ಟಿ20 ವಿಶ್ವಕಪ್​ಗೆ ಜಡೇಜಾರನ್ನು ಆಯ್ಕೆ ಮಾಡುವುದರಿಂದ ಪ್ರಯೋಜನವಿಲ್ಲ ಎಂದ ಲೆಜೆಂಡರಿ ಕ್ರಿಕೆಟರ್..!

Asia Cup 2022: ಟಿ20 ವಿಶ್ವಕಪ್‌ನಿಂದ ಒಟ್ಟು 7 ಪಂದ್ಯಗಳನ್ನು ಆಡಿರುವ ಅವರು ಈ ಏಳು ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಮಾತ್ರ ಕಬಳಿಸಲು ಶಕ್ತರಾಗಿದ್ದಾರೆ.

ಟಿ20 ವಿಶ್ವಕಪ್​ಗೆ ಜಡೇಜಾರನ್ನು ಆಯ್ಕೆ ಮಾಡುವುದರಿಂದ ಪ್ರಯೋಜನವಿಲ್ಲ ಎಂದ ಲೆಜೆಂಡರಿ ಕ್ರಿಕೆಟರ್..!
Ravindra Jadeja
Follow us
TV9 Web
| Updated By: ಪೃಥ್ವಿಶಂಕರ

Updated on:Aug 14, 2022 | 8:44 PM

ಏಷ್ಯಾಕಪ್ (Asia Cup) ಮುಗಿದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಬೇಕಾಗಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಟಿ20 ವಿಶ್ವಕಪ್​ಗೆ (T20 World Cup) ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ. ಏಕೆಂದರೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಅನೇಕ ಆಟಗಾರರು ಕಾತುರದಿಂದ ಕಾಯುತ್ತಿದ್ದಾರೆ. ಅವರಲ್ಲಿ ರವೀಂದ್ರ ಜಡೇಜಾ (Ravindra Jadeja) ಕೂಡ ಸೇರಿದ್ದಾರೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಜಡೇಜಾ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಜಡೇಜಾರಿಂದ ಪ್ರಯೋಜನವಿಲ್ಲ ಎಂದ ಆಕಾಶ್ ಚೋಪ್ರಾ

ರವೀಂದ್ರ ಜಡೇಜಾ ಅವರು ಏಷ್ಯಾಕಪ್‌ಗಾಗಿ ಭಾರತದ 15 ಆಟಗಾರರ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ ಟಿ20 ವಿಶ್ವಕಪ್‌ಗೆ ಜಡೇಜಾ ಕೂಡ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಜಡೇಜಾ ಆಟದ ಬಗ್ಗೆ ಆಕಾಶ್ ದೊಡ್ಡ ಹೇಳಿಕೆ ನೀಡಿದ್ದಾರೆ. ‘ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ನಿಸ್ಸಂದೇಹವಾಗಿ ಆಡಲಿದ್ದಾರೆ. ಇದು ನಿಮಗೂ ಗೊತ್ತು, ನನಗೂ ಗೊತ್ತು. ಆದರೆ, ಈ ಬಾರಿ ಅವರು ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ಅವರ ಅಂಕಿಅಂಶಗಳನ್ನು ಗಮನಿಸಿದರೆ, ಟಿ20 ವಿಶ್ವಕಪ್‌ನಿಂದ ಒಟ್ಟು 7 ಪಂದ್ಯಗಳನ್ನು ಆಡಿರುವ ಅವರು ಈ ಏಳು ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಮಾತ್ರ ಕಬಳಿಸಲು ಶಕ್ತರಾಗಿದ್ದಾರೆ. ಅವರ ಸರಾಸರಿ 43 ಕ್ಕಿಂತ ಹೆಚ್ಚಿದ್ದು, ರನ್​ರೇಟ್​ ಕೂಡ 8.5 ರ ಆಸುಪಾಸಿನಲ್ಲಿದೆ. ಹೀಗಾಗಿ ಜಡೇಜಾ ಸ್ಪಿನ್ನಿಂದ ಟೀಂ ಇಂಡಿಯಾ ಹೆಚ್ಚಿನದ್ದನ್ನು ನಿರೀಕ್ಷಿಸುವಂತಿಲ್ಲ ಅಂದಿದ್ದಾರೆ.

ಅಶ್ವಿನ್ ಮತ್ತು ಪಟೇಲ್ ಬಗ್ಗೆ

ಇದುವರೆಗೂ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜಡೇಜಾ ವಿಕೆಟ್ ಪಡೆಯುವ ಸಾಮರ್ಥ್ಯ ಇನ್ನೂ ಕಂಡುಬಂದಿಲ್ಲ. ಇದೇ ಕಥೆ ಐಪಿಎಲ್‌ನಲ್ಲೂ ಕಂಡು ಬಂದಿದೆ. ಅವರು ಕಳೆದ ಐಪಿಎಲ್‌ನಲ್ಲಿ 10 ಪಂದ್ಯಗಳನ್ನು ಆಡಿದ, ಸುಮಾರು 50 ರ ಸರಾಸರಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸಮಯದಲ್ಲಿ ಅವರ ರನ್​ರೇಟ್ 7.50 ಆಗಿದ್ದು, ಸ್ಟ್ರೈಕ್ ರೇಟ್ ಸುಮಾರು 40 ಆಗಿತ್ತು. ಜಡೇಜಾ ಹೊರತುಪಡಿಸಿ, ಆಕಾಶ್ ಚೋಪ್ರಾ, ಅಶ್ವಿನ್ ಮತ್ತು ಅಕ್ಷರ್ ಪಟೇಲ್‌ಗೆ ಅದೇ ಕಾಮೆಂಟ್ ಮಾಡಿದ್ದಾರೆ.

2021ರ ಟಿ20 ವಿಶ್ವಕಪ್‌ನಿಂದ ಅಶ್ವಿನ್ ಮತ್ತು ಅಕ್ಷರ್ ಕೂಡ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾದಲ್ಲಿಯೂ ಅವರ ವಿಕೆಟ್ ಟೇಕಿಂಗ್ ಸರಾಸರಿ ಒಂದೇ ಆಗಿರುತ್ತದೆ, ಅಂದರೆ ಈ ಬೌಲರ್‌ಗಳಿಗೆ ಆಸೀಸ್ ನಾಡಲ್ಲಿ ವಿಕೆಟ್ ತೆಗೆಯಲು ಸಾಧ್ಯವಾಗುವುದಿಲ್ಲ. ಆದರೆ ಆಕಾಶ್ ಚೋಪ್ರಾ ಯಜುವೇಂದ್ರ ಚಹಲ್​ಗೆ ಫುಲ್ ಮಾಕ್ರ್ಸ್​ ನೀಡಿದ್ದು, ಚಹಲ್ ವಿಕೆಟ್ ಪಡೆಯುವಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದು ಬಣ್ಣಿಸಿದ್ದಾರೆ. ಕಳೆದ ವಿಶ್ವಕಪ್‌ನ ತಂಡದಲ್ಲಿ ಚಹಲ್​ರನ್ನು ಸೇರಿಸದಿರುವುದು ದೊಡ್ಡ ತಪ್ಪಾಗಿದ್ದು, ಈ ಬಾರಿ ಅದನ್ನು ಪುನರಾವರ್ತಿಸಬಾರದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Published On - 8:44 pm, Sun, 14 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ