ಮೊಹಮ್ಮದ್ ಸಿರಾಜ್​ಗೆ 31ನೇ ಸ್ಥಾನ: ಇಲ್ಲಿದೆ ಬೆಸ್ಟ್ ಬೌಲಿಂಗ್ ಅಂಕಿಅಂಶಗಳು

| Updated By: ಝಾಹಿರ್ ಯೂಸುಫ್

Updated on: Sep 18, 2023 | 7:24 PM

Mohammed Siraj: ಮೊಹಮ್ಮದ್ ಸಿರಾಜ್​ಗೂ ಮುನ್ನ ಏಕದಿನ ಕ್ರಿಕೆಟ್​ನಲ್ಲಿ 29 ಬೌಲರ್​ಗಳು ಅದ್ಭುತ ದಾಳಿ ನಡೆಸಿದ್ದಾರೆ. ಆ ಬೌಲರ್​ಗಳು ಯಾರೆಲ್ಲಾ, ಯಾವ ತಂಡದ ವಿರುದ್ಧ ಎಷ್ಟು ವಿಕೆಟ್ ಪಡೆದಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಮೊಹಮ್ಮದ್ ಸಿರಾಜ್​ಗೆ 31ನೇ ಸ್ಥಾನ: ಇಲ್ಲಿದೆ ಬೆಸ್ಟ್ ಬೌಲಿಂಗ್ ಅಂಕಿಅಂಶಗಳು
Mohammed Siraj
Follow us on

ಏಷ್ಯಾಕಪ್​ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಮಾರಕ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಸಿರಾಜ್  ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಇದು ಏಕದಿನ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಅಂತು ಅಲ್ಲ. ಏಕೆಂದರೆ ಇದಕ್ಕೂ ಮುನ್ನ 29 ಬೌಲರ್​ಗಳು ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ದಾಳಿ ನಡೆಸಿದ್ದಾರೆ. ಆ ಬೌಲರ್​ಗಳು ಯಾರೆಲ್ಲಾ, ಯಾವ ತಂಡದ ವಿರುದ್ಧ ಎಷ್ಟು ವಿಕೆಟ್ ಪಡೆದಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಏಕದಿನ ಕ್ರಿಕೆಟ್​ನ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು:

  1.  ಚಾಮಿಂಡ ವಾಸ್ (ಶ್ರೀಲಂಕಾ) – 8/19 vs ಝಿಂಬಾಬ್ವೆ, 2001
  2.  ಶಾಹಿದ್ ಅಫ್ರಿದಿ (ಪಾಕಿಸ್ತಾನ್) – 7/12 vs ವೆಸ್ಟ್ ಇಂಡೀಸ್, 2013
  3.  ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) – 7/15 vs ನಮೀಬಿಯಾ, 2003
  4.  ರಶೀದ್ ಖಾನ್ (ಅಫ್ಘಾನಿಸ್ತಾನ್) – 7/18 vs ವೆಸ್ಟ್ ಇಂಡೀಸ್, 2017
  5.  ಆಂಡಿ ಬಿಕೆಲ್ (ಆಸ್ಟ್ರೇಲಿಯಾ) – 7/20 vs ಇಂಗ್ಲೆಂಡ್, 2003
  6.  ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) – 7/30 vs ಭಾರತ, 2000
  7.  ಅಲಿ ಖಾನ್ (ಯುಎಸ್​ಎ) – 7/32 vs ಜರ್ಸಿ, 2013
  8.  ಟಿಮ್ ಸೌಥಿ (ನ್ಯೂಝಿಲೆಂಡ್) – 7/33 vs ಇಂಗ್ಲೆಂಡ್, 2015
  9.  ಟ್ರೆಂಟ್ ಬೌಲ್ಟ್ (ನ್ಯೂಝಿಲೆಂಡ್) – 7/34 vs ವೆಸ್ಟ್ ಇಂಡೀಸ್, 2017
  10.  ವಾಕರ್ ಯೂನಿಸ್ (ಪಾಕಿಸ್ತಾನ್) – 7/36 vs ಇಂಗ್ಲೆಂಡ್, 2001
  11.  ಆಕಿಬ್ ಜಾವೇದ್ (ಪಾಕಿಸ್ತಾನ್) – 7/37 vs ಭಾರತ, 1991
  12.  ಇಮ್ರಾನ್ ತಾಹಿರ್ (ಸೌತ್ ಆಫ್ರಿಕಾ) – 7/45 vs ವೆಸ್ಟ್ ಇಂಡೀಸ್, 2016
  13.  ವಿನ್‌ಸ್ಟನ್ ಡೇವಿಸ್ (ವೆಸ್ಟ್ ಇಂಡೀಸ್) – 7/51 vs ಆಸ್ಟ್ರೇಲಿಯಾ, 1983
  14.  ಸ್ಟುವರ್ಟ್ ಬಿನ್ನಿ (ಭಾರತ) – 6/4 vs ಬಾಂಗ್ಲಾದೇಶ್, 2014
  15.  ಸಂದೀಪ್ ಲಾಮಿಚಾನೆ (ನೇಪಾಳ) – 6/11 vs ಪಪುವಾ ನ್ಯೂ ಗಿನಿಯಾ, 2021
  16.  ಅನಿಲ್ ಕುಂಬ್ಳೆ (ಭಾರತ) – 6/12 vs ವೆಸ್ಟ್ ಇಂಡೀಸ್, 1993
  17.  ಅಜಂತಾ ಮೆಂಡಿಸ್ (ಶ್ರೀಲಂಕಾ) – 6/13 vs ಭಾರತ, 2008
  18.  ಗ್ಯಾರಿ ಗಿಲ್ಮೊರ್ (ಆಸ್ಟ್ರೇಲಿಯಾ) – 6/14 vs ಇಂಗ್ಲೆಂಡ್, 1975
  19.  ಇಮ್ರಾನ್ ಖಾನ್ (ಪಾಕಿಸ್ತಾನ್) – 6/14 vs ಭಾರತ, 1985
  20.  ಫರ್ವೀಜ್ ಮಹರೂಫ್ (ಶ್ರೀಲಂಕಾ) – 6/14 vs ವೆಸ್ಟ್ ಇಂಡೀಸ್, 2006
  21.  ಕಾಲಿನ್ ಕ್ರಾಫ್ಟ್ (ವೆಸ್ಟ್ ಇಂಡೀಸ್) – 6/15 vs ಇಂಗ್ಲೆಂಡ್, 1981
  22.  ಶೋಯೆಬ್ ಅಖ್ತರ್ (ಪಾಕಿಸ್ತಾನ್) – 6/16 vs ನ್ಯೂಝಿಲೆಂಡ್ 2002
  23.  ಕಗಿಸೊ ರಬಾಡ (ಸೌತ್ ಆಫ್ರಿಕಾ) – 6/16 vs ಬಾಂಗ್ಲಾದೇಶ್, 2015
  24.  ಸಂದೀಪ್ ಲಾಮಿಚಾನೆ (ನೇಪಾಳ) – 6/16 vs ಯುಎಸ್​ಎ, 020
  25. . ಅಝರ್ ಮಹಮೂದ್ (ಪಾಕಿಸ್ತಾನ್)- 6/18 vs ವೆಸ್ಟ್ ಇಂಡೀಸ್, 1999
  26.  ಹೆನ್ರಿ ಒಲೊಂಗಾ (ಝಿಂಬಾಬ್ವೆ)- 6/19 vs ಇಂಗ್ಲೆಂಡ್, 2000
  27.  ಶೇನ್ ಬಾಂಡ್ (ನ್ಯೂಝಿಲೆಂಡ್) – 6/19 vs ಭಾರತ, 2005
  28.  ಜಸ್ಪ್ರೀತ್ ಬುಮ್ರಾ (ಭಾರತ) – 6/19 vs ಇಂಗ್ಲೆಂಡ್, 2022
  29.  ಬ್ರಯಾನ್ ಸ್ಟ್ರಾಂಗ್ (ಝಿಂಬಾಬ್ವೆ) – 6/20 vs ಬಾಂಗ್ಲಾದೇಶ್, 1997
  30.  ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ) – 6/20 vs ಭಾರತ, 2009
  31.  ಮೊಹಮ್ಮದ್ ಸಿರಾಜ್ (ಭಾರತ) – 6/21 vs ಶ್ರೀಲಂಕಾ, 2023

ಇದನ್ನೂ ಓದಿ: Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್

ನೇಪಾಳ ತಂಡದ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಏಕದಿನ ಕ್ರಿಕೆಟ್​ನಲ್ಲಿ 2 ಬಾರಿ ಅತೀ ಕಡಿಮೆ ರನ್ ನೀಡಿ 6 ವಿಕೆಟ್​ ಕಬಳಿಸಿದ್ದಾರೆ. ಹೀಗಾಗಿ ಮೊದಲ ಪ್ಯಾರಾದಲ್ಲಿ ಸಿರಾಜ್​ಗಿಂತ ಮುನ್ನ 29 ಬೌಲರ್​ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ ಎಂದು ತಿಳಿಸಲಾಗಿದೆ.