IND vs ENG: 23 ವಿಕೆಟ್ ಉರುಳಿಸಲು ಮೊಹಮ್ಮದ್ ಸಿರಾಜ್ ಓಡಿದ ದೂರ ಎಷ್ಟು ಕಿ.ಮೀ ಗೊತ್ತಾ?

Mohammed Siraj's England Tour: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅವರ ಅದ್ಭುತ ಪ್ರದರ್ಶನ ತಂಡವನ್ನು ಸರಣಿ ಸೋಲಿನಿಂದ ಪಾರು ಮಾಡಿತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಡೀ ಸರಣಿಯಲ್ಲಿ 23 ವಿಕೆಟ್‌ಗಳನ್ನು ಪಡೆದ ಸಿರಾಜ್, 185.3 ಓವರ್‌ಗಳನ್ನು ಬೌಲ್ ಮಾಡಲು 31 ಕಿಮೀಗಿಂತ ಹೆಚ್ಚು ದೂರ ಓಡಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ.

IND vs ENG: 23 ವಿಕೆಟ್ ಉರುಳಿಸಲು ಮೊಹಮ್ಮದ್ ಸಿರಾಜ್ ಓಡಿದ ದೂರ ಎಷ್ಟು ಕಿ.ಮೀ ಗೊತ್ತಾ?
Mohammed Siraj

Updated on: Aug 08, 2025 | 4:44 PM

ಟೀಂ ಇಂಡಿಯಾ (Team India) ಇಂಗ್ಲೆಂಡ್‌ ಪ್ರವಾಸವನ್ನು ಸರಣಿ ಗೆಲುವಿನೊಂದಿಗೆ ಮುಗಿಸಲು ಸಾಧ್ಯವಾಗದಿದ್ದರೂ ಡ್ರಾದೊಂದಿಗೆ ಕೊನೆಗೊಳಿಸುವಲ್ಲಿ ಯಶಸ್ವಿಯಾಯಿತು. ಯುವ ಹಾಗೂ ಅನಾನುಭವಿ ಆಟಗಾರರಿಂದ ಕೂಡಿದ್ದ ಶುಭ್​ಮನ್ ಗಿಲ್ ಪಡೆ ಅನುಭವಿ ಆಂಗ್ಲರನ್ನು ಅವರ ನೆಲದಲ್ಲೇ ಸರಣಿ ಗೆಲ್ಲದಂತೆ ತಡೆಯಿತು. ಇಡೀ ಸರಣಿಯಲ್ಲಿ ಭಾರತ ತಂಡ ಸಾಂಘಿಕ ಪ್ರದರ್ಶನ ನೀಡಿತು. ಅದರಲ್ಲೂ ಅನುಭವಿ ಆಟಗಾರರ ಪ್ರದರ್ಶನ ಎಲ್ಲರನ್ನೂ ಮೆಚ್ಚಿಸಿತು. ಈ ಅನುಭವಿ ಆಟಗಾರರಲ್ಲಿ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಕೂಡ ಸೇರಿದ್ದರು. ಬುಮ್ರಾ ಅನುಪಸ್ಥಿತಿಯಲ್ಲಿ ಓವಲ್ ಟೆಸ್ಟ್ ಪಂದ್ಯದಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಸಿರಾಜ್, ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅದರಲ್ಲೂ ಇಡೀ ಸರಣಿಯನ್ನು ಆಡಿದ ಟೀಂ ಇಂಡಿಯಾದ ಕೆಲವೇ ಕೆಲವು ಆಟಗಾರರಲ್ಲಿ ಸಿರಾಜ್ ಕೂಡ ಒಬ್ಬರು. ವೇಗಿಗಳಿಗೆ ಹೆಚ್ಚು ನೆರವಾಗುವ ಇಂಗ್ಲೆಂಡ್‌ ಪಿಚ್​ಗಳಲ್ಲಿ ಸಿರಾಜ್ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಇದರ ಜೊತೆಗೆ ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲ ದಾಳಿಗಿಳಿದಿದ್ದ ಸಿರಾಜ್ ಆಡಿದ ಐದು ಪಂದ್ಯಗಳಲ್ಲಿ ಒಟ್ಟು 185.3 ಓವರ್‌ಗಳನ್ನು ಬೌಲ್ ಮಾಡಿದರು. ಅಂದರೆ ಸಿರಾಜ್ ಈ 1113 ಎಸೆತಗಳನ್ನು ಬೌಲ್ ಮಾಡಲು ಎಷ್ಟು ಕಿ.ಮೀ ರನ್ ಅಪ್ ಮಾಡಿದರು ಎಂಬುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

31 ಕಿ.ಮೀ.ಗಿಂತ ಹೆಚ್ಚು ಓಡಿದ ಸಿರಾಜ್

ಮೇಲೆ ಹೇಳಿದಂತೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 185.3 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಅಂದರೆ ಸಿರಾಜ್ 25 ದಿನಗಳಲ್ಲಿ 1113 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಇಷ್ಟು ಎಸೆತಗಳನ್ನು ಎಸೆಯಲು ಸಿರಾಜ್ 31 ಕಿ.ಮೀ.ಗಿಂತ ಹೆಚ್ಚು ದೂರ ಓಡಿರುವುದು ಇಲ್ಲಿ ಗಮನಾರ್ಹ. ಈಗ ನಾವು ಸಿರಾಜ್ ಅವರ ರನ್-ಅಪ್ 14 ಮೀಟರ್ ಎಂದು ತೆಗೆದುಕೊಂಡರೆ, ಪ್ರತಿ ಚೆಂಡನ್ನು ಎಸೆಯಲು ಸಿರಾಜ್ 28 ಮೀಟರ್ ದೂರವನ್ನು ಕ್ರಮಿಸಿದಂತ್ತಾಗುತ್ತದೆ. ಈಗ ಸಿರಾಜ್ ಪ್ರತಿ ಚೆಂಡಿಗೆ 28 ಮೀಟರ್ ಓಡಿದರೆ, ಅದರ ಪ್ರಕಾರ, ಅವರು 1113 ಎಸೆತಗಳನ್ನು ಎಸೆಯಲು 31 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿದ್ದಂತಾಗಿದೆ.

ICC Test Rankings: ಇಂಗ್ಲೆಂಡ್​ನಲ್ಲಿ 23 ವಿಕೆಟ್ ಉರುಳಿಸಿ 12 ಸ್ಥಾನ ಮೇಲೇರಿದ ಮೊಹಮ್ಮದ್ ಸಿರಾಜ್

23 ವಿಕೆಟ್‌ ಉರುಳಿಸಿದ ಸಿರಾಜ್

ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಎಷ್ಟು ದೂರ ಕ್ರಮಿಸಿದ್ದಾರೆ ಎಂಬುದನ್ನು ನಾವು ಈಗಷ್ಟೇ ಅಳೆದಿದ್ದೇವೆ. ಇದನ್ನು ಹೊರತುಪಡಿಸಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸಿರಾಜ್ ಎಷ್ಟು ಕಿಲೋಮೀಟರ್ ಓಡಿದ್ದಾರೆ ಎಂಬುದನ್ನು ನೀವೇ ಊಹಿಸಿ. ಇಂಗ್ಲೆಂಡ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಸಿರಾಜ್ 23 ವಿಕೆಟ್‌ಗಳನ್ನು ಪಡೆಯಲು ಎಷ್ಟು ಪರಿಶ್ರಮ ಮತ್ತು ಬೆವರು ಹರಿಸಿದ್ದಾರೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ