MS Dhoni New Look: ಉದ್ದ ಕೂದಲು, ಫಿಟ್ ಬಾಡಿ: ಹಳೇ ಲುಕ್​ನಲ್ಲಿ ಮಿಂಚಿದ ಎಂಎಸ್ ಧೋನಿ

|

Updated on: Mar 02, 2024 | 8:02 AM

Anant Ambani And Radhika Merchant Pre Wedding: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನೋಟದಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಯಾವಾಗಲೂ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಧೋನಿ ಈಗ ಮತ್ತೊಮ್ಮೆ ಹಳೆಯ ಸ್ಟೈಲ್​ನಲ್ಲಿ ಮಿಂಚಿದ್ದಾರೆ. ಧೋನಿಯ ಈ ಕೂಲ್ ಲುಕ್ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿವೆ.

MS Dhoni New Look: ಉದ್ದ ಕೂದಲು, ಫಿಟ್ ಬಾಡಿ: ಹಳೇ ಲುಕ್​ನಲ್ಲಿ ಮಿಂಚಿದ ಎಂಎಸ್ ಧೋನಿ
MS Dhoni New Look
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ ನೋಟ ಮತ್ತು ಸ್ಟೈಲ್ ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಧೋನಿ ಮತ್ತೊಮ್ಮೆ ತಮ್ಮ ಲುಕ್ ಬದಲಾಯಿಸಿದ್ದಾರೆ, ಹಿಂದಿನ ಶೈಲಿಗೆ ಮರಳಿದ್ದಾರೆ. ಮಹಿಯ ಲುಕ್ ಹಾಗೂ ಫಿಟ್ ನೆಸ್ ಕಂಡು ಅಭಿಮಾನಿಗಳಂತು ದಂಗಾಗಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಜಾಮ್‌ನಗರ ತಲುಪಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೂ ಮುನ್ನ ಅವರ ಫೋಟೋ ಹಾಗೂ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಹಿಂದೆಂದಿಗಿಂತಲೂ ಹೆಚ್ಚು ಸ್ಟೈಲಿಶ್ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ.

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಜೊತೆಯಲ್ಲಿ ಪಾಲ್ಗೊಂಡಿದ್ದರು. ವೈರಲ್ ಆಗಿರುವ ಫೋಟೋಗಳಲ್ಲಿ ಮಾಹಿ ಸಿಂಪಲ್ ಲುಕ್‌ನಲ್ಲಿಯೂ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ, ಧೋನಿ ಮರೂನ್ ಬಣ್ಣದ ಹಾಫ್ ಟೀ ಶರ್ಟ್ ಮತ್ತು ಕಪ್ಪು ಕಾರ್ಗೋ ಪ್ಯಾಂಟ್ ಧರಿಸಿದ್ದಾರೆ.

ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ದಿನಾಂಕ ನಿಗದಿ: ಯಾವಾಗ ನೋಡಿ

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಎಂಎಸ್ ಧೋನಿ ಫೋಟೋ:

 

ವಿಶೇಷ ಎಂದರೆ ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಡುವ ಸಂದರ್ಭ ಕಾಣಿಸಿಕೊಂಡ ರೀತಿಯಲ್ಲಿ ಮತ್ತೊಮ್ಮೆ ಉದ್ದ ಕೂದಲು ಬೆಳೆಸಿದ್ದಾರೆ. ಇದರೊಂದಿಗೆ ಹಾಫ್ ಟೀ ಶರ್ಟ್ ನಲ್ಲಿ ಬೈಸೆಪ್ಸ್ ಕೂಡ ತೋರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾರತದ ಮಾಜಿ ನಾಯಕನ ಈ ನೋಟವನ್ನು ಇಷ್ಟಪಟ್ಟಿದ್ದಾರೆ.

ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) 17 ನೇ ಋತುವಿನಲ್ಲಿ ಆಡುವ ಮೂಲಕ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಋತುವಿನಲ್ಲಿ ಮಾಹಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದ ಸಿಎಸ್​ಕೆ ಐದನೇ ಬಾರಿಗೆ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.

ಐಪಿಎಲ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಮುಂಬೈ ಇಂಡಿಯನ್ಸ್‌

ಐಪಿಎಲ್ 2025ರಲ್ಲೂ ಧೋನಿ:

ಈ ಐಪಿಎಲ್ ಮಾತ್ರವಲ್ಲದೆ ಮುಂದಿನ ಐಪಿಎಲ್​ನಲ್ಲೂ ಮಾಹಿ ಆಡುವ ಭರವಸೆ ಇದೆ ಎಂದು ಧೋನಿ ಬಾಲ್ಯ ಸ್ನೇಹಿತ ಪರಮಜಿತ್ ಸಿಂಗ್ ಹೇಳಿದ್ದಾರೆ. ”ಸಿಎಸ್‌ಕೆ ನಾಯಕ ಇನ್ನೂ ಎರಡು ಸೀಸನ್‌ಗಳನ್ನು ಆಡುತ್ತಾರೆ ಎಂದು ಭಾವಿಸುತ್ತೇನೆ. ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಎಂದು ನಾನು ಅಂದುಕೊಳ್ಳುವುದಿಲ್ಲ. ಅವರು ಇನ್ನೂ ಫಿಟ್ ಆಗಿದ್ದಾರೆ. ಹಾಗಾಗಿ ಅವರು ಇನ್ನೊಂದು ಅಥವಾ ಎರಡು ಋತುಗಳಲ್ಲಿ ಆಡುವುದನ್ನು ಮುಂದುವರಿಸಬಹುದು ಎಂದು ನಾನು ಭಾವಿಸುತ್ತೇನೆ. ಅವರು ಖಂಡಿತವಾಗಿಯೂ ಒಂದು ಋತುವನ್ನು ಆಡುತ್ತಾರೆ ಎಂದು ಖಂಡಿತವಾಗಿ ಹೇಳಬಲ್ಲೆ. ಇದಕ್ಕೆ ಒಂದೇ ಒಂದು ಕಾರಣವೆಂದರೆ ಅವರು ಇನ್ನೂ ಫಿಟ್ ಆಗಿರುವುದು,” ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:01 am, Sat, 2 March 24