ಕ್ರಿಕೆಟ್ ಮೈದಾನಕ್ಕೆ ನಾಯಿ, ಪಕ್ಷಿಗಳು ಬರುವುದು ಹೊಸದೇನಲ್ಲ. ಆದರೆ ಲೈವ್ ಪಂದ್ಯದ ವೇಳೆ ಯಾವುದೇ ವಿಷ ಜಂತುಗಳು ಬಂದರೆ, ಮೈದಾನದಲ್ಲಿ ಇರುವ ಆಟಗಾರರ ಮತ್ತು ಅಂಪೈರ್ಗಳ ಸ್ಥಿತಿ ಏನಾಗಬೇಡ ಹೇಳಿ. ಇದೀಗ ಅಂತಹದ್ದೆ ಒಂದು ಘಟನೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (Sri Lanka vs Afghanistan) ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ನಡೆದಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಈ ವೇಳೆ ಏಕಾಏಕಿ ಮೈದಾನಕ್ಕೆ ನುಗ್ಗಿದ ಮಾನಿಟರ್ ಹಲ್ಲಿ (Monitor Lizard) ಕೆಲಕಾಲ ಆಟಗಾರರು ಭಯಭೀತರಾಗುವಂತೆ ಮಾಡಿದೆ. ಆಟಗಾರರು ಮಾತ್ರವಲ್ಲದೆ ಅಂಪೈರ್‌ಗಳು ಕೂಡ ಈ ಹಲ್ಲಿಯನ್ನು ನೋಡಿ ಬೆವರಿದಲ್ಲದೆ ಕೆಲಕಾಲ ಆಟವನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಆಚಾನಕ್ಕಾಗಿ ಮೈದಾನಕ್ಕೆ ನುಗ್ಗಿದ ಈ ಪ್ರಾಣಿ ಯಾವುದೇ ಆಟಗಾರ ಅಥವಾ ಪ್ರೇಕ್ಷಕರಿಗೆ ಹಾನಿ ಮಾಡದಿರುವುದು ಸಮಾಧಾನಕರ ಸಂಗತಿಯಾಗಿದೆ.
ವಾಸ್ತವವಾಗಿ ಮಾನಿಟರ್ ಹಲ್ಲಿ ಹೆಚ್ಚಾಗಿ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಕಂಡುಬರುತ್ತದೆ. ಇದನ್ನು ವಿಷಕಾರಿ ಹಲ್ಲಿ ಎಂದೂ ಕರೆಯುತ್ತಾರೆ. ವಾಸ್ತವವಾಗಿ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಈ ವಿಷಕಾರಿ ಹಲ್ಲಿ ಮೈದಾನಕ್ಕೆ ನುಗ್ಗಿದೆ. ಇದನ್ನು ನೋಡಿ ಬೌಂಡರಿಯಲ್ಲಿ ನಿಂತಿದ್ದ ಹಲವು ಆಟಗಾರರು ಮತ್ತು ಅಂಪೈರ್‌ಗಳು ಭಯಗೊಂಡರು. ಆದಾಗ್ಯೂ, ಮಾನಿಟರ್ ಹಲ್ಲಿ ಮೈದಾನದಲ್ಲಿದ್ದ ಯಾವುದೇ ಆಟಗಾರ ಅಥವಾ ಪ್ರೇಕ್ಷಕರಿಗೆ ಯಾವುದೇ ಹಾನಿ ಮಾಡಲಿಲ್ಲ. ಆದರೆ ಹಲ್ಲಿ ಮೈದಾನಕ್ಕಿಳಿದಿದ್ದರಿಂದಾಗಿ ಸ್ವಲ್ಪ ಹೊತ್ತು ಆಟ ನಿಲ್ಲಿಸಬೇಕಾಯಿತು. ಆದರೆ ಸ್ವಲ್ಪ ಸಮಯದ ನಂತರ ಅದು ಮೈದಾನದಿಂದ ಹೊರಬಂದಿತು. ಆ ಬಳಿಕ ಮತ್ತೊಮ್ಮೆ ಆಟ ಪ್ರಾರಂಭವಾಯಿತು.
We had an uninvited guest on the field today 🦎😄#SonySportsNetwork #SLvAFG pic.twitter.com/1LvDkLmXij
— Sony Sports Network (@SonySportsNetwk) February 3, 2024
Match stopped in Sri Lanka due to a monitor lizard on the field. pic.twitter.com/RYI1UeMpNU
— Mufaddal Vohra (@mufaddal_vohra) February 3, 2024
ಅಫ್ಘಾನಿಸ್ತಾನ ತಂಡವು ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದೆ. ಇಲ್ಲಿ ಉಭಯ ತಂಡಗಳ ನಡುವೆ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳು ನಡೆಯಲ್ಲಿವೆ. ಇದರ ಪ್ರಯುಕ್ತ ನಿನ್ನೆಯಿಂದ ಉಭಯ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 198 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಇದುವರೆಗೆ 400ಕ್ಕೂ ಹೆಚ್ಚು ರನ್ ಗಳಿಸಿದೆ. ಅಲ್ಲದೆ, ಅಫ್ಘಾನಿಸ್ತಾನ ವಿರುದ್ಧ 200ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ