Asia Cup 2022: ಪಾಕ್ ಎದುರು ಕೊಹ್ಲಿಯೇ ಕಿಂಗ್; ಬದ್ಧವೈರಿ ಎದುರು ವಿರಾಟ್ ದಾಖಲೆ ಹೇಗಿದೆ ಗೊತ್ತಾ?
Virat Kohli: ಕೊಹ್ಲಿ 7 ಪಂದ್ಯಗಳಲ್ಲಿ 78 ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಜೊತೆಗೆ 118 ರ ಸ್ಟ್ರೈಕ್ ರೇಟ್ನಲ್ಲಿ 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಬೇರೆ ಯಾವುದೇ ಭಾರತೀಯರು 200 ರನ್ ಗಡಿ ತಲುಪಲು ಸಾಧ್ಯವಾಗಲಿಲ್ಲ.
ವಿರಾಟ್ ಕೊಹ್ಲಿ (Virat Kohli) ಕೆಲ ದಿನಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಟಿ-20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಭಾರತ ತಂಡ 4-1 ಅಂತರದಲ್ಲಿ ಆ ಸರಣಿಯನ್ನು ವಶಪಡಿಸಿಕೊಂಡಿದೆ. ಈಗ ಭಾರತದ ಆಟಗಾರರು T20 ಏಷ್ಯಾ ಕಪ್ (Asia Cup 2022)ಗೆ ಸಜ್ಜಾಗುತ್ತಿದ್ದಾರೆ. ಈ ಟೂರ್ನಿಯ 15 ಮಂದಿಯ ತಂಡದಲ್ಲಿ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ತಂಡ ಇಲ್ಲಿ ಪಾಕಿಸ್ತಾನ ವಿರುದ್ಧವೂ ಪಂದ್ಯ ಆಡಬೇಕಿದೆ. ಅದಕ್ಕೂ ಮುನ್ನ ಭಾರತ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದರೂ ಏಕದಿನ ಪಂದ್ಯ ಮಾತ್ರ ಆಡಲಿದ್ದು, ಶಿಖರ್ ಧವನ್ ನೇತೃತ್ವದ ಯುವ ತಂಡಕ್ಕೆ ಅವಕಾಶ ಸಿಕ್ಕಿದೆ.
ಏಷ್ಯಾಕಪ್ ಕುರಿತು ಮಾತನಾಡುವುದಾದರೆ, ಭಾರತ ಮತ್ತು ಪಾಕಿಸ್ತಾನ ಆಗಸ್ಟ್ 28 ರಂದು ಗುಂಪು ಹಂತದಲ್ಲಿ ಮುಖಾಮುಖಿಯಾಗಲಿದೆ. ಅದೇ ಹೊತ್ತಿಗೆ ಆಗಸ್ಟ್ 27ರಿಂದ ಈ ಪೈಪೋಟಿ ಆರಂಭವಾಗುತ್ತಿದ್ದು, ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಕೊಹ್ಲಿಗೆ ಅವಕಾಶ ಸಿಕ್ಕರೆ ವಿಶೇಷ ಶತಕ ಸಿಡಿಸಲಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅವರ 100ನೇ ಪಂದ್ಯವಾಗಿದೆ. ಇಂತಹ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಾಯಕ ರೋಹಿತ್ ಶರ್ಮಾ 132 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಪಾಕಿಸ್ತಾನ ವಿರುದ್ಧ ಕೊಹ್ಲಿ ಸಾಧನೆ
– ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
– ವಿರಾಟ್ 7 ಪಂದ್ಯಗಳಲ್ಲಿ 78ರ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ.
– 118 ರ ಸ್ಟ್ರೈಕ್ ರೇಟ್ನೊಂದಿಗೆ ಕೊಹ್ಲಿ ಪಾಕಿಸ್ತಾನ ವಿರುದ್ಧ 3 ಅರ್ಧಶತಕಗಳನ್ನು ಗಳಿಸಿದ್ದಾರೆ.
– ಇತರ ಯಾವುದೇ ಭಾರತೀಯರು 200 ರನ್ ಗಡಿ ತಲುಪಲು ಸಾಧ್ಯವಾಗಲಿಲ್ಲ.
ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ವಿರಾಟ್ ಕೊಹ್ಲಿ 99 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲಿ 50 ಸರಾಸರಿಯಲ್ಲಿ 3308 ರನ್ ಗಳಿಸಿದ್ದಾರೆ. ಈ ಮೂಲಕ ಕೊಹ್ಲಿ ವಿಶ್ವದ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ 30 ಅರ್ಧಶತಕಗಳನ್ನು ಈ ಮಾದರಿಯಲ್ಲಿ ಬಾರಿಸಿದ್ದು, ಔಟಾಗದೆ 94 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್ ಆಗಿದೆ. ಅವರ ಒಟ್ಟಾರೆ T20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು 344 ಪಂದ್ಯಗಳಲ್ಲಿ 327 ಇನ್ನಿಂಗ್ಸ್‌ಗಳಲ್ಲಿ 40 ಸರಾಸರಿಯಲ್ಲಿ 10626 ರನ್ ಗಳಿಸಿದ್ದಾರೆ. 5 ಶತಕ ಮತ್ತು 78 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಂದರೆ 83 ಬಾರಿ 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ.
ಪಾಕಿಸ್ತಾನದ ವಿರುದ್ಧ ದಿಟ್ಟ ಪ್ರದರ್ಶನ
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಇಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 7 ಪಂದ್ಯಗಳಲ್ಲಿ 78 ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಜೊತೆಗೆ 118 ರ ಸ್ಟ್ರೈಕ್ ರೇಟ್ನಲ್ಲಿ 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಬೇರೆ ಯಾವುದೇ ಭಾರತೀಯರು 200 ರನ್ ಗಡಿ ತಲುಪಲು ಸಾಧ್ಯವಾಗಲಿಲ್ಲ. ಯುವರಾಜ್ ಸಿಂಗ್ 8 ಪಂದ್ಯಗಳಲ್ಲಿ 155 ರನ್ ಗಳಿಸಿದ್ದರೆ, ಗೌತಮ್ ಗಂಭೀರ್ 5 ಪಂದ್ಯಗಳಲ್ಲಿ 139 ರನ್ ಗಳಿಸಿದ್ದಾರೆ. ಬೇರೆ ಯಾರೂ ಕೂಡ 100 ರನ್ ತಲುಪಲು ಸಾಧ್ಯವಾಗಲಿಲ್ಲ. ರೋಹಿತ್ 8 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 70 ರನ್ ಗಳಿಸಿದ್ದಾರೆ. ಔಟಾಗದೆ 30 ರನ್ ಬಾರಿಸಿರುವುದು ಅವರ ವೈಯಕ್ತಿಕ ಅತ್ಯಧಿಕ ರನ್ ಆಗಿದೆ. ಅದೇ ಸಮಯದಲ್ಲಿ ಕೆಎಲ್ ರಾಹುಲ್ ಒಂದು ಪಂದ್ಯದಲ್ಲಿ 3 ರನ್ ಗಳಿಸಿದ್ದಾರೆ.
Published On - 8:22 pm, Wed, 10 August 22