MS Dhoni: ಎಂ ಎಸ್ ಧೋನಿ ಹಾಗೂ ರವಿ ಶಾಸ್ತ್ರಿ ನಡುವೆ ಬಿರುಕು?: ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ
MS Dhoni-Ravi Shastri Animated Conversation: ಈ ಫೋಟೋ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ನಡೆಯುತ್ತಿರುವ ಸಂದರ್ಭದ್ದು ಎನ್ನಲಾಗುತ್ತಿದೆ. ಈ ವೈರಲ್ ಆಗುತ್ತಿರುವ ಫೋಟೋದಲ್ಲಿ ಧೋನಿ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡು ಕೋಚ್ ರವಿ ಶಾಸತ್ರಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್ನಲ್ಲಿ (T20 World Cup) ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಸಂಕಷ್ಟಕ್ಕೆ ಸಿಲುಕಿದೆ. ಸೆಮಿ ಫೈನಲ್ಗೆ ತಲುಪುವುದು ಅನುಮಾನವಾಗಿದ್ದು, ಹೀಗಾದಲ್ಲಿ ಇದು ವಿರಾಟ್ ಕೊಹ್ಲಿ (Virat Kohli) ಪಡೆಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ಇದರ ನಡುವೆ ಟೀಮ್ ಇಂಡಿಯಾದಲ್ಲೇ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ವೈರಲ್ ಆಗುತ್ತಿರುವ ಆ ಒಂದು ಫೋಟೋ (Viral Photo). ಹೌದು, ಟಿ20 ವಿಶ್ವಕಪ್ನಲ್ಲಿ ಭಾರತದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ. ಎಸ್ ಧೋನಿ (Mentor MS Dhoni) ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು ಎನ್ನಲಾಗುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ವೈರಲ್ ಆಗುತ್ತಿದೆ.
ಮಿಸ್ಟರ್ ಕೂಲ್ ಎಂದೇ ಖ್ಯಾತರಾಗಿರುವ ಧೋನಿ ತಾಳ್ಮೆ ಕಳೆದುಕೊಂಡಿದ್ದು ಅಪರೂಪದಲ್ಲೇ ಅಪರೂಪ. ಅದರಲ್ಲೂ ಹಿರಿಯ ಜೊತೆ ಧೋನಿ ನಗುತ್ತಲೇ ಸಂಭಾಷಣೆ ನಡೆಸುತ್ತಾರೆ. ಆದರೆ, ಈ ವೈರಲ್ ಆಗುತ್ತಿರುವ ಫೋಟೋದಲ್ಲಿ ಧೋನಿ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡು ಕೋಚ್ ರವಿ ಶಾಸತ್ರಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇತ್ತ ರವಿಶಾಸ್ತ್ರಿ ಕೂಡ ಕೋಪದಿಂದ ಇರುವಂತೆ ಕಾಣಿಸುತ್ತಿದೆ.
ಈ ಫೋಟೋ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ನಡೆಯುತ್ತಿರುವ ಸಂದರ್ಭದ್ದು ಎನ್ನಲಾಗುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಕಷ್ಟು ಬದಲಾವಣೆ ಮಾಡಿದ್ದಲ್ಲದೆ ಪ್ರಮುಖ ಪ್ರಯೋಗ ನಡೆಸಿ ಕೈಸುಟ್ಟುಕೊಂಡಿತ್ತು. ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ ಮತ್ತು ಸೂರ್ಯಕುಮಾರ್ ಯಾದವ್ ಬದಲು ಇಶಾನ್ ಕಿಶನ್ಗೆ ಅವಕಾಶ ನೀಡಲಾಗಿತ್ತು. ಆದರೆ, ಇವರಿಬ್ಬರು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು.
ಅಲ್ಲದೆ ಟೀಮ್ ಇಂಡಿಯಾದ ಖಾಯಂ ಓಪನರ್ ರೋಹಿತ್ ಶರ್ಮಾ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸದೆ ಕೆ. ಎಲ್ ರಾಹುಲ್ ಜೊತೆ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದರು. ರೋಹಿತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಈ ಪ್ಲಾನ್ ಕೂಡ ಕೈಕೊಟ್ಟಿತ್ತು. ಇದರಿಂದ ಟೀಮ್ ಇಂಡಿಯಾ ಸಾಕಷ್ಟು ಟೀಕೆಗಳಗೆ ಒಳಗಾಗಬೇಕಾಯಿತು.
ಸದ್ಯ ಭಾರತ ತನ್ನ ಮುಂದಿನ ಪಂದ್ಯವನ್ನು ಬುಧವಾರ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಇದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಎಂಬಂತಾಗಿದೆ. ಕೊಹ್ಲಿ ಪಡೆ ಟಿ20 ವಿಶ್ವಕಪ್ನಲ್ಲಿ ಜೀವಂತವಾಗಿರಲು ಉಳಿದಿರುವ ಮೂರು ಪಂದ್ಯವನ್ನು ಕೇವಲ ಗೆದ್ದರಷ್ಟೆ ಸಾಲದು. ಮುಂದಿನ 3 ಪಂದ್ಯಗಳನ್ನ ಭಾರೀ ಅಂತರದಿಂದ ಗೆಲ್ಲಬೇಕು ಅಲ್ಲದೆ. ಅಫ್ಘಾನಿಸ್ತಾನ ತನ್ನ ಮುಂದಿನ ಎರಡೂ ಪಂದ್ಯಗಳನ್ನ ಸೋಲಬೇಕು. ಇತ್ತ ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಪಂದ್ಯಗಳ ಪೈಕಿ ಅಫ್ಘಾನಿಸ್ತಾನ ವಿರುದ್ಧ ಮಾತ್ರ ಗೆಲ್ಲಬೇಕು. ಹೀಗಾದಲ್ಲಿ ಭಾರತಕ್ಕೆ ಸೆಮೀಸ್ ಬಾಗಲು ತೆರೆಯಲಿದೆ.
Kevin Pietersen: ಭಾರತವನ್ನು ಭಾರತೀಯರೇ ಟೀಕಿಸುತ್ತಿದ್ದರೆ ಅತ್ತ ಕೊಹ್ಲಿ ಪಡೆಯ ಬೆನ್ನಿಗೆ ನಿಂತ ವಿದೇಶಿ ಆಟಗಾರ
(MS Dhoni and Ravi Shastri in animated conversation Photo goes Viral on Social Media)