
ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಶಮಿ( Mohammed Shami) ವಿರುದ್ಧ ಗಂಭೀರ ಆರೋಪ ಮಾಡಿರುವ ಪತ್ನಿ ಹಸೀನ್ ಜಹಾನ್ ಶಮಿಯನ್ನು ಬಂಧಿಸುವಂತೆ ಸುಪ್ರೀಂಕೋರ್ಟ್ಗೆ ಮೊರೆ ಹೋಗಿದ್ದಾರೆ. ಮೊಹಮ್ಮದ್ ಶಮಿ ವಿರುದ್ಧದ ಬಂಧನ ವಾರೆಂಟ್ಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ಮಾರ್ಚ್ 28, 2023ರ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟ್ ಶಮಿ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್ಗೆ ತಡೆ ನೀಡಿತ್ತು, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮಾಡಿದ್ದ ಮನವಿಯನ್ನು ಹೈಕೋರ್ಟ್ನಲ್ಲಿ ವಜಾಗೊಳಿಸಲಾಗಿದೆ.
ಮತ್ತಷ್ಟು ಓದಿ: Mohammed Shami: ಮೊಹಮ್ಮದ್ ಶಮಿಗೆ ಬಿಗ್ ಶಾಕ್: ಪತ್ನಿಗೆ ತಿಂಗಳು 50 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶ
ನ್ಯಾಯಾಲಯದಲ್ಲಿ ಜಹಾನ್ ಆರೋಪ ನಿಜವೆಂದು ಸಾಬೀತಾದರೆ ಕ್ಷಮೆಯಾಚಿಸುವುದಾಗಿ ಶಮಿ ಈ ಹಿಂದೆ ಹೇಳಿದ್ದರು. ಈ ವರ್ಷದ ಆರಂಭದಲ್ಲಿ ಶಮಿ ಜಹಾನ್‌ಗೆ ಮಾಸಿಕ 50,000 ರೂಪಾಯಿ ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯವು ಆದೇಶಿಸಿತ್ತು. ಆದರೆ, ಜಹಾನ್ ಜೀವನಾಂಶದ ಮೊತ್ತದಿಂದ ಅತೃಪ್ತರಾಗಿದ್ದರು ಮತ್ತು 2018 ರಲ್ಲಿ ತಿಂಗಳಿಗೆ 10 ಲಕ್ಷ ರೂ.ಗೆ ಬೇಡಿಕೆಯಿಟ್ಟರು, ಇದರಲ್ಲಿ ವೈಯಕ್ತಿಕ ವೆಚ್ಚಕ್ಕಾಗಿ ರೂ.7 ಲಕ್ಷ ಮತ್ತು ಅವರ ಮಗಳ ನಿರ್ವಹಣೆಗೆ ರೂ.3 ಲಕ್ಷ ಸೇರಿತ್ತು.
ಅರ್ಜಿ ಪ್ರಕಾರ ಆಗಸ್ಟ್ 9 2019ರಂದು ಅಲಿಪುರದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಶಮಿ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ್ದರು. ಶಮಿ ಆ ಆದೇಶವನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದರು, ಇದು ಸೆಪ್ಟೆಂಬರ್ 9 2019ರಂದು ಬಂಧನ ವಾರಂಟ್ ಮತ್ತು ಕ್ರಿಮಿನಲ್ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಗಳಿಗೆ ತಡೆ ನೀಡಿದೆ.
ಹೀಗಾಗಿ ಶಮಿ ಪತ್ನಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಅವರ ಪರವಾಗಿ ಯಾವುದೇ ಆದೇಶ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಮೊಹಮ್ಮದ್ ಶಮಿ ತನ್ನ ಬಳಿ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದರು, ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ರಿಕೆಟ್ಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Wed, 3 May 23