AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಲಕ್ಷ ರೂ.ಗೆ ಕೊಹ್ಲಿ ಜೆರ್ಸಿ ಮಾರಾಟ: ಧೋನಿ ಬ್ಯಾಟ್​ಗೆ ಸಿಕ್ತು 13 ಲಕ್ಷ ರೂ.

ವಿಪ್ಲಾ ಫೌಂಡೇಶನ್‌ ಜೊತೆಗೂಡಿ ಅವಕಾಶ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಕೆಎಲ್ ರಾಹುಲ್-ಆತಿಯಾ ಶೆಟ್ಟಿ ಆಯೋಜಿಸಿದ ಹರಾಜಿನಲ್ಲಿ ಒಟ್ಟು 1.93 ಕೋಟಿ ಸಂಗ್ರಹವಾಗಿದೆ. ಟೀಮ್ ಇಂಡಿಯಾ ಆಟಗಾರರ ಜೆರ್ಸಿ, ಬ್ಯಾಟ್ ಮೂಲಕ ಬಡ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದ ಕೆಎಲ್​ಆರ್ ದಂಪತಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಎನ್ನಬಹುದು.

40 ಲಕ್ಷ ರೂ.ಗೆ ಕೊಹ್ಲಿ ಜೆರ್ಸಿ ಮಾರಾಟ: ಧೋನಿ ಬ್ಯಾಟ್​ಗೆ ಸಿಕ್ತು 13 ಲಕ್ಷ ರೂ.
KL Rahul Auction
ಝಾಹಿರ್ ಯೂಸುಫ್
|

Updated on: Aug 24, 2024 | 1:34 PM

Share

ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಹಾಗೂ ಪತ್ನಿ ಆತಿಯಾ ಶೆಟ್ಟಿ ಆಯೋಜಿಸಿದ ‘ಕ್ರಿಕೆಟ್ ಫಾರ್ ಚಾರಿಟಿ’ ಹರಾಜಿನಲ್ಲಿ ವಿರಾಟ್ ಕೊಹ್ಲಿಯ ಜೆರ್ಸಿ ಬರೋಬ್ಬರಿ 40 ಲಕ್ಷ ರೂ.ಗೆ ಮಾರಾಟವಾಗಿದೆ. ಇನ್ನು ರೋಹಿತ್ ಶರ್ಮಾ ಅವರ ಬ್ಯಾಟ್ 24 ಲಕ್ಷಕ್ಕೆ ಬಿಕರಿಯಾದರೆ, ಧೋನಿಗೆ ಬ್ಯಾಟ್​ 13 ಲಕ್ಷ ರೂ.ಗೆ ಹರಾಜಾಗಿದೆ. ಹಾಗಿದ್ರೆ ವಿಪ್ಲಾ ಫೌಂಡೇಶನ್​ಗಾಗಿ ಆಯೋಜಿಸಿದ ಹರಾಜಿನಲ್ಲಿ ಮಾರಾಟವಾದ ಪ್ರಮುಖ ವಸ್ತುಗಳಾವುವು ಎಂದು ನೋಡೋಣ…

ವಿರಾಟ್ ಕೊಹ್ಲಿ ಜೆರ್ಸಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ನಂಬರ್ 18 ಜೆರ್ಸಿಯನ್ನು ಹರಾಜಿಗಿಡಲಾಗಿತ್ತು. ಈ ಜೆರ್ಸಿಯು ಬರೋಬ್ಬರಿ 40 ಲಕ್ಷ ರೂ.ಗೆ ಮಾರಾಟವಾಗಿರುವುದು ವಿಶೇಷ.

ವಿರಾಟ್ ಕೊಹ್ಲಿಯ ಗ್ಲೌಸ್: ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಧರಿಸಿದ್ದ ಗ್ಲೌಸ್ ಕೂಡ ಈ ಹರಾಜಿನಲ್ಲಿತ್ತು. ಇದನ್ನು ವ್ಯಕ್ತಿಯೊಬ್ಬರು ಬರೋಬ್ಬರಿ 28 ಲಕ್ಷ ರೂ. ಖರೀದಿಸಿದ್ದಾರೆ.

ರೋಹಿತ್ ಶರ್ಮಾ ಬ್ಯಾಟ್: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್ ಅನ್ನು 24 ಲಕ್ಷ ರೂ.ಗೆ ಖರೀದಿಸಲಾಗಿದೆ. ಇದು ಈ ಹರಾಜಿನಲ್ಲಿ ಬಿಕರಿಯಾದ ಮೂರನೇ ದುಬಾರಿ ವಸ್ತು.

ಧೋನಿ ಬ್ಯಾಟ್: ಈ ಹರಾಜಿನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟ್ 13 ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿದೆ.

ರಾಹುಲ್ ದ್ರಾವಿಡ್ ಬ್ಯಾಟ್: ಭಾರತ ತಂಡದ ಲೆಜೆಂಡ್ ರಾಹುಲ್ ದ್ರಾವಿಡ್ ಸಹ ಈ ಹರಾಜಿಗಾಗಿ ತಮ್ಮ ಬ್ಯಾಟ್​ವೊಂದನ್ನು ನೀಡಿದ್ದರು. ಈ ಬ್ಯಾಟ್ ಬರೋಬ್ಬರಿ 11 ಲಕ್ಷ ರೂ.ಗೆ ಮಾರಾಟವಾಗಿದೆ.

ಕೆಎಲ್ ರಾಹುಲ್ ಜೆರ್ಸಿ: ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಹರಾಜಿಗಿಟ್ಟ ಜೆರ್ಸಿಯು ಬರೋಬ್ಬರಿ 11 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಜಸ್​ಪ್ರೀತ್ ಬುಮ್ರಾ ಜೆರ್ಸಿ: ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಸಹಿ ಹಾಕಿರುವ ಟೀಮ್ ಇಂಡಿಯಾ ಜೆರ್ಸಿಯು 8 ಲಕ್ಷ ರೂ.ಗೆ ಹರಾಜಾಗಿದೆ.

ಇನ್ನು ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಸಹಿ ಹಾಕಿದ ರಾಜಸ್ಥಾನ್ ರಾಯಲ್ಸ್ ಜೆರ್ಸಿ, ಸೌತ್ ಆಫ್ರಿಕಾ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ನೀಡಿದ ಕೀಪಿಂಗ್ ಗ್ಲೌಸ್ ಹಾಗೂ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿಯು ಒಟ್ಟು 2.10 ಲಕ್ಷ ರೂ.ಗೆ ಮಾರಾಟವಾಗಿದೆ.

ಇದನ್ನೂ ಓದಿ: MS Dhoni: ಧೋನಿಯನ್ನು ಬ್ಯಾನ್ ಮಾಡಬೇಕಿತ್ತು: ವೀರೇಂದ್ರ ಸೆಹ್ವಾಗ್

ಕೆಎಲ್ ರಾಹುಲ್ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್, ಟೀಮ್ ಇಂಡಿಯಾ ಜೆರ್ಸಿ, ಟೀಮ್ ಇಂಡಿಯಾ ಕ್ಯಾಪ್, ಬ್ಯಾಟಿಂಗ್ ಪ್ಯಾಡ್‌ಗಳು, ಟೀಮ್ ಇಂಡಿಯಾ ಹೆಲ್ಮೆಟ್, ಬ್ಯಾಟಿಂಗ್ ಗ್ಲೌಸ್ ಮತ್ತು ಟೆಸ್ಟ್ ಜೆರ್ಸಿಯು ಒಟ್ಟು 32.20 ಲಕ್ಷಕ್ಕೆ ಬಿಕರಿಯಾಗಿದೆ.  ಈ ಮೂಲಕ ಕೆಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಅವಕಾಶ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಒಟ್ಟು 1.93 ಕೋಟಿ ರೂ. ಸಂಗ್ರಹಿಸಿದ್ದಾರೆ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ