220 ರ ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಚಚ್ಚಿದ ಅಭಿನವ್; ಮನೀಶ್ ಅಬ್ಬರದ ನಡುವೆಯೂ ಸೋತ ಗುಲ್ಬರ್ಗಾ

Maharaja Trophy: ಅಭಿನವ್ ಮನೋಹರ್ ಕೇವಲ 25 ಎಸೆತಗಳಲ್ಲಿ 220 ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಗಳಿಸಿದರು. ಈ ಅಜೇಯ ಮತ್ತು ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು.

220 ರ ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಚಚ್ಚಿದ ಅಭಿನವ್; ಮನೀಶ್ ಅಬ್ಬರದ ನಡುವೆಯೂ ಸೋತ ಗುಲ್ಬರ್ಗಾ
Follow us
TV9 Web
| Updated By: ಪೃಥ್ವಿಶಂಕರ

Updated on: Aug 15, 2022 | 3:19 PM

ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಲೀಗ್‌ (Maharaja Trophy) ದಿನ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಆಗಸ್ಟ್ 14 ರಂದು ನಡೆದ ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಮಂಗಳೂರು ಯುನೈಟೆಡ್ ನಡುವಿನ ಈ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ 3 ವಿಕೆಟ್‌ಗಳ ಜಯ ಸಾಧಿಸಿತು. ಗುಲ್ಬರ್ಗ್ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ (Manish Pandey) ತಮ್ಮ ತಂಡದ ಪರವಾಗಿ ನಾಯಕತ್ವದ ಇನ್ನಿಂಗ್ಸ್‌ ಆಡಿದರು. ಆದರೆ ಮನಿಶ್ ತ್ವರಿತವಾಗಿ ರನ್ ಗಳಿಸಿದರಾದರೂ ಮಂಗಳೂರು ಯುನೈಟೆಡ್‌ ತಂಡದ 27 ವರ್ಷದ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ (Abhinav Manohar) ಅವರ ಮುಂದೆ ಮಂಡಿಯೂರಬೇಕಾಯಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 192 ರನ್ ಗಳಿಸಿತು. ಉತ್ತರವಾಗಿ ಮಂಗಳೂರು ಯುನೈಟೆಡ್ 2 ಎಸೆತಗಳು ಉಳಿದಿರುವಂತೆಯೇ 7 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು. ಮಂಗಳೂರು ಯುನೈಟೆಡ್ ತಂಡವನ್ನು ಗೆಲ್ಲುವಲ್ಲಿ 27 ವರ್ಷದ ಅಭಿನವ್ ಮನೋಹರ್ ಪಾತ್ರ ಪ್ರಮುಖವಾಗಿತ್ತು.

ಮನೀಶ್ ಪಾಂಡೆ ಸ್ಫೋಟಕ ಇನ್ನಿಂಗ್ಸ್ ವ್ಯರ್ಥ

ಗುಲ್ಬರ್ಗ್ ಮಿಸ್ಟಿಕ್ಸ್ ಪರ ಮನೀಶ್ ಪಾಂಡೆ ಅತ್ಯಧಿಕ ರನ್ ಗಳಿಸಿದರು. ಅವರು 45 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 192 ಸ್ಟ್ರೈಕ್ ರೇಟ್‌ನಲ್ಲಿ 86 ರನ್ ಗಳಿಸಿದರು. ನಾಯಕ ಮನೀಶ್ ಪಾಂಡೆ ಅವರ ಈ ಅಜೇಯ ಇನ್ನಿಂಗ್ಸ್‌ನಿಂದಾಗಿ ಗುಲ್ಬರ್ಗ್ ಮಿಸ್ಟಿಕ್ಸ್ ಮಂಗಳೂರು ಯುನೈಟೆಡ್ ಎದುರು 193 ರನ್‌ಗಳ ಗುರಿಯನ್ನು ನೀಡಿತು.

220 ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಗಳಿಸಿದ ಅಭಿನವ್ ಮನೋಹರ್

ಮಂಗಳೂರು ಯುನೈಟೆಡ್ ಗುರಿ ಬೆನ್ನತ್ತಲು ಆರಂಭಿಸಿದಾಗ ಅದರ ಮೊದಲ ವಿಕೆಟ್ ಶೂನ್ಯಕ್ಕೆ ಪತನವಾಯಿತು. 50 ರನ್‌ಗಳ ಅಂತರದಲ್ಲಿ ತಂಡದ 3 ವಿಕೆಟ್‌ಗಳು ಪತನಗೊಂಡವು. ಆದರೆ ಇದರ ನಂತರ ಅಭಿನವ್ ಮನೋಹರ್ ಅವರ ಆಕ್ರಮಣಕಾರಿ ಶೈಲಿಯು ಮನೀಷ್ ಪಾಂಡೆ ಅವರ ತಂಡ ಗುಲ್ಮಾರ್ಗ್ ಮಿಸ್ಟಿಕ್ಸ್ ತಂಡದ ಗೆಲುವಿಗೆ ಕೊಡಲಿ ಹಾಕಿತು.

ಅಭಿನವ್ ಮನೋಹರ್ ಕೇವಲ 25 ಎಸೆತಗಳಲ್ಲಿ 220 ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಗಳಿಸಿದರು. ಈ ಅಜೇಯ ಮತ್ತು ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಮನಿಶ್ ಪಾಂಡೆ ಅಬ್ಬರದ ನಡುವೆಯೂ ತಂಡಕ್ಕೆ ಗೆಲುವು ದಕ್ಕಲಿಲ್ಲ

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್