Mohammed Siraj: ವಿಕೆಟ್ ಕಿತ್ತಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ: ಇದರ ಹಿಂದಿದೆ ಖಡಕ್ ಕಾರಣ

India vs England: ಮೂರನೇ ದಿನದಾಟ ಮುಗಿದ ಬಳಿಕ ಹೊಸ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ ಮೊಹಮ್ಮದ್ ಸಿರಾಜ್, ನನ್ನ ಈ ಶೈಲಿಯ ಸಂಭ್ರಮಾಚರಣೆ ಹೇಟರ್ಸ್​ಗಳಿಗಾಗಿ ಎಂದಿದ್ದಾರೆ.

Mohammed Siraj: ವಿಕೆಟ್ ಕಿತ್ತಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ: ಇದರ ಹಿಂದಿದೆ ಖಡಕ್ ಕಾರಣ
Mohammed Siraj
Updated By: Vinay Bhat

Updated on: Aug 15, 2021 | 11:11 AM

ಆಂಗ್ಲರ ನಾಡಿನಲ್ಲಿ ಸಾಗುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ (Team India) ಯುವ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಭರವಸೆ ಮೂಡಿಸಿದ್ದಾರೆ. ತನ್ನ ಆಕ್ರಮಣಕಾರಿ ಬೌಲಿಂಗ್​ನಿಂದ ಎದುರಾಳಿಗೆ ಅಪಾಯಕಾರಿಯಾಗಿ ಗೋಚರಿಸಿರುವ ಸಿರಾಜ್ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಈ ಸಂದರ್ಭ ಅವರ ಸಂಭ್ರಮಾಚರಣೆ ವಿಭಿನ್ನವಾಗಿತ್ತು. ತುಟಿಗಳ ಮೇಲೆ ಬೆರಳಿಟ್ಟಿ ಸಿರಾಜ್ ವಿಕೆಟ್ ಪಡೆದ ಸಂಭ್ರಮವನ್ನು ಆನಂದಿಸುತ್ತಿದ್ದರು. ಈರೀತಿಯ ಸಂಭ್ರಮಾಚರಣೆಗೆ ಕಾರಣವೇನು ಎಂಬುದನ್ನು ಅವರೀಗ ಬಹಿರಂಗ ಪಡಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟು 7 ಪಂದ್ಯಗಳನ್ನು ಆಡಿರುವ ಸಿರಾಜ್ ಅದಾಗಲೇ 23 ವಿಕೆಟ್ ಕಿತ್ತು ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಆಂಗ್ಲರ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಸಂದರ್ಭ ಅವರು ತುಟಿಗೆ ಬೆರಳಿಟ್ಟು ವಿಶೇಷವಾಗಿ ಸಂಭ್ರಮಿಸಿದರು. ಈ ಬಗ್ಗೆ ಮಾತನಾಡಿರುವ ಅವರು, ನನ್ನ ಈ ಶೈಲಿಯ ಸಂಭ್ರಮಾಚರಣೆ ಹೇಟರ್ಸ್​ಗಳಿಗಾಗಿ ಎಂದಿದ್ದಾರೆ.

ಮೂರನೇ ದಿನದಾಟ ಮುಗಿದ ಬಳಿಕ ಹೊಸ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ ಸಿರಾಜ್, “ಈ ಹೊಸ ರೀತಿಯ ಸಂಭ್ರಮಾಚರಣೆ ಹೇಟರ್ಸ್​ಗಳಿಗಾಗಿ. ಯಾಕಂದ್ರೆ ಅವರು ನನ್ನ ಬಗ್ಗೆ ಹಿಂದಿನಿಂದ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಅವರು ನನಗೆ ಮಾಡಿದಂತೆ ನಾನು ಮಾಡುವುದಿಲ್ಲ, ಬದಲಾಗಿ ನನ್ನ ಆಟದ ಮೂಲಕ ಅಂತವರಿಗೆ ತಕ್ಕ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದಾರೆ.

ಕ್ರಿಕೆಟ್ ಕಾಶಿ ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಆಂಗ್ಲರು ಎರಡನೇ ಇನ್ನಿಂಗ್ಸ್​ನಲ್ಲಿ ಜೋ ರೂಟ್ (Joe Root) ಅವರ ಅಜೇಯ 180 ರನ್​ಗಳ ನೆರವಿನಿಂದ 391 ರನ್ ಗಳಿಸಿದ್ದು 27 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದೆ. ಇಂದು ನಾಲ್ಕನೇ ದಿನ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದು ಮಹತ್ವದ ದಿನವಾಗಿದೆ.

ಭಾರತ ಇಂದು ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಬೇಕಿದೆ. ಗೆಲುವಿಗಾಗಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಪ್ರಮುಖವಾಗಿ ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ ತಂಡಕ್ಕೆ ಆಸರೆಯಾಗಬೇಕಿದೆ. ಯಾಕಂದ್ರೆ ಭಾರತದ ಮಧ್ಯಮ ಕ್ರಮಾಂಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಹೀಗಾಗಿ ಓಪನರ್​ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ನಾಲ್ಕನೇ ದಿನ ಪಿಚ್ ಕೂಡ ಉತ್ತಮವಾಗಿ ವರ್ತಿಸುತ್ತದೆ. ಹವಾಮಾನ ಕೂಡ ಸ್ಥಿರವಾಗಿದ್ದು ವರುಣನ ಕಾಟ ಇಲ್ಲವೆಂದು ಹೇಳಲಾಗಿದೆ. ಹೀಗಾಗಿ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಬೇಗನೇ ಆಲೌಟ್ ಆಗುವ ಸಾಧ್ಯತೆ ಕಡಿಮೆ. ಆದ್ದರಿಂದ ಉಳಿದಿರುವ ಎರಡು ದಿನ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದ್ದು, ಮಾಸ್ಟರ್ ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ.

India vs England: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ತಿರುಗಿನಿಲ್ಲುತ್ತಾ ಕೊಹ್ಲಿ ಪಡೆ?

IPL 2021: ಐಪಿಎಲ್ ಆರಂಭಕ್ಕೆ ಒಂದು ತಿಂಗಳಿರುವಾಗ ಅಭಿಮಾನಿಗಳಿಗೆ ಸಿಕ್ಕಿತು ಸಖತ್ ಸುದ್ದಿ

(Mohammed Siraj opens up about his special finger on lips celebration India vs England second test)