Azadi Ka Amrit Mahotsav: ಸ್ವಾತಂತ್ರ್ಯದ ಬಳಿಕ ಭಾರತ ಯಾವ ದೇಶದೆದುರು ಮೊದಲ ಕ್ರಿಕೆಟ್ ಪಂದ್ಯವನ್ನಾಡಿತ್ತು ಗೊತ್ತಾ?

Azadi Ka Amrit Mahotsav: 1932 ರಲ್ಲಿ ಭಾರತ ಟೆಸ್ಟ್ ಆಡುವ ರಾಷ್ಟ್ರವಾಗಿ ಮನ್ನಣೆ ಪಡೆಯಿತು. ಆದರೆ ತನ್ನ ಮೊದಲ ಜಯವನ್ನು ಪಡೆಯಲು 1952 ರವರೆಗೆ ಕಾಯಬೇಕಾಯಿತು.

Azadi Ka Amrit Mahotsav: ಸ್ವಾತಂತ್ರ್ಯದ ಬಳಿಕ ಭಾರತ ಯಾವ ದೇಶದೆದುರು ಮೊದಲ ಕ್ರಿಕೆಟ್ ಪಂದ್ಯವನ್ನಾಡಿತ್ತು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on: Aug 11, 2022 | 7:30 AM

ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಮೃತ ಮಹೋತ್ಸವದ (Azadi Ka Amrit Mahotsav) ರೂಪದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ನಾವು ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್‌ನ ಕೆಲವು ವಿಶೇಷ ನೆನಪುಗಳನ್ನು ಸಹ ನಿಮಗೆ ಪರಿಚಯಿಸಲಿದ್ದೇವೆ. 1932 ರಲ್ಲಿ ಭಾರತ ಟೆಸ್ಟ್ ಆಡುವ ರಾಷ್ಟ್ರವಾಗಿ ಮನ್ನಣೆ ಪಡೆಯಿತಾದರೂ ತನ್ನ ಮೊದಲ ಜಯವನ್ನು ಪಡೆಯಲು 1952 ರವರೆಗೆ ಕಾಯಬೇಕಾಯಿತು. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮಾತ್ರ ಆಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಸ್ವಾತಂತ್ರ್ಯದ ನಂತರ ಭಾರತದ ಪರ ಆಡಿದ ಮೊದಲ ಕ್ರಿಕೆಟ್ ತಂಡ, ಈ ತಂಡದಲ್ಲಿದ್ದ ಆಟಗಾರರು ಯಾರು ಮತ್ತು ಆಡಿದ ಮೊದಲ ಪಂದ್ಯ ಹೇಗಿತ್ತು ಎಂಬ ಮಾಹಿತಿಯನ್ನು ನೀಡಲಿದ್ದೇವೆ.

ಸ್ವಾತಂತ್ರ್ಯದ ನಂತರ ಆಸ್ಟ್ರೇಲಿಯಾ ಪ್ರವಾಸ

15 ಆಗಸ್ಟ್ 1947 ರಂದು, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಎರಡು ವರ್ಷಗಳ ಕಾಲ, ದೇಶದ ಸಂವಿಧಾನ ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕೆಲಸ ಮುಂದುವರೆಯಿತು. ಆದರೆ ಇದರಿಂದಾಗಿ, ಕ್ರಿಕೆಟ್ ಆಟಗಾರರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯದ ನಂತರ, ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿತ್ತು.

ಲಾಲಾ ಅಮರನಾಥ್ ಅವರ ನಾಯಕತ್ವದಲ್ಲಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ವಿನೂ ಮಂಕಡ್ ಮತ್ತು ಹೇಮು ಅಧಿಕಾರಿಯನ್ನು ಆರಂಭಿಕರಾಗಿ ಆಯ್ಕೆ ಮಾಡಲಾಗಿತ್ತು. ಜೊತೆಗೆ ವಿಜಯ್ ಹಜಾರೆ, ಖಂಡು ರಂಗೇಕರ್ ಮತ್ತು ಗೋಗುಮಲ್ ಕಿಶನ್‌ಚಂದ್‌ಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ನೀಡಲಾಗಿತ್ತು. ಕೆಳ ಕ್ರಮಾಂಕದ ಜವಾಬ್ದಾರಿಯನ್ನು ಗುಲ್ ಮೊಹಮ್ಮದ್ ಮತ್ತು ರಂಗಾ ಸೊಹೊನಿಗೆ ನೀಡಲಾಗಿತ್ತು. ಬೌಲಿಂಗ್ ವಿಭಾಗದಲ್ಲಿ ದತ್ತು ಫಡ್ಕರ್, ಅಮೀರ್ ಇಲಾಹಿ ಮತ್ತು ಜೆನ್ನಿ ಇರಾನಿ ಇದ್ದರು.

ವಿನೂ ಮಂಕಡ್ ಉತ್ತಮ ಪ್ರದರ್ಶನ

ಪರ್ತ್‌ನಲ್ಲಿ ನಡೆದ ಈ ಮೊದಲ ಪಂದ್ಯದಲ್ಲಿ ಭಾರತ ತಂಡ ಮೊದಲು ಬೌಲಿಂಗ್ ಮಾಡಿ ವೆಸ್ಟರ್ನ್ ಆಸ್ಟ್ರೇಲಿಯಾವನ್ನು ಎದುರಿಸಿತು. ಭಾರತ ತಂಡದ ಪರ ಮಹಾರಾಷ್ಟ್ರದ ವಿನೂ ಮಂಕಡ್ ಮತ್ತು ದತ್ತು ಫಡ್ಕರ್ ಜೋಡಿ ಆಸ್ಟ್ರೇಲಿಯ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೇಲುಬನ್ನು ಮುರಿಯುವಲ್ಲಿ ಯಶಸ್ವಿಯಾಗಿತ್ತು. ಭಾರತದ ಪರ ಫಡ್ಕರ್ 3 ವಿಕೆಟ್ ಪಡೆದರೆ, ವಿನೂ ಮಂಕಡ್ ಸ್ವಾತಂತ್ರ್ಯ ನಂತರ ಮೊದಲ 5 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು.

ಲಾಲಾ ಅಮರನಾಥ್ ಮತ್ತು ವಿಜಯ್ ಹಜಾರೆ ಕೂಡ ತಲಾ 1 ವಿಕೆಟ್ ಪಡೆದರು. ಈ ಕಾರಣದಿಂದಾಗಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು 171 ರನ್ಗಳಿಗೆ ಕುಸಿಯಿತು. ರನ್‌ಗಳ ಬೆನ್ನತ್ತಿದ್ದ ಭಾರತ ತಂಡಕ್ಕೆ, ವಿನೂ ಮಂಕಡ್ 57 ರನ್‌ಗಳ ಇನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ನೀಡಿದರು. ಆದರೆ ಉಳಿದ ಆಟಗಾರರ ಬೆಂಬಲದ ಕೊರತೆಯಿಂದಾಗಿ, ಇಡೀ ತಂಡವು 127 ರನ್‌ಗಳಿಗೆ ಆಲೌಟ್ ಆಯಿತು.

ಡ್ರಾನಲ್ಲಿ ಕೊನೆಗೊಂಡ ಸ್ವಾತಂತ್ರ್ಯ ನಂತರದ ಮೊದಲ ಪಂದ್ಯ

ವೆಸ್ಟರ್ನ್ ಆಸ್ಟ್ರೇಲಿಯಾ 44 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿ 4 ವಿಕೆಟ್‌ಗಳ ನಷ್ಟಕ್ಕೆ 70 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಎದುರಾಳಿ ತಂಡ 114 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಸಮಯದ ಅಭಾವದಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಇದು ಸ್ವಾತಂತ್ರ್ಯದ ನಂತರ ಭಾರತದ ಮೊದಲ ಅಂತರರಾಷ್ಟ್ರೀಯ ತಂಡದ ಮೊದಲ ಪಂದ್ಯ ಮತ್ತು ಅದರ ಮೊದಲ ಫಲಿತಾಂಶವಾಗಿದೆ.

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ