AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

138 ರನ್​ಗಳ ಟಾರ್ಗೆಟ್: ಬಿರುಗಾಳಿ ಶತಕ ಸಿಡಿಸಿ ಏಕಾಂಗಿಯಾಗಿ ಮ್ಯಾಚ್ ಫಿನಿಶ್ ಮಾಡಿದ ಆರಂಭಿಕ..!

The Hundred: ನಾಯಕ ಸ್ಯಾಮ್ ಬಿಲ್ಲಿಂಗ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಓವಲ್ ತಂಡವು ಎದುರಾಳಿಗಳನ್ನು ರನ್​ಗಳಿಸದಂತೆ ನಿಯಂತ್ರಿಸಿದರು.

138 ರನ್​ಗಳ ಟಾರ್ಗೆಟ್: ಬಿರುಗಾಳಿ ಶತಕ ಸಿಡಿಸಿ ಏಕಾಂಗಿಯಾಗಿ ಮ್ಯಾಚ್ ಫಿನಿಶ್ ಮಾಡಿದ ಆರಂಭಿಕ..!
Will Jacks
TV9 Web
| Edited By: |

Updated on: Aug 15, 2022 | 10:36 AM

Share

ಎದುರಾಳಿ ತಂಡ ಕಲೆಹಾಕಿದ ಒಟ್ಟಾರೆ ಮೊತ್ತವನ್ನು ಏಕೈಕ ಬ್ಯಾಟ್ಸ್​ಮನ್ ಚೇಸ್ ಮಾಡಿದ್ರೆ ಹೇಗಿರಬಹುದು? ಇಂತಹದೊಂದು ಅಪರೂಪದ ರನ್​ ಚೇಸಿಂಗ್​ಗೆ ಇಂಗ್ಲೆಂಡ್​ನ ದಿ ಹಂಡ್ರೆಡ್ ಲೀಗ್ ಸಾಕ್ಷಿಯಾಗಿದೆ. ಭಾನುವಾರ ನಡೆದ ಲೀಗ್​ನ 14ನೇ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಹಾಗೂ ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಓವಲ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ನಾಯಕ ಸ್ಯಾಮ್ ಬಿಲ್ಲಿಂಗ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಓವಲ್ ತಂಡವು ಎದುರಾಳಿಗಳನ್ನು ರನ್​ಗಳಿಸದಂತೆ ನಿಯಂತ್ರಿಸಿದರು. ಇದಾಗ್ಯೂ ಬಲಗೈ ಬ್ಯಾಟ್ಸ್​ಮನ್​ ಮಾರ್ಕಸ್​ ಸ್ಟೋಯಿನಿಸ್ 27 ಎಸೆತಗಳಲ್ಲಿ 37 ರನ್​ ಬಾರಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಸದರ್ನ್​ ಬ್ರೇವ್ ತಂಡಕ್ಕೆ ಆಸರೆಯಾದರು. ಪರಿಣಾಮ 100 ಎಸೆತಗಳಲ್ಲಿ 6 ವಿಕೆಟ್ ನಷ್ಟಕ್ಕೆ ಸದರ್ನ್​ ಬ್ರೇವ್ ತಂಡವು ಕೇವಲ 137 ರನ್​ ಕಲೆಹಾಕಿತು.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

138 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಜೇಸನ್ ರಾಯ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಅತ್ತ ಮೊದಲ ಓವರ್​ನಲ್ಲೇ ಮೊದಲ ವಿಕೆಟ್ ಪಡೆದ ಖುಷಿಯಲ್ಲಿದ್ದ ಸದರ್ನ್​ ಬ್ರೇವ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದು ಮತ್ತೋರ್ವ ಆರಂಭಿಕ ವಿಲ್ ಜಾಕ್ಸ್.

2ನೇ ಓವರ್​ನಿಂದ ಅಬ್ಬರಿಸಲಾರಂಭಿಸಿದ ವಿಲ್ ಜಾಕ್ಸ್​ ಸದರ್ನ್ ಬೌಲರ್​ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಅತ್ತ ವಿಕೆಟ್​ಗಾಗಿ ಪರದಾಡಿದ್ದ ಸದರ್ನ್​ ಬ್ರೇವ್ ತಂಡದ ಬೌಲರ್​ಗಳು ರನ್​ ಗತಿ ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಏಕೆಂದರೆ ಮೈದಾನದ ಮೂಲೆ ಮೂಲೆಗೂ ವಿಲ್ ಜಾಕ್ಸ್ ಚೆಂಡನ್ನು ಬಾರಿಸುತ್ತಿದ್ದರು.

ಅದರಂತೆ 8 ಸಿಕ್ಸ್ ಹಾಗೂ 10 ಫೋರ್ ಸಿಡಿಸಿದ ವಿಲ್ ಜಾಕ್ಸ್​ ಭರ್ಜರಿ ಶತಕ ಸಿಡಿಸಿದರು. ಅಲ್ಲದೆ ಕೇವಲ 48 ಎಸೆತಗಳಲ್ಲಿ ಅಜೇಯ 108 ರನ್​ ಬಾರಿಸಿದರು. ಈ ಮೂಲಕ 82 ಎಸೆತಗಳಲ್ಲಿ 142 ರನ್​ ಕಲೆಹಾಕುವ ತಂಡವನ್ನು ಗುರಿಮುಟ್ಟಿಸಿ 7 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

View this post on Instagram

A post shared by The Hundred (@thehundred)

ಇಲ್ಲಿ 138 ರನ್​ಗಳ ಟಾರ್ಗೆಟ್​ನಲ್ಲಿ ವಿಲ್ ಜಾಕ್ಸ್​ ಒಬ್ಬರೇ 108 ರನ್​ ಬಾರಿಸಿದ್ದು ವಿಶೇಷ. ಅಂದರೆ ಉಳಿದ ನಾಲ್ವರು ಬ್ಯಾಟ್ಸ್​ಮನ್​ ಸೇರಿ​ ಕಲೆಹಾಕಿದ್ದು ಕೇವಲ 34 ರನ್​ಗಳು ಮಾತ್ರ. ಇನ್ನು ಈ ಬಿರುಗಾಳಿ ಶತಕದೊಂದಿಗೆ ಅಬ್ಬರಿಸಿದ ವಿಲ್ ಜಾಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು