ಆದರೆ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿದ್ದ ಕಾರಣ ಧವನ್, ಈ ಆಸ್ತಿಯನ್ನು ಆಯೇಷಾ ಹೆಸರಿಗೆ ವರ್ಗಾಯಿಸಲು ನಿರಾಕರಿಸಿದ್ದರು. ಬಹುಶಃ ಶಿಖರ್ ಮತ್ತು ಆಯೇಷಾ ನಡುವಿನ ವೈಮನಸ್ಸಿಗೆ ಇದೂ ಒಂದು ಕಾರಣವಾಗಿರಬಹುದು. ಆದರೆ ಶಿಖರ್ ಧವನ್, ಮಾನಸಿಕ ಹಿಂಸೆ ಮತ್ತು ಮಗನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.