Azadi Ka Amrit Mahotsav: ಸ್ವಾತಂತ್ರ್ಯ ನಂತರ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾದ ಸಾಧನೆಗಳಿವು

Azadi Ka Amrit Mahotsav: ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಕ್ರಿಕೆಟ್‌ನಿಂದ ಪ್ರಾಬಲ್ಯ ಹೊಂದಿತ್ತು. ಈಗಲೂ ಕ್ರಿಕೆಟ್ ಪ್ರಾಬಲ್ಯ ಮುಂದುವರಿಸಿದೆ. ವಿಶೇಷ ಸಂಗತಿಯೆಂದರೆ ಸ್ವಾತಂತ್ರ್ಯದ ಮೊದಲು, ಮಹಾರಾಜ ರಂಜಿತ್ ಸಿಂಗ್ ಅವರು 1895-1902 ರವರೆಗೆ ಇಂಗ್ಲೆಂಡ್ ಪರ ಕ್ರಿಕೆಟ್ ಆಡಿದ್ದರು.

Azadi Ka Amrit Mahotsav: ಸ್ವಾತಂತ್ರ್ಯ ನಂತರ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾದ ಸಾಧನೆಗಳಿವು
Follow us
TV9 Web
| Updated By: ಪೃಥ್ವಿಶಂಕರ

Updated on: Aug 12, 2022 | 7:30 AM

ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳು ತುಂಬುತ್ತಿರುವ ಹಿನ್ನೆಲೆ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸಲಾಗುತ್ತಿದೆ. ಈ ಅಭಿಯಾನದಡಿ ಸ್ವತಂತ್ರದ ಬಳಿಕ ಭಾರತ ಕ್ರಿಕೆಟ್​ನಲ್ಲಿ ಸಾಧಿಸಿದ ಮೈಲುಗಲ್ಲಿನ ಬಗ್ಗೆ ಒಂದಿಷ್ಟು ಕುತೂಹಲಕಾರಿ ವಿಚಾರಗಳು ಇಲ್ಲಿವೆ. 1947 ಆಗಸ್ಟ್ 15ರವರೆಗೆ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗುವವರೆಗೂ ಬ್ರಿಟನ್ ನಮ್ಮನ್ನು ಆಳಿತು. ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದರು. ಭಾರತ ಮತ್ತು ಬ್ರಿಟನ್ ಎರಡಕ್ಕೂ ಒಂದೇ ವಿಷಯದಲ್ಲಿ ಸಾಮ್ಯತೆ ಇದೆ, ಅದು ಕ್ರಿಕೆಟ್. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಕ್ರಿಕೆಟ್‌ನಿಂದ ಪ್ರಾಬಲ್ಯ ಹೊಂದಿತ್ತು. ಈಗಲೂ ಕ್ರಿಕೆಟ್ ಪ್ರಾಬಲ್ಯ ಮುಂದುವರಿಸಿದೆ. ವಿಶೇಷ ಸಂಗತಿಯೆಂದರೆ ಸ್ವಾತಂತ್ರ್ಯದ ಮೊದಲು, ಮಹಾರಾಜ ರಂಜಿತ್ ಸಿಂಗ್ ಅವರು 1895-1902 ರವರೆಗೆ ಇಂಗ್ಲೆಂಡ್ ಪರ ಕ್ರಿಕೆಟ್ ಆಡಿದ್ದರು. ಇಂತಹ ಕೆಲವು ಕುತೂಹಲಕಾರಿ ವಿಚಾರಗಳು ಹೀಗಿವೆ.

ಮೊದಲ ಗೆಲುವು

1952 ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ವಿಜಯ್ ಹಜಾರೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ವಿನೂ ಮಂಕಡ್ 12 ವಿಕೆಟ್ ಪಡೆದಿದ್ದರೆ, ಈ ಪಂದ್ಯದಲ್ಲಿ ಭಾರತ 8 ರನ್‌ಗಳಿಂದ ಇನಿಂಗ್ಸ್‌ ಗೆಲುವು ಸಾಧಿಸಿತ್ತು.

ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಗೆಲುವು

ಯಂಗ್ ಟೈಗರ್ ಪಟೌಡಿ ಭಾರತವನ್ನು ನ್ಯೂಜಿಲೆಂಡ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿದೇಶಿ ನೆಲದಲ್ಲಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತ 1968 ರಲ್ಲಿ ಈ ವಿಜಯವನ್ನು ಸಾಧಿಸಿತು. ಈ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್‌ಗಳಿಂದ ಜಯಗಳಿಸಿತು.

ವಿದೇಶಿ ನೆಲದಲ್ಲಿ ಮೊದಲ ಸರಣಿ ಗೆಲುವು

ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಎರಡು ವರ್ಷಗಳ ನಂತರ, ಮೆನ್ ಇನ್ ಬ್ಲೂ 1970-71 ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ವಿದೇಶಿ ನೆಲದಲ್ಲಿ ತಮ್ಮ ಮೊದಲ ಸರಣಿ ಜಯವನ್ನು ದಾಖಲಿಸಿತು. ಅಲ್ಲಿ ತಂಡವು ಐದು ಪಂದ್ಯಗಳ ಸರಣಿಯನ್ನು 1-0ಯಿಂದ ಗೆದ್ದುಕೊಂಡಿತು. ಈ ಸರಣಿಯಲ್ಲಿಯೇ ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಗಳಿಸಿದ್ದರು.

1983 ರಲ್ಲಿ ವಿಶ್ವಕಪ್ ಗೆಲುವು

1983 ಜೂನ್ 9 ರಿಂದ ಜೂನ್ 25 ರವರೆಗೆ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಮೂರನೇ ಆವೃತ್ತಿ ನಡೆಯಿತು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಯಾರೂ ಕನಸು ಕಾಣದ ವರ್ಚಸ್ಸನ್ನು ಸಾಧಿಸಿತು. ಭಾರತ ಆ ಬಾರಿಯ ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಅಪಾಯಕಾರಿ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿ ವಿಶ್ವಕಪ್‌ ಗೆದ್ದುಕೊಂಡಿತು. ಭಾರತದ ವಿಶ್ವಕಪ್ ವಿಜಯದ ನಂತರ, ಅದು ಇಡೀ ಕ್ರಿಕೆಟ್ ಜಗತ್ತನ್ನು ಆಳಲು ಪ್ರಾರಂಭಿಸಿತು. ಅಂದಿನಿಂದ ಭಾರತ ಅನೇಕ ಶ್ರೇಷ್ಠ ಕ್ರಿಕೆಟಿಗರನ್ನು ಬೆಳೆಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವಿಶ್ವಕಪ್ ಗೆದ್ದ ಎರಡು ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ಇಲ್ಲಿ ಭಾರತ ಫೈನಲ್‌ನಲ್ಲಿ ತನ್ನ ದೊಡ್ಡ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಸರಣಿಯಲ್ಲಿ ರವಿಶಾಸ್ತ್ರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಈ ಸರಣಿಯಲ್ಲಿ ರವಿಶಾಸ್ತ್ರಿ 182 ರನ್ ಜೊತೆಗೆ 8 ವಿಕೆಟ್ ಕಬಳಿಸಿದರು.

ಸಚಿನ್ ತೆಂಡೂಲ್ಕರ್ ಎಂಟ್ರಿ

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರು ತಮ್ಮ 16 ನೇ ವಯಸ್ಸಿನಲ್ಲಿ 15 ನವೆಂಬರ್ 1989 ರಂದು ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಬಳಿಕ ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ನೂರು ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಜೊತೆಗೆ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್, ಟೆಸ್ಟ್ ಮತ್ತು ODI ಎರಡರಲ್ಲೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಸಚಿನ್.

ನ್ಯಾಟ್ವೆಸ್ಟ್ ಸರಣಿ ಗೆಲುವು

2002ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿಯಲ್ಲಿ ಗಂಗೂಲಿ ಟ್ರೋಫಿ ಎತ್ತಿ ಹಿಡಿದಿದ್ದರು. ಈ ವೇಳೆ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು. ಈ ವಿಜಯವನ್ನು ವಿಶೇಷವಾಗಿ ಆಚರಿಸಿದ ಗಂಗೂಲಿ ತಮ್ಮ ಟೀ ಶರ್ಟ್‌ ಕಳಚಿ ಸಂಭ್ರಮಿಸಿದರು.

2003 ವಿಶ್ವಕಪ್ ಫೈನಲ್

ಭಾರತಕ್ಕೆ, 2003 ರ ವಿಶ್ವಕಪ್ ಕೂಡ ಮಿಶ್ರ ಬ್ಯಾಗ್ ಆಗಿತ್ತು. ಈ ಸಮಯದಲ್ಲಿ ಸೌರವ್ ಗಂಗೂಲಿ ಭಾರತದ ನಾಯಕತ್ವವಹಿಸಿದ್ದರು. ಆ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನದೊಂದಿಗೆ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಬೇಕಾಯಿತು.

2007 ರ ಟಿ20 ವಿಶ್ವಕಪ್ ವಿಜೇತ

2007ರಲ್ಲಿ ಭಾರತದ ಪ್ರದರ್ಶನ ಆಕರ್ಷಕವಾಗಿತ್ತು. ಭಾರತ ಈ ವರ್ಷ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಮಹೇಂದ್ರ ಸಿಂಗ್ ಧೋನಿ 2007 ರಲ್ಲಿ ಭಾರತ ತಂಡದ ನಾಯಕತ್ವವಹಿಸಿಕೊಂಡು ವಿಶ್ವಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್ ಗೆದ್ದಿದ್ದರು.

2009ರಲ್ಲಿ ಭಾರತ ಟೆಸ್ಟ್‌ನಲ್ಲಿ ನಂಬರ್ ಒನ್ ಆಗಿತ್ತು

2009 ರಲ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್‌ನಲ್ಲಿ ನಂಬರ್ ಒನ್ ಆಗಿ ದಾಖಲೆ ನಿರ್ಮಿಸಿತು. ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಟೆಸ್ಟ್‌ನಲ್ಲಿ ನಂಬರ್ ಒನ್ ಆಗಿದಿದ್ದು ಇದೇ ಮೊದಲು.

ಮೂರು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ

2000ನೇ ಇಸವಿಯ ನಂತರ 2008, 2012 ಮತ್ತು 2018ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಅದೇ ಸಮಯದಲ್ಲಿ 2006, 2016 ಮತ್ತು 2020ರಲ್ಲಿ ಭಾರತ ತಂಡ ಈ ಟೂರ್ನಿಯಲ್ಲಿ ರನ್ನರ್ ಅಪ್ ಆಯಿತು.

2011ರ ವಿಶ್ವಕಪ್ ಗೆಲುವು

2011 ಭಾರತಕ್ಕೆ ಬಹಳ ವಿಶೇಷವಾಗಿತ್ತು. 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತ ಈ ವರ್ಷ ಮತ್ತೊಮ್ಮೆ ವಿಶ್ವಕಪ್ ಗೆದ್ದುಕೊಂಡಿತು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತು. ಇದು ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಆಗಿತ್ತು.

ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು

32 ವರ್ಷಗಳ ಬಳಿಕ ಭಾರತ ತಂಡ 2021ರಲ್ಲಿ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ಈ ಹಿಂದೆ 1989ರಲ್ಲಿ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡ ಸೋಲು ಅನುಭವಿಸಬೇಕಾಯಿತು. ಈ ಗೆಲುವಿನೊಂದಿಗೆ ಭಾರತವು ಆಸ್ಟ್ರೇಲಿಯಾವನ್ನು 2-1 ರಿಂದ ಸರಣಿಯಲ್ಲಿ ಸೋಲಿಸಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ರನ್ನರ್ ಅಪ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಭಾರತ ಅದ್ಭುತವಾಗಿ ಆಡಿದೆ. ಆದರೆ ಭಾರತ ತಂಡ ಫೈನಲ್‌ನಲ್ಲಿ ಸೋಲು ಅನುಭವಿಸಬೇಕಾಯಿತು. ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ನ್ಯೂಜಿಲೆಂಡ್ ಪ್ರಶಸ್ತಿ ಗೆದ್ದುಕೊಂಡಿತು.