Cheteshwar Pujara: 20 ಫೋರ್, 5 ಸಿಕ್ಸರ್, 174 ರನ್: ಸ್ಫೋಟಕ ಶತಕ ಸಿಡಿಸಿದಾಗ ಪೂಜಾರ ಮಗಳು ಏನು ಮಾಡಿದ್ರು ನೋಡಿ
Royal London One Day Cup: ದೇಶೀಯ ಕ್ರಿಕೆಟ್ ರಾಯಲ್ ಲಂಡನ್ ಕಪ್‌ನಲ್ಲಿ ಚೇತೇಶ್ವರ್ ಪೂಜಾರ ಪೂಜಾರ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಏಕದಿನ ಟೂರ್ನಿಯಲ್ಲಿ ಸತತ ಎರಡನೇ ಸ್ಪೋಟಕ ಶತಕ ಬಾರಿಸುವ ಮೂಲಕ ಪೂಜಾರ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಕಳಪೆ ಫಾರ್ಮ್ನಿಂದಾಗಿ ಟೀಮ್ ಇಂಡಿಯಾದಿಂದ (Team India) ಹೊರಬಿದ್ದಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಬಳಿಕ ಇಂಗ್ಲೆಂಡ್ನಲ್ಲಿ ಕೌಂಟಿ ಟೆಸ್ಟ್ ಕ್ರಿಕೆಟ್ ಆಡಿ ರಾಷ್ಟ್ರೀಯ ತಂಡಕ್ಕೆ ಭರ್ಜರಿ ಕಮ್ಬ್ಯಾಕ್ ಮಾಡಿದ್ದರು. ಭಾರತ ಪರ ಟೆಸ್ಟ್ ತಂಡದಲ್ಲಿ ಮಾತ್ರ ಕಣಕ್ಕಿಳಿಯುವ ಪೂಜಾರ ಇತರೆ ಸಮಯದಲ್ಲಿ ಕೌಂಟಿ ಕ್ರಿಕೆಟ್ ಆಡುವ ಮೂಲಕ ಬ್ಯುಸಿ ಇರುತ್ತಾರೆ. ಅದರಂತೆ ಈಗ ಇಂಗ್ಲಿಷ್ ಕೌಂಟ್ಯಲ್ಲಿ ಪೂಜಾರ ಮತ್ತೆ ಅಬ್ಬರಿಸುತ್ತಿದ್ದಾರೆ. ಆದರೆ, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅಲ್ಲ ಏಕದಿನ ಕ್ರಿಕೆಟ್‌ನಲ್ಲಿ. ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ರಾಯಲ್ ಲಂಡನ್ ಕಪ್‌ನಲ್ಲಿ (Royal London One-Day Cup) ಪೂಜಾರ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಏಕದಿನ ಟೂರ್ನಿಯಲ್ಲಿ ಸತತ ಎರಡನೇ ಸ್ಪೋಟಕ ಶತಕ ಬಾರಿಸುವ ಮೂಲಕ ಪೂಜಾರ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ರಾಯಲ್ ಲಂಡನ್ ಕಪ್ ಏಕದಿನ ಪಂದ್ಯದಲ್ಲಿ ಸರ್ರೆ ವಿರುದ್ಧ ಪೂಜಾರ ಕೇವಲ 131 ಎಸೆತಗಳಿಂದ 174 ರನ್ ಸಿಡಿಸಿದರು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಪೂಜಾರ ಅವರ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. ಇದಕ್ಕೂ ಮುನ್ನ ಶುಕ್ರವಾರ ನಡೆದ ಪಂದ್ಯದಲ್ಲಿ ವಾರ್ವಿಕ್‌ಶೈರ್ ವಿರುದ್ಧ ಪೂಜಾರ 79 ಎಸೆತಗಳಿಂದ 107 ರನ್ ಬಾರಿಸಿದ್ದರು. ನಾಯಕ ಟಾಮ್ ಹೈನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಪೂಜಾರ, ಸರ್ರೆ ತಂಡದ ವಿರುದ್ಧದ ಪಂದ್ಯದಲ್ಲಿ ಸಸೆಕ್ಸ್ 3.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ಕ್ರೀಸ್‍ಗೆ ಬಂದ ಪೂಜಾರ ತಂಡಕ್ಕೆ ಆಸರೆಯಾಗಿ ನಿಂತರು.
ಮೂರನೇ ವಿಕೆಟ್‍ಗೆ ಟಾಮ್ ಕ್ಲರ್ಕ್ ಜೊತೆ ಸೇರಿದ ಪೂಜಾರ 205 ರನ್‍ಗಳ ಕಾಣಿಕೆ ನೀಡಿದರು. ಕ್ಲರ್ಕ್ 104 ರನ್ ಗಳಿಸಿ ಔಟ್ ಆದ ಬಳಿಕ ಪೂಜಾರ 103 ಎಸೆತಗಳಲ್ಲಿ ತಮ್ಮ ಶತಕ ಸಾಧಿಸಿದರು. ಶತಕದ ಬಳಿಕ ರನ್ ಗಳಿಕೆ ವೇಗ ಹೆಚ್ಚಿಸಿಕೊಂಡ ಅವರು ಬಳಿಕ ಕೇವಲ 28 ಎಸೆತಗಳಲ್ಲಿ 74 ರನ್ ಚಚ್ಚಿದರು. ಪೂಜಾರ ಇನಿಂಗ್ಸ್ ನಲ್ಲಿ 20 ಬೌಂಡರಿ ಹಾಗೂ 5 ಸಿಕ್ಸರ್ ಗಳು ಸೇರಿದ್ದವು. ಅದರಲ್ಲೂ ಪೂಜಾರ ಶತಕ ಸಿಡಿಸಿದ ಸಂದರ್ಭ ಅವರ ಮಗಳು 4 ವರ್ಷದ ಅದಿತಿ ಡ್ರೆಸ್ಸಿಂಗ್ ರೂಮ್ನಲ್ಲಿ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋವನ್ನು ಪೂಜಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಈ ಪಂದ್ಯದಲ್ಲಿ ಪೂಜಾರ ಸಾಹಸದಿಂದಾಗಿ ಸಸೆಕ್ಸ್ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಸರ್ರೆ ಕೇವಲ 162 ರನ್‍ಗಳಿಗೆ ಆಲೌಟ್ ಆಗಿ 216 ರನ್‍ಗಳ ಹೀನಾಯ ಸೋಲು ಕಂಡಿತು.
Published On - 11:17 am, Mon, 15 August 22