Arjun Tendulkar: ಬೌಲಿಂಗ್ ಬಿಟ್ಟು ಬ್ಯಾಟಿಂಗ್ ಅಭ್ಯಾಸದಲ್ಲಿ ಬ್ಯುಸಿಯಾದ ಅರ್ಜುನ್ ತೆಂಡೂಲ್ಕರ್: ವಿಡಿಯೋ

TV9 Digital Desk

| Edited By: Vinay Bhat

Updated on:Aug 15, 2022 | 7:42 AM

ಅರ್ಜುನ್ ಗೋವಾಕ್ಕೆ ತೆರಳಿದ್ದು, ಗೋವಾ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಅಭ್ಯಾಸ ಶುರುಮಾಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ.

Arjun Tendulkar: ಬೌಲಿಂಗ್ ಬಿಟ್ಟು ಬ್ಯಾಟಿಂಗ್ ಅಭ್ಯಾಸದಲ್ಲಿ ಬ್ಯುಸಿಯಾದ ಅರ್ಜುನ್ ತೆಂಡೂಲ್ಕರ್: ವಿಡಿಯೋ
Arjun Tendulkar

ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್​ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಮುಂಬೈ ಕ್ರಿಕೆಟ್ ಬೋರ್ಡ್​​ನಿಂದ ನಿರಾಪೇಕ್ಷಣಾ ಪ್ರಮಾಣಪತ್ರಕ್ಕೆ (ಎನ್‌ಒಸಿ) ಅರ್ಜಿ ಸಲ್ಲಿಕೆ ಮಾಡಿರುವುದು ಬಹುತೇಕ ಖಚಿತವಾಗಿದೆ. ತಮ್ಮ ತವರು ಮುಂಬೈ ತಂಡವನ್ನು ತೊರೆದು ಮುಂದಿನ ದೇಶೀಯ ಋತುವಿನಲ್ಲಿ ನೆರೆಯ ಗೋವಾ ಪರ ತಮ್ಮ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಲಿದ್ದಾರೆ. ಮುಂಬೈ ತಂಡದಲ್ಲಿ ಹೆಚ್ಚು ಅವಕಾಶ ಸಿಗದ ಕಾರಣ ಮುಂಬೈ ತಂಡ (Mumbai Team) ತೊರೆಯಲು ನಿರ್ಧರಿಸಿದ್ದು, ಎನ್​ಒಸಿ ಪಡೆದುಕೊಂಡು ಇದೀಗ ಗೋವಾ ಪರ ಆಡಲಿದ್ದಾರೆ.

ಈಗಾಗಲೇ ಅರ್ಜುನ್ ಗೋವಾಕ್ಕೆ ತೆರಳಿದ್ದು, ಗೋವಾ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಅಭ್ಯಾಸ ಶುರುಮಾಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಅಚ್ಚರಿ ಎಂದರೆ ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್ ಬೌಲಿಂಗ್ ಬಿಟ್ಟು ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ

ಅರ್ಜುನ್ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಅವರು ಹರಿಯಾಣಾ ಮತ್ತು ಪುದುಚೇರಿ ವಿರುದ್ಧ 2020-21 ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡಿದ್ದರು. ಆದರೆ ಇದೀಗ ಅವರು ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದು, ಮುಂಬೈ ಕ್ರಿಕೆಟ್ ತೊರೆದು ಗೋವಾ ತಂಡಕ್ಕೆ ಸೇರಿಕೊಂಡಿದ್ದಾರೆ.

ಅರ್ಜುನ್ ಅವರ ವೃತ್ತಿಜೀವನದ ಈ ಹಂತದಲ್ಲಿ ಮೈದಾನದಲ್ಲಿ ಗರಿಷ್ಠ ಆಟದ ಸಮಯವನ್ನು ಪಡೆಯುವುದು ಮುಖ್ಯವಾಗಿದೆ. ಈ ಬದಲಾವಣೆಯು ಅರ್ಜುನ್ ಹೆಚ್ಚು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಂಭವನೀಯತೆಯನ್ನು ಸುಧಾರಿಸುತ್ತದೆ ಎಂದು ನಾವು ನಂಬುತ್ತೇನೆ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಹೊಸ ಹಂತವನ್ನು ಪ್ರಾರಂಭಿಸುತ್ತಿದ್ದಾರೆ,” ಎಂದು SRT ಕ್ರೀಡಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತ ಗೋವಾ ಕ್ರಿಕೆಟ್​ ಅಸೋಸಿಯೇಷನ್​​ ಸದ್ಯ ಎಡಗೈ ಬೌಲರ್​ ಹುಡುಕಾಟದಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವ ಆಟಗಾರನಿಗೂ ಮಣೆ ಹಾಕಲು ಮುಂದಾಗಿದೆ. ಬೌಲಿಂಗ್​ನಲ್ಲಿ ಹೆಚ್ಚು ಕೌಶಲ್ಯವನ್ನು ಹೊಂದಿರುವ ಅರ್ಜುನ್​ಗೆ ಬ್ಯಾಟಿಂಗ್​ ಟಚ್ ಕೂಡ ಇದೆ. ಸದ್ಯ ಬ್ಯಾಟಿಂಗ್​ನಲ್ಲಿ ಇನ್ನಷ್ಟು ಅನುಭವ ಪಡೆಯಲು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಎರಡು ಕೌಶಲ್ಯ ಅರ್ಜುನ್ ತೆಂಡೂಲ್ಕರ್ ಬಳಿ ಇರುವ ಕಾರಣ ಅವರಿಗೆ ಗೋವಾ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada