ಮೊಹಮ್ಮದ್ ಸಿರಾಜ್ (Mohammed Siraj) ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿರುವ ಯುವ ವೇಗಿ. ಟೆಸ್ಟ್ ಕ್ರಿಕೆಟ್ಗೆ ಹೇಳಿಮಾಡಿಸಿದಂತಹ ಬೌಲಿಂಗ್ ಶೈಲಿ ಹೊಂದಿರುವ ಸಿರಾಜ್ ಆಡಿದ ಕೆಲವೇ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಹುಟ್ಟಡಗಿಸಿದ ಸಿರಾಜ್ ಹೊಸ ದಾಖಲೆ ಬರೆದರು. ಅದಕೂಡ 39 ವರ್ಷಗಳ ಹಳೆಯ ದಿಗ್ಗಜ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತ ನೀಡಿದ್ದ 272 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಂಗ್ಲರಿಗೆ ಸಿರಾಜ್ ಮಾರಕವಾಗಿ ಪರಿಣಮಿಸಿದರು. ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡ ಬಳಿಕ ಡ್ರಾ ಮಾಡುವತ್ತ ಚಿತ್ತನೆಟ್ಟಿದ್ದ ಇಂಗ್ಲೆಂಡ್ಗೆ ಆರ್ಸಿಬಿ ವೇಗಿ ಶಾಕ್ ಮೇಲೆ ಶಾಕ್ ಕೊಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ 30 ಓವರ್ ಬೌಲಿಂಗ್ ಮಾಡಿ 94 ರನ್ ನೀಡಿದ 4 ವಿಕೆಟ್ ಕಿತ್ತರೆ, ಎರಡನೇ ಇನ್ನಿಂಗ್ಸ್ನಲ್ಲೂ 10.5 ಓವರ್ ಬೌಲಿಂಗ್ ಮಾಡಿ 32 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಈ ಮೂಲಕ ವಿಶ್ವ ಶ್ರೇಷ್ಠ ಲಾರ್ಡ್ಸ್ ಮೈದಾನದಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 8 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ 1982ರಲ್ಲಿ ಕಪಿಲ್ ದೇವ್ ಮಾಡಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದ ಇಬ್ಬರು ಭಾರತೀಯರು ಎಂಬ ದಾಖಲೆ ಕಪಿಲ್ ದೇವ್ ಮತ್ತು ಮೊಹಮ್ಮದ್ ಸಿರಾಜ್ ಹೆಸರಿನಲ್ಲಿದೆ.
1982ರಲ್ಲಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಕಪಿಲ್ ದೇವ್ 8 ವಿಕೆಟ್ ಕಿತ್ತಿದ್ದರು. ಇದಾದ ಬಳಿಕ ಬೇರೆ ಯಾವುದೇ ಭಾರತೀಯ ಬೌಲರ್ ಕೂಡ ಈ ಸಾಧನೆಯನ್ನು ಮಾಡಿರಲಿಲ್ಲ. ಆದರೆ ಸದ್ಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಲಾರ್ಡ್ಸ್‌ನಲ್ಲಿ 8 ವಿಕೆಟ್ ಪಡೆದಿರುವ ಮೊಹಮ್ಮದ್ ಸಿರಾಜ್ 39 ವರ್ಷಗಳ ಹಳೆಯ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ.
ಈ ಹಿಂದೆ ಗಬ್ಬಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಮೊದಲನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವುದರ ಮೂಲಕ ಆ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಇತ್ತೀಚೆಗಷ್ಟೆ ಸಿರಾಜ್ ಅವರು ವಿಕೆಟ್ ಪಡೆದಾಗ ತುಟಿಗಳ ಮೇಲೆ ಬೆರಳಿಟ್ಟಿ ಸಂಭ್ರಮಾಚರಣೆ ಮಾಡಲು ಕಾರಣವೇನು ಎಂಬುದನ್ನು ಬಹಿರಂಗ ಪಡಿಸಿದ್ದರು. “ಈ ಹೊಸ ರೀತಿಯ ಸಂಭ್ರಮಾಚರಣೆ ಹೇಟರ್ಸ್ಗಳಿಗಾಗಿ. ಯಾಕಂದ್ರೆ ಅವರು ನನ್ನ ಬಗ್ಗೆ ಹಿಂದಿನಿಂದ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಅವರು ನನಗೆ ಮಾಡಿದಂತೆ ನಾನು ಮಾಡುವುದಿಲ್ಲ, ಬದಲಾಗಿ ನನ್ನ ಆಟದ ಮೂಲಕ ಅಂತವರಿಗೆ ತಕ್ಕ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದಾರೆ.
KL Rahul: ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ: ಕೆ.ಎಲ್ ರಾಹುಲ್
India vs England: ವಿರಾಟ್ ಕೊಹ್ಲಿ ತೆಗೆದುಕೊಂಡ ಆ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಾಯಿಸಿತು
(Mohammed Siraj left Kapil behind creates a new history in Lords India vs England second Test)