ಕೊಹ್ಲಿ ನಿಂಗ್ ವಯಸ್ಸಾಯ್ತೋ: ಬಿಳಿ ಗಡ್ಡ, ದಣಿದ ಕಣ್ಣುಗಳು; ಏಕದಿನಕ್ಕೂ ವಿರಾಟ್ ವಿದಾಯ?
Virat Kohli's Viral Photo: ವಿರಾಟ್ ಕೊಹ್ಲಿ ಅವರ ಬಿಳಿ ಗಡ್ಡದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಅವರು ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಯ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ ಕೊಹ್ಲಿ ಅವರು ತಮ್ಮ ಗಡ್ಡಕ್ಕೆ ಬಣ್ಣ ಹಚ್ಚುತ್ತಿರುವುದಾಗಿ ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರನ್ನು ನೋಡಬಹುದು.

ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಕಿಂಗ್ ಕೊಹ್ಲಿ (Virat Kohli) ಏಕದಿನ ಮಾದರಿಯಲ್ಲಿ ಮಾತ್ರ ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತ ಕುಳಿತಿದ್ದಾರೆ. ಆದರೆ ಮುಂದಿನ ಅಕ್ಟೋಬರ್ವರೆಗೂ ಕೊಹ್ಲಿಯನ್ನು ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೊಹ್ಲಿಯ ಫೋಟೋವನ್ನು ನೋಡಿದವರು, ವಿರಾಟ್ ಇಷ್ಟರಲ್ಲೇ ಏಕದಿನ ಮಾದರಿಗೂ ವಿದಾಯ ಹೇಳಿದರೆ ಅಚ್ಚರಿ ಪಡಬೇಕಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೊಹ್ಲಿಗೂ ವಯಸ್ಸಾಗ್ತಿದೆ
ಅಭಿಮಾನಿಗಳ ಈ ಅಭಿಪ್ರಾಯಕ್ಕೂ ಕಾರಣವಿದೆ. ಅದೇನೆಂದರೆ ಮೈದಾನದಲ್ಲಿ ಚಿರ ಯುವಕನಂತೆ ಅಬ್ಬರಿಸುವ ಕೊಹ್ಲಿ, ತಮ್ಮ ಫಿಟ್ನೇಸ್ ಮೂಲಕವೇ ತಮ್ಮ ನಿಜವಾದ ವಯಸ್ಸನ್ನು ಮರೆಮಾಚಿದ್ದಾರೆ. ಹೀಗಾಗಿ ಕೊಹ್ಲಿಯ ಆಟವನ್ನು ನೋಡಿದವರು, ಅವರು ಇನ್ನು 10 ವರ್ಷ ಕ್ರಿಕೆಟ್ ಆಡಬಹುದು ಎಂಬ ಅಭಿಪ್ರಾಯ ಹೊರಹಾಕುತ್ತಾರೆ. ಇದಕ್ಕೆ ಕೊಹ್ಲಿ ಕೂಡ ಎಂದಿಗೂ ಮೈದಾನದಲ್ಲಿ ಸುಸ್ತಾಗಿ ಅಥವಾ ಆಟದ ನಡುವೆ ಇಂಜುರಿಗೊಂಡು ಮೈದಾನದಿಂದ ಹೊರನಡೆದಿದ್ದನ್ನು ನೋಡಿದ್ದು ತುಂಬಾ ವಿರಳ. ಹೀಗಾಗಿ ಕೊಹ್ಲಿಯಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಉಳಿದಿದೆ ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ಕೊಹ್ಲಿ ವಯಸ್ಸಾದವರಂತೆ ಕಾಣುತ್ತಿದ್ದಾರೆ.
ಬಿಳಿ ಗಡ್ಡ, ದಣಿದ ಕಣ್ಣುಗಳು
ಪ್ರಸ್ತುತ ಕೊಹ್ಲಿ ತಮ್ಮ ಮಡದಿ ಮಕ್ಕಳೊಂದಿಗೆ ಲಂಡನ್ನಲ್ಲಿ ವಾಸವಾಗಿದ್ದಾರೆ. ಈ ನಡುವೆ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಕೊಹ್ಲಿಯ ಗಡ್ಡ ಹಾಗೂ ಮೀಸೆಯಲ್ಲಿ ಬಿಳಿ ಕೂದಲುಗಳು ಹೇರಳವಾಗಿರುವುದನ್ನು ಕಾಣಬಹುದು. ಹಾಗೆಯೇ ಕೊಹ್ಲಿಯ ಕಣ್ಣುಗಳು ಕೂಡ ಕಾಂತಿ ರಹಿತವಾಗಿರುವುದನ್ನು ನಾವು ಗಮನಿಸಬಹುದು. ಕೊಹ್ಲಿಯ ಈ ಫೋಟೋವನ್ನು ನೋಡಿದವರು ಕೊಹ್ಲಿ ಇಷ್ಟರಲ್ಲೇ ಏಕದಿನ ಮಾದರಿಗೂ ವಿದಾಯ ಹೇಳಬಹುದು ಎನ್ನುತ್ತಿದ್ದಾರೆ. ಇನ್ನು ಕೆಲವರು ಕೊಹ್ಲಿ ನಿಂಗ್ ವಯಸ್ಸಾಯ್ತೋ ಎನ್ನುತ್ತಿದ್ದಾರೆ.
White beard, dimming fire, and tired eyes. Yes, that’s Virat Kohli in his latest pic from London. The King has begun to lay down his sword… We’ve probably reached the ending we never wanted to see! 💔 pic.twitter.com/b7eplE98Qd
— A` (@Was_abhi18) August 8, 2025
Virat Kohli spotted in London — white beard, tired eyes, and a fire that’s slowly dimming. 💔 pic.twitter.com/xmaVfR3KRJ
— Dinda Academy (@academy_dinda) August 8, 2025
Virat Kohli was right about retirement… 🥺 Nothing hurts more than watching your heroes grow old. 💔#ViratKohli #KingKohli pic.twitter.com/JMxkix7rGr
— Anis Sajan (@mrcricketuae) August 8, 2025
ವಾಸ್ತವವಾಗಿ ಕಳೆದ ಜುಲೈ 10 ರಂದು ಯುವರಾಜ್ ಸಿಂಗ್ ಲಂಡನ್ನಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು, ಅದರಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೊಹ್ಲಿ ‘ನಾನು ಎರಡು ದಿನಗಳ ಹಿಂದೆಯಷ್ಟೇ ನನ್ನ ಗಡ್ಡಕ್ಕೆ ಬಣ್ಣ ಹಚ್ಚಿದ್ದೇನೆ. ಈಗ ಪ್ರತಿ ನಾಲ್ಕು ದಿನಗಳಿಗೊಮ್ಮೆ ನನ್ನ ಗಡ್ಡಕ್ಕೆ ಬಣ್ಣ ಹಚ್ಚುವ ಸಮಯ ಬಂದಿದೆ” ಎಂದು ಹೇಳಿದ್ದರು. ಕೊಹ್ಲಿಯ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಕೊಹ್ಲಿ ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿರುವುದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
‘ಕೊಹ್ಲಿ ಬಾತ್ರೂಮ್‌ನಲ್ಲಿ ಅಳುತ್ತಿರುವುದನ್ನು ನಾನು ನೋಡಿದೆ’; ಯುಜ್ವೇಂದ್ರ ಚಾಹಲ್
ಅಕ್ಟೋಬರ್‌ನಲ್ಲಿ ಕೊಹ್ಲಿ ಕಣಕ್ಕೆ
ಇನ್ನು ಕೊಹ್ಲಿ ಯಾವಾಗ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು ಎನ್ನುವುದನ್ನು ನೋಡುವುದಾದರೆ.. ಅಕ್ಟೋಬರ್ 19 ರಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಆಡುವುದನ್ನು ಕಾಣಬಹುದು. ಕೊಹ್ಲಿ ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದರು. ಆ ಬಳಿಕ ಐಪಿಎಲ್ನಲ್ಲಿ ಆಡಿದ್ದ ಕೊಹ್ಲಿ ಇದೀಗ ಕುಟುಂಬದೊಂದಿಗೆ ಲಂಡನ್ನಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Fri, 8 August 25
