MS Dhoni: ಧೋನಿ ತೋಡಿದ ಹಳ್ಳಕ್ಕೆ ಬಿದ್ದ ಕೊಹ್ಲಿ: ಇಲ್ಲಿದೆ ನೋಡಿ ಸಿಎಸ್ಕೆ ನಾಯಕನ ಮಾಸ್ಟರ್ ಮೈಂಡ್ ಸ್ಟೋರಿ
MS Dhoni masterstroke against Virat Kohli: ಆರ್ಸಿಬಿ 13.2 ಓವರ್ಗೆ 111 ರನ್ ಗಳಿಸಿರುವಾಗ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಎಂ. ಎಸ್ ಧೋನಿ. ಈ ಬಗ್ಗೆ ಅವರು ಹೇಳಿದ ಮಾತು ಇಲ್ಲಿದೆ ನೋಡಿ.
ಮಹೇಂದ್ರ ಸಿಂಗ್ ಧೋನಿ (MS Dhoni) ಎದುರಾಳಿ ಆಟಗಾರನನ್ನು ಔಟ್ ಮಾಡಲು ರಣತಂತ್ರ ರೂಪಿಸಿದರೆ ಅದರಲ್ಲಿ ಫೇಲ್ ಆಗಿದ್ದು ತೀರಾ ಕಡಿಮೆ. ಧೋನಿ ಮಾಡಿದ ಮಾಸ್ಟರ್ ಮೈಂಡ್ಗೆ ಬಹುತೇಕ ಆಟಗಾರರು ಬಲಿಯಾಗಿದ್ದಾರೆ. ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Royal Challengers Bangalore vs Chennai Super Kings) ನಡುವಣ ಪಂದ್ಯದಲ್ಲೂ ಆಗಿದ್ದು ಇದೆ. ಸ್ಫೋಟಕ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದ ಆರ್ಸಿಬಿ (RCB) ಆರಂಭಿಕರು ವಿರಾಟ್ ಕೊಹ್ಲಿ (Virat Kohli) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಜೋಡಿಗೆ ಶಾಕ್ ನೀಡಿದ್ದು ಡ್ವೇನ್ ಬ್ರಾವೋ (Dwayne Bravo). ಬ್ರಾವೋ ಹಿಂದಿರುವ ಯೋಜನೆ ಧೋನಿಯದ್ದು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಸ್ವತಃ ಧೋನಿಯವರೇ ಮಾತನಾಡಿದ್ದಾರೆ. ಸಿಎಸ್ಕೆ (CSK) ತಂಡ ಮೊದಲ ಇನ್ನಿಂಗ್ಸ್ನಲ್ಲಿ ಹೇಗೆ ಕಮ್ಬ್ಯಾಕ್ ಮಾಡಿತು?, ಇದಕ್ಕೆ ನಾವು ಮಾಡಿದ ಪ್ಲ್ಯಾನ್ ಏನು? ಎಂಬುದನ್ನು ಕೂಲ್ ಕ್ಯಾಪ್ಟನ್ ವಿವರಿಸಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಚೆನ್ನೈ ವಿರುದ್ಧ ಹಿಂದೆಂದೂ ಕಾಣದ ಸ್ಫೋಟಕ ಆರಂಭ ಪಡೆದುಕೊಂಡಿತು. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಚೆನ್ನೈ ಬೌಲರ್ಗಳ ಬೆವರಿಳಿಸಿದರು. 10 ಓವರ್ ಆಗುವ ಹೊತ್ತಗೆಯೇ ಆರ್ಸಿಬಿ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 90 ತಲುಪಿತ್ತು.
ಆರ್ಸಿಬಿ 13.2 ಓವರ್ಗೆ 111 ರನ್ ಗಳಿಸಿರುವಾಗ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 53 ರನ್ಗೆ ಔಟ್ ಆದರು. ಈ ಮೂಲಕ ಚೆನ್ನೈಗೆ ಡ್ವೇನ್ ಬ್ರಾವೋ ಮೊದಲ ಬ್ರೇಕ್ ನೀಡಿದರು. ಆ ಬಳಿಕ ಪಂದ್ಯ ಸಂಪೂರ್ಣ ಸಿಎಸ್ಕೆ ಕಡೆ ವಾಲಿತು. ಇದಕ್ಕೆಲ್ಲ ಕಾರಣವಾಗಿದ್ದು ಎಂ. ಎಸ್ ಧೋನಿ. ಈ ಬಗ್ಗೆ ಅವರು ಹೇಳಿದ ಮಾತು ಇಲ್ಲಿದೆ ನೋಡಿ.
ಪಂದ್ಯದ ಬಳಿಕ ಮಾತನಾಡಿದ ಧೋನಿ, “ಯುಎಇಯಲ್ಲಿ ಅಬುಧಾಬಿ ಮತ್ತು ದುಬೈನಲ್ಲಿರುವ ಪಿಚ್ಗಳಿಗೆ ಹೋಲಿಸಿದರೆ ಶಾರ್ಜಾದ ಪಿಚ್ ತುಸು ನಿಧಾನಗತಿಯದ್ದಾಗಿದೆ. ಅಲ್ಲದೆ ಇಬ್ಬನಿ ಇದ್ದಕಾರಣ ನಾವು ಚೇಸಿಂಗ್ ಆಯ್ಕೆ ಮಾಡಿಕೊಂಡೆವು. ಆರ್ಸಿಬಿ ಇನ್ನಿಂಗ್ಸ್ ವೇಳೆ 9 ಓವರ್ ಬಳಿಕ ಪಿಚ್ ನಿಧಾನವಾಗತೊಡಗಿತು. 14ನೇ ಓವರ್ ಬೌಲಿಂಗ್ ಮಾಡಲು ನನಗೆ ಮೊದಲು ಮೊಯೀನ್ ಅಲಿಗೆ ಕೊಡಬೇಕೆಂಬ ನಿರ್ಧಾರ ಮನಸಿನಲ್ಲಿತ್ತು. ಆದರೆ, ಡ್ವೇನ್ ಬ್ರಾವೋ ಅವರಿಗೆ ನಾನು ಚೆಂಡು ನೀಡಿದೆ. ಇದೇವೇಳೆ ಬ್ರಾವೋಗೆ ಒಂದೇ ಓವರ್ನಲ್ಲಿ ಆರು ವಿಭಿನ್ನ ಎಸೆತ ಹಾಕುವಂತೆ ಹೇಳಿದೆ. ಬ್ರಾವೋ ಆ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದರು” ಎಂದು ಧೋನಿ ಹೇಳಿದರು.
? ? Captain Cool @msdhoni was wholesome in his praise for ‘brother’ @DJBravo47. ? ?#VIVOIPL | #RCBvCSK | @ChennaiIPL pic.twitter.com/PqcRcI12NQ
— IndianPremierLeague (@IPL) September 24, 2021
ಹೌದು, ಡ್ವೇನ್ ಬ್ರಾವೋಗೆ ಬೌಲಿಂಗ್ ನೀಡಿದ ಧೋನಿ ಓವರ್‌ನ ಆರೂ ಎಸೆತಗಳನ್ನು ವಿಭಿನ್ನವಾಗಿ ಮತ್ತು ನಿಧಾನವಾಗಿ ಎಸೆಯುವಂತೆ ಸಲಹೆಯನ್ನು ನೀಡಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಧೋನಿ ಹೇಳಿದ ಹಾಗೆ ಡ್ವೇನ್ ಬ್ರಾವೊ ವಿರಾಟ್ ಕೊಹ್ಲಿಗೆ ಸ್ಲೋ ಡಿಲವರಿಗಳನ್ನು ಎಸೆದರು. ಈ ಪರಿಣಾಮವಾಗಿ ಬ್ರಾವೊ ಹಾಕಿದ ಎರಡನೇ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಜಡೇಜಾಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಇದರ ಪರಿಣಾಮ ಆರ್ಸಿಬಿ ತಂಡದ ಮೊತ್ತ 156 ಕ್ಕಷ್ಟೆ ತಲುಪಿತು. ಚೆನ್ನೈ 18.1 ಓವರ್ನಲ್ಲೇ ಗೆಲುವು ಸಾಧಿಸಿತು. ಧೋನಿ ಹೇಳಿದ ಪ್ಲಾನ್ ಅನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತಂಡ ಬ್ರಾವೋ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
RCB vs CSK IPL 2021: ಅನುಮಾನ ಹುಟ್ಟುಹಾಕಿದ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್: ಅಂಪೈರ್ ಮಾಡಿದ್ದೇನು ನೋಡಿ
IPL 2021 Playoffs: ಆರ್ಸಿಬಿಗೆ ಬಾಕಿ ಇರುವುದು ಕೇವಲ 5 ಪಂದ್ಯ: ಪ್ಲೇ ಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?
(MS Dhoni brought Dwayne Bravo to bowl six different balls to Virat Kohli out in IPL 2021 RCB vs CSK Match)