India vs England 2nd Test: ದಾಖಲೆಯ ಜೊತೆಯಾಟ ಆಡಿ ಡ್ರೆಸ್ಸಿಂಗ್ ರೂಮ್ಗೆ ಬಂದ ಶಮಿ-ಬುಮ್ರಾಗೆ ಬಿಗ್ ಸರ್ಪ್ರೈಸ್
Mohammed Shami: ಟೀಮ್ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಗೆಲುವಿನ ದಡದತ್ತ ಕೊಂಡೊಯ್ದ ಶಮಿ-ಬುಮ್ರಾ ಜೋಡಿಗೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಗೌರವ ಸಲ್ಲಿಸಿದರು.
ಕ್ರಿಕೆಟ್ ಕಾಶಿ ಲಾರ್ಡ್ಸ್ (Lords) ಮೈದಾನದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ಐತಿಹಾಸಿಕ ಗೆಲುವು ಸಾಧಿಸಿತು. ಐದನೇ ದಿನದ ರೋಚಕ ಕದನದಲ್ಲಿ ಭಾರತೀಯ ಬೌಲರ್ಗಳು ಬ್ಯಾಟ್ಸ್ಮನ್ ಆಗಿ ಅಬ್ಬರಿಸಿದರು. ಮೊಹಮ್ಮದ್ ಶಮಿ (Mohammed Shami) ಮತ್ತು ಜಸ್‌ಪ್ರೀತ್ ಬುಮ್ರಾ (Jasprit Bumrah) 9ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟ ಆಡಿ ಇತಿಹಾಸದ ಪುಟ ಸೇರಿದರು. ಇಂಗ್ಲೆಂಡ್ ವೇಗಿಗಳ ಬೌನ್ಸರ್‌ಗಳಿಂದ ಸಾಕಷ್ಟು ಪೆಟ್ಟು ತಿಂದರೂ ಕದಲದ ಈ ಜೋಡಿ ಕ್ರೀಸ್ ಕಚ್ಚು ನಿಂತು ಎದುರಾಳಿಗೆ ಸವಾಲಿನ ಗುರಿ ನೀಡಿದರು.
ಇಂಗ್ಲೆಂಡ್ ಬೌಲರ್ಗಳ ಮಾರಕ ದಾಳಿಯನ್ನ ಥೇಟ್ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಂತೆ ಎದುರಿಸಿದ ಶಮಿ-ಬುಮ್ರಾ ಟೀಮ್ ಇಂಡಿಯಾ ಸ್ಕೋರ್ ಅನ್ನು 250ರ ಗಡಿ ದಾಟಿಸಿದರು. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಅರ್ಧತಕ ಸಿಡಿಸಿ ಮಿಂಚಿದರು. ಇವರಿಬ್ಬರು ಒಂಬತ್ತನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಇಂಗ್ಲೆಂಡ್ನಲ್ಲಿ ಭಾರತಕ್ಕೆ ಒಂಬತ್ತನೇ ವಿಕೆಟ್‌ಗೆ ಇದುವರೆಗಿನ ಗರಿಷ್ಠ ಜೊತೆಯಾಟವಾಗಿದೆ.
ಟೀಮ್ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಗೆಲುವಿನ ದಡದತ್ತ ಕೊಂಡೊಯ್ದ ಶಮಿ-ಬುಮ್ರಾ ಜೋಡಿಗೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಗೌರವ ಸಲ್ಲಿಸಿದರು. ಅದರಲ್ಲೂ ಶಮಿ ಹಾಗೂ ಬುಮ್ರಾ ಭಾರತದ ಡ್ರೆಸ್ಸಿಂಗ್ ರೂಮ್ಗೆ ಬಂದ ವೇಳೆ ಅಲ್ಲಿದ್ದ ಎಲ್ಲ ಆಟಗಾರರು ಎದ್ದುನಿಂತು ದೊಡ್ಡದಾಗಿ ಕ್ಲಾಪ್ ಹೊಡೆದರು. ಇದನ್ನ ಕಂಡ ಇವರಿಬ್ಬರು ಒಮ್ಮೆ ದಂಗಾದರು. ಬಿಸಿಸಿಐ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
A partnership to remember for ages for @Jaspritbumrah93 & @MdShami11 on the field and a rousing welcome back to the dressing room from #TeamIndia.
What a moment this at Lord’s ???#ENGvIND pic.twitter.com/biRa32CDTt
— BCCI (@BCCI) August 16, 2021
ಎರಡನೇ ಇನಿಂಗ್ಸ್‌ನಲ್ಲಿ 194 ರನ್‌ಗಳಿಗೆ 7ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾಗಿ ನಿಂತ ಮೊಹಮ್ಮದ್ ಶಮಿ (58*) ಮತ್ತು ಜಸ್‌ಪ್ರೀತ್ ಬುಮ್ರಾ (34*) 9ನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜೊತೆಯಾಟವನ್ನಾಡಿದ್ದರು. ಒಂದು ಹಂತದಲ್ಲಿ 200 ರನ್‌ಗಳ ಮುನ್ನಡೆಯೂ ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದ ಭಾರತ ತಂಡ ಟೇಲೆಂಡರ್‌ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 271 ರನ್‌ಗಳ ಮುನ್ನಡೆ ಪಡೆದು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
272 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಭಾರತೀಯ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕನಿಷ್ಠ ಡ್ರಾ ಮಾಡುವಲ್ಲೂ ಯಶಸ್ವಿಯಾಗದ ರೂಟ್ ಪಡೆ 120 ರನ್ಗೆ ಸರ್ವಪತನ ಕಂಡಿತು. ಭಾರತ 151 ರನ್‌ಗಳ ಅಮೋಘ ಜಯದೊಂದಿಗೆ 1-0 ಮುನ್ನಡೆ ಸಾಧಿಸಿ ಲಾರ್ಡ್ಸ್ನಲ್ಲಿ ಐತಿಹಾಸಿಕ ಜಯ ಸಾಧಿಸಿತು.
KL Rahul: ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ: ಕೆ.ಎಲ್ ರಾಹುಲ್
(India vs England 2nd Test: Mohammed Shami and Jasprit Bumrah receive grand welcome from Indian dressing room)