Kevin Pietersen: ಭಾರತವನ್ನು ಭಾರತೀಯರೇ ಟೀಕಿಸುತ್ತಿದ್ದರೆ ಅತ್ತ ಕೊಹ್ಲಿ ಪಡೆಯ ಬೆನ್ನಿಗೆ ನಿಂತ ವಿದೇಶಿ ಆಟಗಾರ
Team India T20 World Cup: ಟೀಮ್ ಇಂಡಿಯಾದ ಮಾಜಿ ಆಟಗಾರರೇ ಭಾರತವನ್ನು ಟೀಕಿಸುತ್ತಿದ್ದರೆ ಇತ್ತ ಕೆವಿನ್ ಪೀಟರ್ಸನ್, ವಿರಾಟ್ ಕೊಹ್ಲಿ ಪಡೆ ರೋಬೋಟ್ಗಳಲ್ಲಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡು ಭಾರತದ ಬೆಂಬಲಕ್ಕೆ ನಿಂತಿದ್ದಾರೆ.
ಟಿ20 ವಿಶ್ವಕಪ್ನಲ್ಲಿ (T20 World Cup) ಟೀಮ್ ಇಂಡಿಯಾ (Team India) ಆಡಿದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲುಕಂಡಿದೆ. ವಿರಾಟ್ ಕೊಹ್ಲಿ (Virat Kohli) ಪಡೆಯ ಸೋಲಿಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಐಪಿಎಲ್ (IPL), ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲಿ ಆಡಿದ ಆಟಗಾರರು ಮಹತ್ವದ ಪಂದ್ಯವಿದ್ದಾಗ ಕಳಪೆ ಪ್ರದರ್ಶನ ನೀಡಿರುವುದರ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ. ಎಸ್ ಧೋನಿ (MS Dhoni) ಅವರನ್ನೂ ಟೀಕಿಸಲಾಗುತ್ತಿದೆ. ಹೀಗಿರುವಾಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ (Kevin Pietersen) ಭಾರತ ತಂಡ ಬೆನ್ನಿಗೆ ನಿಂತಿದ್ದಾರೆ. ಟೀಮ್ ಇಂಡಿಯಾ ಆಟಗಾರರು ರೋಬೋಟ್ಗಳಲ್ಲಿ ಎಂದು ಪೀಟರ್ಸನ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಭಾರತದ ಆಮೆಗತಿಯ ಆಟವೇ ಕಾರಣ ಎಂಬುದಾಗಿ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದರು. ನ್ಯೂಜಿಲೆಂಡ್ ವಿರುದ್ಧ ಭಾರತ 54 ಡಾಟ್ ಬಾಲ್ ಆಡಿತು. ಇದು 9 ಓವರ್‌ಗಳಿಗೆ ಸಮ. ಬಹುಶಃ ಇದೊಂದು ದಾಖಲೆಯೂ ಆಗಿರಬಹುದು. ಈ ಎಲ್ಲ ಎಸೆತಗಳಲ್ಲಿ ಒಂದೊಂದು ರನ್ ಗಳಿಸಿದರೂ ಸವಾಲಿನ ಮೊತ್ತ ಪೇರಿಸಲು ಸಾಧ್ಯವಿತ್ತು ಎಂದು ಹರ್ಭಜನ್ ಹೇಳಿದ್ದರು.
ಇನ್ನು ವಿರೇಂದ್ರ ಸೆಹ್ವಾಗ್, ಸೋಲುವುದು ಆಟದ ಒಂದು ಭಾಗ. ಆದರೆ ಭಾರತ ಹೋರಾಡದೇ ಸೋತಿರುವುದು ನಿರಾಶೆಯನ್ನುಂಟು ಮಾಡಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ನಾನು ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ. ಇಂತಹ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ಹೀಗೆ ಟೀಮ್ ಇಂಡಿಯಾದ ಮಾಜಿ ಆಟಗಾರರೇ ಭಾರತವನ್ನು ಟೀಕಿಸುತ್ತಿದ್ದರೆ ಇತ್ತ ಪೀಟರ್ಸನ್, ಆಟ ಎಂದರೆ ಅಲ್ಲ ಒಂದು ತಂಡ ಗೆಲ್ಲುತ್ತದೆ ಒಂದು ತಂಡ ಸೋಲುತ್ತದೆ. ಯಾವ ತಂಡ ಕೂಡ ಸೋಲಲೆಂದು ಅಂಗಳಕ್ಕೆ ಇಳಿಯುವುದಿಲ್ಲ. ನಿಮ್ಮ ದೇಶವನ್ನು ಪ್ರತಿನಿಧಿಸುವುದು ಆಟಗಾರರಿಗೆ ಅತಿ ದೊಡ್ಡ ಹೆಮ್ಮೆಯ ಸಂಗತಿ. ಆದರೆ ಒಂದು ಅರ್ಥ ಮಾಡಿಕೊಳ್ಳಿ ಆಟಗಾರರು ರೋಬೋಟ್‌ಗಳಲ್ಲ. ಅವರು ಎಲ್ಲಾ ಸಂದರ್ಭಗಳಲ್ಲಿಯೂ ಬೆಂಬಲವನ್ನು ನಿರೀಕ್ಷಿಸುತ್ತಾರೆ ಎಂದು ಕೆವಿನ್ ಪೀಟರ್ಸನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿಶೇಷ ಎಂದರೆ ಈ ಟ್ವೀಟ್‌ಅನ್ನು ಪೀಟರ್ಸನ್ ಹಿಂದಿಯಲ್ಲಿ ಮಾಡಿ ಗಮನಸೆಳೆದಿದ್ದಾರೆ. ಭಾರತೀಯ ಆಟಗಾರರಿಗೆ ಅಭಿಮಾನಿಗಳು ಹಾಗೂ ವಿಶ್ಲೇಷಕರು ಸಾಕಷ್ಟು ಕಟು ಟೀಕೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ತಮ್ಮ ಭಾವನೆಯನ್ನು ಈ ಮೂಲಕ ಹೊರಹಾಕಿದ್ದಾರೆ.
ಇನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಕೂಡ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗಲೂ ಭಾರತ ಅತ್ಯುತ್ತಮ ತಂಡ ಎಂದು ನಾನು ನಂಬುತ್ತೇನೆ. ಇದು ಒಳ್ಳೆಯ ಅಥವಾ ಕೆಟ್ಟ ಸಮಯವನ್ನು ಹಾದು ಹೋಗುವ ವಿಷಯವಾಗಿದೆ. ಆದರೆ ಆಟಗಾರರು ಹಾಗೂ ಅವರ ಕುಟುಂಬವನ್ನು ನಿಂದಿಸುವುದು ನಾಚಿಕೆಗೇಡಿನ ವಿಷಯವಾಗಿದ್ದು, ಅಂತಿಮವಾಗಿ ಇದು ಕ್ರಿಕೆಟ್ ಆಟ ಎಂಬುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.
Jos Buttler: ಬಟ್ಲರ್ ದಾಖಲೆಯ ಶತಕ, ಸೆಮಿ ಫೈನಲ್ಗೆ ಆಂಗ್ಲರು: ಇಂಗ್ಲೆಂಡ್-ಶ್ರೀಲಂಕಾ ಪಂದ್ಯದಲ್ಲಿ ಏನಾಯ್ತು?
(Kevin Pietersen on Monday backed the under-fire Virat Kohli Team India saying the players are not robots)