IND vs ZIM: ಭಾರತವನ್ನು ಸೋಲಿಸಿ ಏಕದಿನ ಸರಣಿ ಗೆದ್ದೇ ಗೆಲ್ಲುತ್ತೇವೆ ಎಂದ ಜಿಂಬಾಬ್ವೆ ತಂಡದ ಯುವ ಬ್ಯಾಟರ್

IND vs ZIM: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್​ರಂತಹ ಆಟಗಾರರು ಈ ಸರಣಿಯ ಭಾಗವಾಗಿಲ್ಲ. ಹೀಗಾಗಿ ಈ ವಿಷಯ ನಮಗೆ ಸಹಾಯಕವಾಗಲಿದೆ ಎಂದು ಕಿಯಾ ಹೇಳಿಕೊಂಡಿದ್ದಾರೆ.

IND vs ZIM: ಭಾರತವನ್ನು ಸೋಲಿಸಿ ಏಕದಿನ ಸರಣಿ ಗೆದ್ದೇ ಗೆಲ್ಲುತ್ತೇವೆ ಎಂದ ಜಿಂಬಾಬ್ವೆ ತಂಡದ ಯುವ ಬ್ಯಾಟರ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 15, 2022 | 6:02 PM

ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಭಾರತ ತಂಡ ಜಿಂಬಾಬ್ವೆಗೆ (IND vs ZIM) ಆಗಮಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ (Rohit Sharma and Virat Kohli) ಆಟಗಾರರಿಲ್ಲದಿದ್ದರೂ ಭಾರತ ತಂಡವು ಬಲಾಢ್ಯವಾಗಿ ಕಾಣುತ್ತಿದೆ. ತುಲನಾತ್ಮಕವಾಗಿ ದುರ್ಬಲವಾದ ಜಿಂಬಾಬ್ವೆಯನ್ನು ಸೋಲಿಸುವಲ್ಲಿ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳ ಟಾಕ್ ಆಗಿದೆ. ಆದರೆ ಬಾಂಗ್ಲಾದೇಶ ವಿರುದ್ಧದ ಗೆಲುವಿನಿಂದ ಜಿಂಬಾಬ್ವೆ ತಂಡ ಉತ್ಸಾಹದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಜಿಂಬಾಬ್ವೆಯನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಇದಕ್ಕೆ ಪೂರಕವೆಂಬಂತೆ ಜಿಂಬಾಬ್ವೆ ಬ್ಯಾಟ್ಸ್​ಮನ್ ಇನ್ನೋಸೆಂಟ್ ಕಿಯಾ (Innocent Kaia) ಒಂದು ಹೆಜ್ಜೆ ಮುಂದಿಟ್ಟಿದ್ದು, ಜಿಂಬಾಬ್ವೆ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನಾನು ಗರಿಷ್ಠ ರನ್ ಮತ್ತು ಶತಕ ಗಳಿಸಲು ಬಯಸುತ್ತೇನೆ

ಆಂಗ್ಲ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಇನ್ನೋಸೆಂಟ್ ಕಿಯಾ, ಜಿಂಬಾಬ್ವೆ ತಂಡ ಈ ಸರಣಿಯನ್ನು 2-1 ಅಂತರದಲ್ಲಿ ಗೆಲ್ಲಲಿದೆ. ವೈಯಕ್ತಿಕವಾಗಿ ಹೇಳುವುದಾದರೆ, ನಾನು ಈ ಸರಣಿಯಲ್ಲಿ ಹೆಚ್ಚು ರನ್ ಮತ್ತು ಶತಕ ಗಳಿಸಲು ಬಯಸುತ್ತೇನೆ. ಯಾಕೆಂದರೆ ಸರಣಿಯಲ್ಲಿ ಯಶಸ್ವಿ ಬ್ಯಾಟ್ಸ್‌ಮನ್ ಆಗಬೇಕೆಂದರೆ, ನೀವು ಹೆಚ್ಚು ರನ್ ಗಳಿಸಬೇಕು. ಹೀಗಾಗಿ ಇದುವೇ ನನ್ನ ಗುರಿಯಾಗಲಿದೆ.

ಇದನ್ನೂ ಓದಿ
Image
IND vs ZIM: ಚೊಚ್ಚಲ ಪಂದ್ಯದಲ್ಲಿ ಶತಕ, ಈಗ ಟೀಂ ಇಂಡಿಯಾ ನಾಯಕ; ಜಿಂಬಾಬ್ವೆ ನೆಲದಲ್ಲಿ ಕನ್ನಡಿಗನ ಕಮಾಲ್
Image
3 ಪಂದ್ಯದಲ್ಲಿ 205 ಬಾರಿಸಿದರೂ ಶುಭ್​ಮನ್ ಗಿಲ್​ಗೆ ಭಾರತದ ಬಿ ತಂಡದಲ್ಲೂ ಇಲ್ಲ ಭದ್ರ ಸ್ಥಾನ
Image
IND vs ZIM: ಏಕದಿನ ಸರಣಿಯಲ್ಲಿ ಭಾರತಕ್ಕೆ ಸವಾಲೊಡ್ಡುವ ಜಿಂಬಾಬ್ವೆ ತಂಡದ ಐವರು ಕ್ರಿಕೆಟಿಗರಿವರು

ಈ ವರ್ಷ ಜಿಂಬಾಬ್ವೆ ತಂಡಕ್ಕೆ ಪಾದಾರ್ಪಣೆ ಮಾಡಿರುವ ಇನ್ನೋಸೆಂಟ್ ಕಿಯಾ, ಭಾರತ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಇದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್​ರಂತಹ ಆಟಗಾರರು ಈ ಸರಣಿಯ ಭಾಗವಾಗಿಲ್ಲ. ಹೀಗಾಗಿ ಈ ವಿಷಯ ನಮಗೆ ಸಹಾಯಕವಾಗಲಿದೆ ಎಂದು ಕಿಯಾ ಹೇಳಿಕೊಂಡಿದ್ದಾರೆ.

ಭಾರತದ ಮೇಲೆ ಒತ್ತಡ

ವಿರಾಟ್ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ ಇಲ್ಲದಿರುವಾಗ, ಭಾರತೀಯ ಕ್ರಿಕೆಟಿಗರು ಈ ಸರಣಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ. ಜಿಂಬಾಬ್ವೆಗೆ ಬರುತ್ತಿರುವ ಭಾರತ ತಂಡ ಬಲಿಷ್ಠವಾಗಿದೆ ಎಂಬುದು ನನಗೆ ಗೊತ್ತು. ಅವರ ವಿರುದ್ಧ ಆಡುವುದು ಸುಲಭವಾದ್ದರಿಂದ ನಾವು ಅವರನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ನಾನು ಭಾರತದ ವಿರುದ್ಧ ಚೆನ್ನಾಗಿ ಆಡುತ್ತೇನೆ ಎಂದು ನಂಬಿದ್ದೇನೆ ಎಂದು ಇನ್ನೋಸೆಂಟ್ ಕಿಯಾ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಅದ್ಭುತ ಪ್ರದರ್ಶನ

ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆ ತಣಡದ 2-1 ಅಂತರದ ಗೆಲುವಿನಲ್ಲಿ ಎಡಗೈ ಬ್ಯಾಟ್ಸ್‌ಮನ್ ಇನ್ನೋಸೆಂಟ್ ಕಿಯಾ ಪ್ರಮುಖ ಪಾತ್ರ ವಹಿಸಿದ್ದರು. ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಿಯಾ 110 ರನ್‌ಗಳ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಅವರು ಸಿಕಂದರ್ ರಾಜಾ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 192 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ರಾಝಾ ಔಟಾಗದೆ 135 ರನ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

Published On - 6:02 pm, Mon, 15 August 22

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್