The Hundred League 2022: 11 ಬೌಂಡರಿ, 3 ಸಿಕ್ಸರ್‌, 88 ರನ್! ದಿ ಹಂಡ್ರೆಡ್​ನಲ್ಲಿ ಮಲಾನ್ ಅಬ್ಬರ; ವಿಡಿಯೋ ನೋಡಿ

The Hundred League 2022: ಡೇವಿಡ್ ಮಲಾನ್ ಅವರ ಅಬ್ಬರದ ಇನ್ನಿಂಗ್ಸ್‌ಗೆ ಪ್ರಮುಖ ಕಾರಣ ಎದುರಾಳಿ ತಂಡದ ಕಳಪೆ ಫೀಲ್ಡಿಂಗ್. ಮಲಾನ್​ಗೆ ಎರಡು ಬಾರಿ ಜೀವದಾನ ನೀಡಲಾಯಿತು.

The Hundred League 2022: 11 ಬೌಂಡರಿ, 3 ಸಿಕ್ಸರ್‌, 88 ರನ್! ದಿ ಹಂಡ್ರೆಡ್​ನಲ್ಲಿ ಮಲಾನ್ ಅಬ್ಬರ; ವಿಡಿಯೋ ನೋಡಿ
Follow us
TV9 Web
| Updated By: ಪೃಥ್ವಿಶಂಕರ

Updated on:Aug 10, 2022 | 10:25 PM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ (The Hundred League 2022) ಅದ್ಭುತ ಪಂದ್ಯಗಳು ನಡೆಯುತ್ತಿವೆ. ಮಂಗಳವಾರ ನಡೆದ ಟೂರ್ನಿಯ 7ನೇ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ 7 ವಿಕೆಟ್​ಗಳಿಂದ ನಾರ್ದರ್ನ್ ಸೂಪರ್ ಚಾರ್ಜರ್ಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಸೂಪರ್‌ಚಾರ್ಜರ್ಸ್ 100 ಎಸೆತಗಳಲ್ಲಿ 8 ವಿಕೆಟ್‌ಗೆ 152 ರನ್ ಗಳಿಸಿತು. ಡೇವಿಡ್ ವಿಸಾ 27 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 50 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆಯನ್ನು ತೋರಿಸಿದರು. ಆದರೆ ರಾಕೆಟ್ಸ್ ಆರಂಭಿಕ ಆಟಗಾರ ಡೇವಿಡ್ ಮಲಾನ್ (David Malan) ಚಾರ್ಜರ್ಸ್ ಭರವಸೆಯನ್ನು ನುಚ್ಚುನೂರು ಮಾಡಿದರು. ಮಲಾನ್ 49 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿ, ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮಲಾನ್ ಅದ್ಭುತ ಬ್ಯಾಟಿಂಗ್

ಆರಂಭಿಕರಾದ ಅಲೆಕ್ಸ್ ಹೇಲ್ಸ್ ಮತ್ತು ಮಲಾನ್ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಇವರಿಬ್ಬರ ನಡುವೆ 86 ರನ್‌ಗಳ ಜೊತೆಯಾಟವಿತ್ತು. ಅಲೆಕ್ಸ್ ಹೇಲ್ಸ್ 27 ಎಸೆತಗಳಲ್ಲಿ 43 ರನ್ ಗಳಿಸಿದರು. ಅದೇ ವೇಳೆ ಡೇವಿಡ್ ಮಲಾನ್ ಅರ್ಧಶತಕ ಬಾರಿಸಿದರು. ಮಲಾನ್, ಎದುರಾಳಿ ತಂಡದ ಬೌಲರ್​ಗಳಾದ ಡೇವಿಡ್ ವೈಸ್, ಡ್ವೇನ್ ಬ್ರಾವೋ, ವ್ಯಾನ್ ಡೆರ್ ಮೆರ್ವೆ ಮತ್ತು ಆದಿಲ್ ರಶೀದ್​ರನ್ನು ಸರಿಯಾಗಿಯೇ ದಂಡಿಸಿದರು. ಮಲಾನ್ ತಮ್ಮ ಇನ್ನಿಂಗ್ಸ್‌ನಲ್ಲಿ 180 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿ ಬೀಸಿ 3 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿ ಕೊನೆಯವರೆಗೂ ಅಜೇಯರಾಗಿ ಉಳಿದು ತಮ್ಮ ತಂಡಕ್ಕೆ ಜಯವನ್ನು ನೀಡಿದರು. ಜೊತೆಗೆ ಈ ಅದ್ಭುತ ಆಟಕ್ಕೆ ಮಲಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

ಡೇವಿಡ್ ಮಲಾನ್ ಅವರ ಅಬ್ಬರದ ಇನ್ನಿಂಗ್ಸ್‌ಗೆ ಪ್ರಮುಖ ಕಾರಣ ಎದುರಾಳಿ ತಂಡದ ಕಳಪೆ ಫೀಲ್ಡಿಂಗ್. ಮಲಾನ್​ಗೆ ಎರಡು ಬಾರಿ ಜೀವದಾನ ನೀಡಲಾಯಿತು. ಜೀವದಾನದ ಸಂಪೂರ್ಣ ಲಾಭ ಪಡೆದ ಮಲಾನ್ ತಂಡಕ್ಕೆ ಅದ್ಭುತ ಜಯ ತಂದಿತ್ತರು. ಮಲಾನ್ ಫಾರ್ಮ್‌ಗೆ ಮರಳಿರುವುದು ಇಂಗ್ಲೆಂಡ್‌ಗೆ ಶುಭ ಸುದ್ದಿಯಾಗಿದೆ. ಈ ಎಡಗೈ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ವಿಫಲರಾಗಿದ್ದರು. ಮಲಾನ್ 3 ಪಂದ್ಯಗಳಲ್ಲಿ ಕೇವಲ 18.33 ಸರಾಸರಿಯಲ್ಲಿ 55 ರನ್ ಗಳಿಸಿದರು.

ಟ್ರೆಂಟ್ ರಾಕೆಟ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ

ಟ್ರೆಂಟ್ ರಾಕೆಟ್ಸ್ ತಂಡವು ಎರಡೂ ಪಂದ್ಯಗಳನ್ನು ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಲಂಡನ್ ಸ್ಪಿರಿಟ್ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಅದರ ನೆಟ್ ರನ್‌ರೇಟ್ ರಾಕೆಟ್‌ಗಳಿಗಿಂತ ಉತ್ತಮವಾಗಿದೆ. ಸದರ್ನ್ ಬ್ರೇವ್ ಮೂರನೇ ಮತ್ತು ಓವಲ್ ಇನ್ವಿನ್ಸಿಬಲ್ ತಂಡ ನಾಲ್ಕನೇ ಸ್ಥಾನದಲ್ಲಿವೆ.

Published On - 10:25 pm, Wed, 10 August 22

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು