗ್​ಗಳಲ್ಲೂ ಹೂಡಿಕೆ ಮಾಡಿದ IPL ಫ್ರಾಂಚೈಸಿಗಳು

ಕಳೆದ 15 ವರ್ಷಗಳಲ್ಲಿ ಐಪಿಎಲ್‌ನಲ್ಲಿ ಸಾಧಿಸಿದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಫ್ರಾಂಚೈಸಿಗಳು ಈಗ ತಮ್ಮ ಆದಾಯವನ್ನು ವಿಸ್ತರಿಸಲು ಪ್ರಾರಂಭಿಸಿವೆ. ಇದಕ್ಕೆ ಪೂರಕವೆಂಬಂತೆ 6 ಐಪಿಎಲ್ ಫ್ರಾಂಚೈಸಿಗಳು ಯುಎಇ ಹಾಗೂ ಆಫ್ರಿಕಾ ಟಿ20 ಲೀಗ್​ನಲ್ಲಿ ತಂಡಗಳನ್ನು ಖರೀದಿಸಿವೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ 3-4 ವರ್ಷಗಳಿಂದ ಇದು ನಡೆಯುತ್ತಿದೆ. ಆದರೆ ಐಪಿಎಲ್​ನಷ್ಟೂ ಈ ಲೀಗ್ ಯಶಸ್ಸು ಪಡೆದಿಲ್ಲ. ಐಪಿಎಲ್‌ನಲ್ಲಿ ಆಡಿದ ಅಥವಾ ಕೋಚಿಂಗ್‌ನ ಭಾಗವಾಗಿದ್ದ ಆಟಗಾರರಿಗೆ ಈ ಲೀಗ್‌ನಲ್ಲಿ ಆಡಲು ಅವಕಾಶ ಸಿಗುತ್ತದೆ ಎಂದು ಐಪಿಎಲ್ ಫ್ರಾಂಚೈಸಿಗಳು ನಿರೀಕ್ಷಿಸಿದ್ದವು. ಆದರೆ ಇದಕ್ಕೂ ಕೂಡ ಬಿಸಿಸಿಐ ಅನುಮತಿ ನಿರಾಕರಿಸಿದೆ.

ಇದು ತಪ್ಪು ನಿರ್ಧಾರ

ಆಫ್ರಿಕಾ T20 ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಒಂದು ತಂಡವನ್ನು ಖರೀದಿಸಿದೆ. ಹೀಗಾಗಿ ಆ ತಂಡಕ್ಕೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮೆಂಟರ್ ಆಗಿ ತೆಗೆದುಕೊಳ್ಳಲು ಚೆನ್ನೈ ಬಯಸಿತ್ತು. ಆದರೆ ಇದಕ್ಕೆ ಬಿಸಿಸಿಐ ಅನುಮತಿ ನಿರಾಕರಿಸಿದೆ. ಒಂದು ವೇಳೆ ವಿದೇಶಿ ಲೀಗ್​ಗಳಲ್ಲಿ ಕೆಲಸ ನಿರ್ವಹಿಸಬೇಕೆಂದರೆ ಅವರು ಐಪಿಎಲ್​ನಿಂದ ನಿವೃತ್ತಿ ಪಡೆಯಬೇಕು ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಬಿಸಿಸಿಐನ ಈ ನಿರ್ಧಾರವೂ ಫ್ರಾಂಚೈಸ್ ಮಾಲೀಕರಿಗೆ ತಲೆನೋವು ತಂದ್ದೊಡ್ಡಿದೆ.

ಫ್ರಾಂಚೈಸ್ ಅಧಿಕಾರಿ ಹೇಳಿದ್ದೇನು?

ಇದನ್ನೂ ಓದಿ

ನಾವು ಬಿಸಿಸಿಐನಿಂದ ಅಧಿಕೃತ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ನಮಗೆ ಏನೇ ಮಾಹಿತಿ ಸಿಕ್ಕಿದರೂ ಅದು ಮಾಧ್ಯಮಗಳ ಮೂಲಕವೇ. ಇದು ನಿಜವಾಗಿದ್ದರೆ, ಬಿಸಿಸಿಐ ನಿಲುವು ತಪ್ಪಾಗಿದೆ, ಎಂದು ಇನ್‌ಸೈಡ್‌ಸ್ಪೋರ್ಟ್ ಅಧಿಕಾರಿಯೊಬ್ಬರು ಫ್ರಾಂಚೈಸಿ ಅಧಿಕಾರಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada