ಐಪಿಎಲ್​ಗಾಗಿ ತಾಲೀಮು ಆರಂಭಿಸಿದ ಮಹೇಂದ್ರ ಸಿಂಗ್ ಧೋನಿ

ಐಪಿಎಲ್​ಗಾಗಿ ತಾಲೀಮು ಆರಂಭಿಸಿದ ಮಹೇಂದ್ರ ಸಿಂಗ್ ಧೋನಿ

ಝಾಹಿರ್ ಯೂಸುಫ್
|

Updated on:Aug 24, 2024 | 2:58 PM

MS Dhoni: 43 ವರ್ಷದ ಮಹೇಂದ್ರ ಸಿಂಗ್ ಧೋನಿ ಈ ಬಾರಿಯ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಧೋನಿಗಾಗಿ ಐಪಿಎಲ್​ನ ನಿಯಮವೊಂದನ್ನು ಬದಲಿಸಲು ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ಮನವಿ ಮಾಡಿದೆ. ಈ ಮನವಿಯಂತೆ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗುವ ಸಾಧ್ಯತೆಯಿದೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ಗಾಗಿ ಸಿದ್ದತೆಗಳನ್ನು ಶುರು ಮಾಡಿದ್ದಾರೆ. ಇದಕ್ಕಾಗಿ ಈ ಬಾರಿ ಬ್ಯಾಡ್ಮಿಂಟನ್​ ಮೊರೆ ಹೋಗಿದ್ದಾರೆ. ಅಂದರೆ ಬಿಡುವಿನಲ್ಲಿರುವ ಧೋನಿ ಬ್ಯಾಡ್ಮಿಂಟನ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಫಿಟ್​ನೆಸ್ ಸಾಧಿಸುವ ಇರಾದೆಯಲ್ಲಿರುವ ಧೋನಿ ಬ್ಯಾಡ್ಮಿಂಟನ್ ಆಡಲಾರಂಭಿಸಿದ್ದಾರೆ.

ಈ ಹಿಂದೆ ಕೊರೋನಾ ಲಾಕ್​ಡೌನ್ ವೇಳೆಯೂ ಧೋನಿ ತಮ್ಮ ಫಿಟ್​ನೆಸ್​ ಅನ್ನು ಕಾಪಾಡಿಕೊಳ್ಳಲು ಪ್ರತಿದಿನ ಬ್ಯಾಡ್ಮಿಂಟನ್​ ಆಡುತ್ತಿದ್ದರು. ಇದೀಗ ಮತ್ತೆ ಬ್ಯಾಡ್ಮಿಂಟನ್​ ಅಂಗಳದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇದರೊಂದಿಗೆ ಧೋನಿ ಈ ಬಾರಿಯ ಐಪಿಎಲ್ ಆಡುವುದು ಕೂಡ ಖಚಿತವಾಗಿದೆ. ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಸಿಎಸ್​ಕೆ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಐಪಿಎಲ್​ನ ಹಳೆಯ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿ 5 ವರ್ಷ ಕಳೆದ ಬಳಿಕ ಅವರನ್ನು ಅನ್​ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಬಹುದು. ಈ ನಿಯಮವನ್ನು ಈ ಬಾರಿಯ ಹರಾಜಿಗೂ ಮುನ್ನ ಚಾಲ್ತಿಗೆ ತರುವಂತೆ ಚೆನ್ನೈ ಸೂಪರ್ ಕಿಂಗ್ಸ್ ಮನವಿ ಮಾಡಿದೆ. ಅದರಂತೆ ಈ ಸಲ ಧೋನಿಯನ್ನು ಸಿಎಸ್​ಕೆ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

 

Published on: Aug 24, 2024 02:52 PM