‘ಐಪಿಎಲ್ ತೀರಾ ಭಾವುಕವಲ್ಲ’; ನಾನು ಆರ್​ಸಿಬಿಯಲ್ಲೇ ಆಡಿದ್ದರೆ ಇನ್ನು ಹಲವು ವರ್ಷ ಐಪಿಎಲ್ ಆಡುತ್ತಿದ್ದೆ; ರಾಸ್ ಟೇಲರ್

Ross Taylor: ಆರ್‌ಸಿಬಿಯಿಂದ ಹೊರಬಂದಿದ್ದು ನನಗೆ ಒಂದು ರೀತಿಯ ಲಾಭವನ್ನೇ ತಂದುಕೊಟ್ಟಿತ್ತು. ಇದರಿಂದ ನಾನು ಬೇರೆ ಫ್ರಾಂಚೈಸಿಗೆ ಹೋಗಿ ಅಲ್ಲಿ ಅನೇಕ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿತು ಎಂದು ಟೇಲರ್ ಹೇಳಿಕೊಂಡಿದ್ದಾರೆ.

'ಐಪಿಎಲ್ ತೀರಾ ಭಾವುಕವಲ್ಲ'; ನಾನು ಆರ್​ಸಿಬಿಯಲ್ಲೇ ಆಡಿದ್ದರೆ ಇನ್ನು ಹಲವು ವರ್ಷ ಐಪಿಎಲ್ ಆಡುತ್ತಿದ್ದೆ; ರಾಸ್ ಟೇಲರ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 14, 2022 | 3:42 PM

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್ (Ross Taylor) ಇತ್ತೀಚೆಗೆ ತಮ್ಮ ಆತ್ಮಚರಿತ್ರೆಯನ್ನು ಹೊರತಂದಿದ್ದಾರೆ. ಈ ಪುಸ್ತಕದಲ್ಲಿ, ಟೇಲರ್ ಅನೇಕ ಕುತೂಹಲಕಾರಿ ಸಂಗತಿಗಳನ್ನು ಸಹ ಬಹಿರಂಗಪಡಿಸಿದ್ದು, ತಮ್ಮ ಕ್ರಿಕೆಟ್ ಜೀವನದ ಹಲವು ಅಂಶಗಳನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಟೇಲರ್‌ ಅವರ ಈ ಆತ್ಮಚರಿತ್ರೆಯೂ ಈಗ ಭಾರತದಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ ಏಕೆಂದರೆ ಅದರಲ್ಲಿ ಅವರು ಐಪಿಎಲ್‌ನಲ್ಲಿ (IPL) ಆದ ಅನುಭವಗಳ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ಟೇಲರ್ ಐಪಿಎಲ್​ನಲ್ಲಿ ತಮಗಾದ ನೋವಿನ ಸಂಗತಿಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಅವರನ್ನು ತಂಡದಿಂದ ಕೈಬಿಟ್ಟಿದ್ದು ಕೂಡ ಸೇರಿದೆ.

ಟೇಲರ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಬೆಂಗಳೂರು ತಂಡದೊಂದಿಗೆ ಪ್ರಾರಂಭಿಸಿದರು. ಬಳಿಕ ಮುಂದಿನ ಎರಡು ಸೀಸನ್​ಗಳಲ್ಲಿ ರಾಸ್ ಆರ್​ಸಿಬಿ ಪರ ಅಬ್ಬರಿಸಿದ್ದರು. ಆದರೆ 2 ಸೀಸನ್​ಗಳ ಬಳಿಕ ಆರ್​ಸಿಬಿ ತಂಡ ಅವರನ್ನು ಕೈಬಿಟ್ಟಿತು. ಹೀಗಾಗಿ ಮುಂದಿನ ಸೀಸನ್​ನ ಹರಾಜಿನಲ್ಲಿ ಟೇಲರ್ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದರು. ಆದರೆ ಟೇಲರ್​ಗೆ ಆರ್​ಸಿಬಿ ತಂಡದಲ್ಲೇ ಆಡುವ ಬಯಕೆ ಇತ್ತಾದರೂ ಆರ್​ಸಿಬಿ ಫ್ರಾಂಚೈಸಿ ಮಾತ್ರ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಆಡಿದ 2 ಸೀಸನ್​ಗಳಲ್ಲಿ ಬೆಂಗಳೂರು ಪರ ರಾಸ್ 22 ಇನ್ನಿಂಗ್ಸ್‌ಗಳಲ್ಲಿ 517 ರನ್ ಗಳಿಸಿದ್ದರು.

‘ಐಪಿಎಲ್ ತೀರಾ ಭಾವುಕವಲ್ಲ’

ನಾನೇನಾದರೂ ಆರ್​ಸಿಬಿ ತಂಡದಲ್ಲೇ ಆಡಿದ್ದರೆ ನನ್ನ ವೃತ್ತಿಜೀವನವು ಹೆಚ್ಚು ಕಾಲ ಇರುತ್ತಿತ್ತು ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. Stuff.co.nz ವೆಬ್‌ಸೈಟ್‌ನಲ್ಲಿ ಟೇಲರ್‌ರ ಪುಸ್ತಕದ ಆಯ್ದ ಭಾಗಗಳು ಪ್ರಕಟಗೊಂಡಿದ್ದು ಅದರಲ್ಲಿ ಟೇಲರ್, ಹರಾಜಿನಲ್ಲಿ ಮಿಲಿಯನ್ ಡಾಲರ್‌ ಪಡೆಯುವುದು ಖುಷಿಯ ವಿಚಾರವೆ. ಆದರೆ ಆ ಹರಾಜಿನಲ್ಲಿ RCB ನನ್ನನ್ನು $ 950,000 ಗೆ ಖರೀದಿಸಿದ್ದರೆ ಅದು ಇನ್ನೂ ಉತ್ತಮವಾಗಿರುತ್ತಿತ್ತು. ಹಾಗಾಗಿದ್ದರೆ, ಆರ್​ಸಿಬಿಯೊಂದಿಗೆ ಅದು ನನ್ನ ನಾಲ್ಕನೇ ಸೀಸನ್​ ಆಗಿರುತ್ತಿತ್ತು. ಐಪಿಎಲ್ ಸಾಕಷ್ಟು ಭಾವನಾತ್ಮಕವಲ್ಲದಿದ್ದರೂ, ದೀರ್ಘಕಾಲ ಸೇವೆ ಸಲ್ಲಿಸಿದ ಆಟಗಾರರ ಕಡೆಗೆ ನಿಷ್ಠೆ ಇರುತ್ತದೆ. ಬಹುಶಃ ನಾನು ಒಂದು ಫ್ರಾಂಚೈಸಿಗೆ ಸುಧೀರ್ಘವಾಗಿ ಆಡಿದ್ದರೆ ನನ್ನ ಐಪಿಎಲ್ ವೃತ್ತಿಜೀವನ ಅಷ್ಟು ಬೇಗ ಮುಗಿಯುತ್ತಿರಲಿಲ್ಲ.

ಆದರೆ ಬೇರೆಯವರೊಂದಿಗೆ ಆಡುವ ಅವಕಾಶ ಸಿಕ್ಕಿದೆ

ಆದಾಗ್ಯೂ, ಆರ್‌ಸಿಬಿಯಿಂದ ಹೊರಬಂದಿದ್ದು ನನಗೆ ಒಂದು ರೀತಿಯ ಲಾಭವನ್ನೇ ತಂದುಕೊಟ್ಟಿತ್ತು. ಇದರಿಂದ ನಾನು ಬೇರೆ ಫ್ರಾಂಚೈಸಿಗೆ ಹೋಗಿ ಅಲ್ಲಿ ಅನೇಕ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿತು ಎಂದು ಟೇಲರ್ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ನಾನು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರೆ, ವೀರೇಂದ್ರ ಸೆಹ್ವಾಗ್, ಶೇನ್ ವಾರ್ನ್, ಮಹೇಲಾ ಜಯವರ್ಧನೆ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರೊಂದಿಗೆ ಆಡಲು ಅವಕಾಶ ಸಿಗುತ್ತಿರಲಿಲ್ಲ ಎಂದು ಟೇಲರ್ ಬರೆದುಕೊಂಡಿದ್ದಾರೆ.

RCB ನಂತರ, ಟೇಲರ್ ರಾಜಸ್ಥಾನ, ಡೆಲ್ಲಿ ಡೇರ್‌ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್) ಪರ ಆಡಿದರು. ನಂತರ ಪುಣೆ ವಾರಿಯರ್ಸ್‌ ಪರ ಆಡಿದ್ದರು. ಬಳಿಕ 2014 ರಲ್ಲಿ ಪುನಃ ದೆಹಲಿ ತಂಡಕ್ಕೆ ಮರಳಿದರು. ಈ ಸೀಸನ್​ ಬಳಿಕ ಟೇಲರ್​ಗೆ ಐಪಿಎಲ್ ಬಾಗಿಲು ಮುಚ್ಚಿತು.

ಇತ್ತೀಚಿಗೆ ವೃತ್ತಿ ಬದುಕಿಗೆ ವಿದಾಯ ಹೇಳಿದ ಟೇಲರ್, ನ್ಯೂಜಿಲೆಂಡ್‌ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ ಆಗಿದ್ದಾರೆ. 7,584 ರನ್‌ ಹಾಗೂ 19 ಶತಕಗಳನ್ನು ಸಿಡಿಸಿರುವ ಟೇಲರ್, ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ (8,581) ಬಳಿಕ ಅತಿ ಹೆಚ್ಚು ಟೆಸ್ಟ್‌ ರನ್‌ ಗಳಿಸಿದ ಎರಡನೇ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

12 ಶತಕಗಳೊಂದಿಗೆ 8,581 ರನ್‌ ಗಳಿಸಿರುವ ರಾಸ್‌ ಸ್ಟಿಫನ್ ಫ್ಲೆಮಿಂಗ್‌(8,007) ಬಳಿಕ ಏಕದಿನ ಕ್ರಿಕೆಟ್‌ನಲ್ಲಿಅತಿ ಹೆಚ್ಚು ರನ್‌ ಗಳಿಸಿದ ಕಿವೀಸ್‌ ತಂಡದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಟೇಲರ್‌, ವಿಂಡೀಸ್‌ ವಿರುದ್ಧ 2006ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 102 ಟಿ20 ಪಂದ್ಯಗಳಾಡಿರುವ ರಾಸ್ ನ್ಯೂಜಿಲೆಂಡ್‌ ಪರ 100ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಾಡಿರುವ ನ್ಯೂಜಿಲೆಂಡ್‌ನ ಮೊದಲ ಕ್ರಿಕೆಟಿಗ ಎನಿಸಕೊಂಡಿದ್ದಾರೆ.

Published On - 3:34 pm, Sun, 14 August 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್