Azadi Ka Amrit Mahotsav: ಟೀಂ ಇಂಡಿಯಾ ಕ್ರಿಕೆಟಿಗರು ನಿರ್ಮಿಸಿರುವ ಈ ದಾಖಲೆಗಳನ್ನು ಮುರಿಯುವುದು ಅಸಾಧ್ಯ..!

Azadi Ka Amrit Mahotsav: ಭಾರತೀಯ ಆಟಗಾರರು ಮುರಿಯಲು ಅಸಾಧ್ಯವಾದ ಅನೇಕ ದಾಖಲೆಗಳನ್ನು ರಚಿಸಿದ್ದು, ಅಂತಹ ಕೆಲವು ದಾಖಲೆಗಳ ಬಗ್ಗೆ ಇಲ್ಲಿ ತಿಳಿಯೋಣ..

Azadi Ka Amrit Mahotsav: ಟೀಂ ಇಂಡಿಯಾ ಕ್ರಿಕೆಟಿಗರು ನಿರ್ಮಿಸಿರುವ ಈ ದಾಖಲೆಗಳನ್ನು ಮುರಿಯುವುದು ಅಸಾಧ್ಯ..!
TV9kannada Web Team

| Edited By: pruthvi Shankar

Aug 15, 2022 | 3:52 PM

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿವೆ. ಈ ವಿಶೇಷ ಸಂದರ್ಭವನ್ನು ಸ್ಮರಿಸಲು ದೇಶಾದ್ಯಂತ ಆಜಾದಿಕಾ ಅಮೃತ ಮಹೋತ್ಸವವನ್ನು (Azadi Ka Amrit Mahotsav) ಆಯೋಜಿಸಲಾಗಿದೆ. ಈ 75 ವರ್ಷಗಳ ಪಯಣದಲ್ಲಿ ಭಾರತೀಯ ಕ್ರೀಡಾ ಪಟುಗಳು ತಮ್ಮ ಆಟದ ಶೈಲಿಯಿಂದ ಕ್ರೀಡಾ ಜಗತ್ತಿನಲ್ಲಿಯೂ ದೇಶದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಇದರ ಭಾಗವಾಗಿ ಭಾರತ ತಂಡ ಕ್ರಿಕೆಟ್‌ನಲ್ಲಿ ಹಲವು ವಿಶಿಷ್ಟ ದಾಖಲೆಯಗಳನ್ನು ಸಹ ಮಾಡಿದೆ. ಈ ಸಮಯದಲ್ಲಿ, ಭಾರತೀಯ ಆಟಗಾರರು ಮುರಿಯಲು ಅಸಾಧ್ಯವಾದ ಅನೇಕ ದಾಖಲೆಗಳನ್ನು ರಚಿಸಿದ್ದು, ಅಂತಹ ಕೆಲವು ದಾಖಲೆಗಳ ಬಗ್ಗೆ ಇಲ್ಲಿ ತಿಳಿಯೋಣ..

ಇದನ್ನೂ ಓದಿ

  1. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳು – ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸುವುದು ಯಾವುದೇ ಬ್ಯಾಟ್ಸ್‌ಮನ್‌ಗೆ ತುಂಬಾ ಕಷ್ಟ. ಆದರೆ, ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಪೂರೈಸಿ ಭಾರತದ ಹೆಸರನ್ನು ವಿಶ್ವದಾದ್ಯಂತ ಪ್ರಸಿದ್ಧಿಗೊಳಿಸಿದರು. ಆದಾಗ್ಯೂ, ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮುರಿಯಬಹುದು ಎಂದು ಮೊದಲು ಭಾವಿಸಲಾಗಿತ್ತು. ಆದರೆ ಈಗ ವಿರಾಟ್ ತಮ್ಮ ಹಳೆಯ ಫಾರ್ಮ್‌ನಲ್ಲಿ ಎಡವುತ್ತಿರುವುದನ್ನು ನೋಡಿದರೆ… ಈ ದಾಖಲೆಯನ್ನು ಮುರಿಯುವ ಅವಕಾಶವೇ ಇಲ್ಲ.
  2. ಏಕದಿನ ಪಂದ್ಯದಲ್ಲಿ ಅತ್ಯಧಿಕ ಸ್ಕೋರ್ – ಭಾರತದ ನಾಯಕ ರೋಹಿತ್ ಶರ್ಮಾ ODI ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ 2014ರಲ್ಲಿ ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಯಾವುದೇ ಬ್ಯಾಟ್ಸ್ ಮನ್ ರೋಹಿತ್ ಸ್ಕೋರ್ ತಲುಪುವುದು ಕಷ್ಟ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಈ ವಿಷಯದಲ್ಲಿ ರೋಹಿತ್ ನಂತರ 243 ರನ್‌ಗಳ ವೈಯಕ್ತಿಕ ಸ್ಕೋರ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
  3. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು – ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಸಚಿನ್ 664 ಪಂದ್ಯಗಳಲ್ಲಿ 34357 ರನ್ ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 28016 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಕ್ರಿಯ ಆಟಗಾರರ ಹೆಸರಿನಲ್ಲಿ ವಿರಾಟ್ ಕೊಹ್ಲಿ 23726 ರನ್ ಗಳಿಸಿದ್ದಾರೆ. ಆದರೆ ಕೊಹ್ಲಿಗೆ ಸಚಿನ್ ದಾಖಲೆಯನ್ನು ಮುಟ್ಟುವುದು ಅಸಾಧ್ಯವಾಗಿದೆ.
  4. ಸತತ ಮೇಡನ್ ಓವರ್‌ಗಳ ದಾಖಲೆ – ಟೀಂ ಇಂಡಿಯಾ ಮಾಜಿ ಬೌಲರ್ ಬಾಪು ನಾಡಕರ್ಣಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಎಡಗೈ ಸ್ಪಿನ್ನರ್ ಬಾಪು ಟೆಸ್ಟ್‌ನಲ್ಲಿ ಸತತ 131 ಎಸೆತಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದ ದಾಖಲೆ ಹೊಂದಿದ್ದಾರೆ. ಈ ಸಮಯದಲ್ಲಿ ಅವರು ಸತತ 21 ಮೇಡನ್‌ ಓವರ್​ಗಳನ್ನು ಬೌಲ್ ಮಾಡಿದರು. 1964ರಲ್ಲಿ ಇಂಗ್ಲೆಂಡ್ ವಿರುದ್ಧದ ಮದ್ರಾಸ್ ಟೆಸ್ಟ್ ಪಂದ್ಯದಲ್ಲಿ ಬಾಪು ನಾಡಕರ್ಣಿ ಈ ಸಾಧನೆ ಮಾಡಿದ್ದರು.ಈಗಿನ ಟೆಸ್ಟ್ ಕ್ರಿಕೆಟ್ ಸ್ಥಿತಿಯನ್ನು ನೋಡಿದರೆ ಬಾಪು ನಾಡಕರ್ಣಿ ಅವರ ದಾಖಲೆಯನ್ನು ಯಾವ ಆಟಗಾರನೂ ಮುರಿಯಲು ಸಾಧ್ಯವಿಲ್ಲ.
  5. ಟೆಸ್ಟ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆ – ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ‘ದಿ ವಾಲ್’ ಎಂದು ಕರೆಯಲಾಗುತ್ತದೆ. ರಾಹುಲ್ ದ್ರಾವಿಡ್ ತಮ್ಮ 16 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ 164 ಪಂದ್ಯಗಳಲ್ಲಿ 31258 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಆಟಗಾರ ಎಂಬ ದಾಖಲೆಯನ್ನು ರಾಹುಲ್ ದ್ರಾವಿಡ್ ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ದ್ರಾವಿಡ್ ಸಹ ಆಟಗಾರ ಸಚಿನ್ ತೆಂಡೂಲ್ಕರ್ 29437 ಎಸೆತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
  6. ಅತಿ ಹೆಚ್ಚು ಸ್ಟಂಪಿಂಗ್- ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆ ಹೊಂದಿದ್ದಾರೆ. ಧೋನಿ 538 ಪಂದ್ಯಗಳಲ್ಲಿ ಒಟ್ಟು 195 ಸ್ಟಂಪಿಂಗ್ ಮಾಡಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರರಾದ ಕುಮಾರ್ ಸಂಗಕ್ಕಾರ (139) ಮತ್ತು ರೊಮೇಶ್ ಕಾಲುವಿತರ್ಣ (101) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada