AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ರಾಜಸ್ಥಾನ್ ಸ್ಫೋಟಕ ಚೇಸಿಂಗ್​ ಬಗ್ಗೆ ಪಂದ್ಯ ಮುಗಿದ ಬಳಿಕ ಎಂ. ಎಸ್ ಧೋನಿ ಏನಂದ್ರು ಗೊತ್ತಾ?

RR vs CSK, IPL 2021: ಶನಿವಾರ ನಡೆದ ಐಪಿಎಲ್ 2021ರ ಪಂದ್ಯದಲ್ಲಿ ದೊಡ್ಡ ಮೊತ್ತದ ಟಾರ್ಗೆಟ್ ನೀಡಿದ್ದರೂ ರಾಜಸ್ಥಾನ್ ರಾಯಲ್ಸ್ ಗೆದ್ದು ಬೀಗಿದ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಮಾತನಾಡಿದ್ದಾರೆ.

MS Dhoni: ರಾಜಸ್ಥಾನ್ ಸ್ಫೋಟಕ ಚೇಸಿಂಗ್​ ಬಗ್ಗೆ ಪಂದ್ಯ ಮುಗಿದ ಬಳಿಕ ಎಂ. ಎಸ್ ಧೋನಿ ಏನಂದ್ರು ಗೊತ್ತಾ?
MS Dhoni RR vs CSK IPl 2021
TV9 Web
| Updated By: Vinay Bhat|

Updated on: Oct 03, 2021 | 9:04 AM

Share

ಅಭಿದಾಬಿಯ ಶೇಖ್ ಜಯೇದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2021ರ (IPL 2021) ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RR vs CSK) ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಈ ಬಾರಿಯ ಐಪಿಎಲ್​ನಲ್ಲಿ ದುರ್ಬಲ ತಂಡವಾಗಿ ಗೋಚರಿಸಿದ್ದ ಸಂಜು ಸ್ಯಾಮ್ಸನ್ (Sanju Samson) ಪಡೆ ಸಿಎಸ್​ಕೆ ನೀಡಿದ್ದ ಕಠಿಣ ಟಾರ್ಗೆಟ್ ಅನ್ನು ನಿರೀಕ್ಷೆಗೂ ಮೀರಿ ಬೆನ್ನಟ್ಟಿ 7 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿತು. ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರ ಚೊಚ್ಚಲ ಐಪಿಎಲ್ ಶತಕದ ಹೊರತಾಗಿಯು ಎಂ. ಎಸ್ ಧೋನಿ (MS Dhoni) ಪಡೆ ಸೋಲು ಕಂಡಿತು. ಇತ್ತ ಆರ್​ಆರ್​ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಸ್ಫೋಟಕ ಅರ್ಧಶತಕ ಮತ್ತು ಶಿವಂ ದುಬೆ (Yashasvi Jaiswal) ಅವರ ಮನಮೋಹಕ ಅಜೇಯ ಆಟದ ನೆರವಿನಿಂದ ಟೂರ್ನಿಯಲ್ಲಿ ಐದನೇ ಜಯ ಪಡೆದುಕೊಂಡಿತು. ಪಂದ್ಯ ಮುಗಿದ ಬಳಿಕ ಚೆನ್ನೈ ನಾಯಕ ಧೋನಿ ರಾಜಸ್ಥಾನ್ (Rajasthan Royals) ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.

“ನಾವು ಟಾಸ್ ಗೆಲ್ಲುವಲ್ಲಿ ವಿಫಲರಾದೆವು. ಆದರೂ 190 ರನ್ ಉತ್ತಮ ಸ್ಕೋರ್, ಎದುರಾಳಿಗೆ ಕಠಿಣ ಟಾರ್ಗೆಟ್ ನೀಡಿದೆವು. ಡ್ಯೂ ಇದ್ದ ಕಾರಣ ಚೆಂಡು ಚೆನ್ನಾಗಿ ಬರಲು ಪ್ರಾರಂಭಿಸಿತು. ಈ ಸಂದರ್ಭ ನೀವು ಬ್ಯಾಟಿಂಗ್ ಅನ್ನು ಇನ್ನಷ್ಟು ಚೆನ್ನಾಗಿ ಮಾಡಬೇಕು. ಇದನ್ನು ರಾಜಸ್ಥಾನ್ ಬ್ಯಾಟರ್​ಗಳು ಮಾಡಿದರು. ಬೌಲರ್​ಗಳಿಗೆ ಒತ್ತಡ ಹೇರಿದರು. ಮೊದಲ 6 ಓವರ್​ನಲ್ಲೇ ಅವರು ಪಂದ್ಯವನ್ನು ತಮ್ಮ ಕೈಸೆರೆ ಮಾಡಿಕೊಂಡರು. ನಾವು 250 ರನ್ ಕಲೆಹಾಕಿದ ರೀತಿಯಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನವಿತ್ತು” ಎಂದು ಧೋನಿ ಪಂದ್ಯ ಮುಗಿದ ಬಳಿಕ ಹೇಳಿದ್ದಾರೆ.

“ರುತುರಾಜ್ ಗಾಯಕ್ವಾಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಾಮಾನ್ಯವಾಗಿ ನಾವು ಪಂದ್ಯವನ್ನು ಸೋತಾಗ ಕುಸಿತಕ್ಕೆ ಒಳಗಾಗುತ್ತೇವೆ. ಆದರೆ, ಈ ಬಾರಿ ಹಾಗಾಗಲಿಲ್ಲ, ಇದೊಂದು ಅತ್ಯುತ್ತಮ ಇನ್ನಿಂಗ್ಸ್ ಆಗಿತ್ತು. ಇಂತಹ ಟಿ-20 ಪಂದ್ಯಗಳಲ್ಲಿ ನಾವು ಸಂದರ್ಭವನ್ನು ಬೇಗನೆ ಅರಿಯಬೇಕು. ಎದುರಾಳಿ ನಮಗೆ ಪ್ರೆಶರ್ ಕೊಡುವ ರೀತಿ ಮಾಡಬಾರದು. ದೀಪಕ್ ಚಹಾರ್ ಹೊಸ ಬಾಲ್ ಅನ್ನು ಬೇಗನೆ ರೀಡ್ ಮಾಡುತ್ತಾನೆ. ಆದರೆ, ಇಂದಿನ ಪಂದ್ಯಕ್ಕೆ ಅವರ ಅಲಭ್ಯತೆ ಕಾಡಿತು. ಪ್ರತಿ ಸೋಲಿನಿಂದ ಕಲಿಯುವುದು ಇದ್ದೇ ಇದೆ” ಎಂಬುದು ಧೋನಿ ಮಾತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 4 ವಿಕೆಟಿಗೆ 189 ರನ್‌ ಪೇರಿಸಿದರೆ, ರಾಜಸ್ಥಾನ್‌ 17.3 ಓವರ್‌ಗಳಲ್ಲಿ 3 ವಿಕೆಟಿಗೆ 190 ರನ್‌ ಚಚ್ಚಿತು. ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಶಿವಂ ದುಬೆ 42 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಅಜೇಯ 64 ರನ್‌ ಬಾರಿಸಿ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಜೈಸ್ವಾಲ್‌ 50, ಎವಿನ್‌ ಲೆವಿಸ್‌ 27, ಸ್ಯಾಮ್ಸನ್‌ 28 ರನ್‌ ಕೊಡುಗೆ ಸಲ್ಲಿಸಿದರು. ಮೊದಲ ವಿಕೆಟಿಗೆ 5.2 ಓವರ್‌ಗಳಿಂದ 77 ರನ್‌ ಪೇರಿಸಿದ ರಾಜಸ್ಥಾನ್‌ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಚೆನ್ನೈ ಬೌಲರ್​ಗಳನ್ನು ಕಾಡುತ್ತಾ ಸಾಗಿದರು.

ಇದಕ್ಕೂ ಮುನ್ನ ಚೆನ್ನೈ ಪರ ಆರಂಭಕಾರ ರುತುರಾಜ್‌ ಗಾಯಕ್ವಾಡ್‌ ಅಜೇಯ 101 ರನ್‌ ಬಾರಿಸಿ ಮೆರೆದರು. ಮುಸ್ತಫಿಜುರ್‌ ಅವರ ಇನ್ನಿಂಗ್ಸಿನ ಅಂತಿಮ ಎಸೆತವನ್ನು ಮಿಡ್‌ ವಿಕೆಟ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟಿದ ಗಾಯಕ್ವಾಡ್‌ ತಮ್ಮ ಮೊದಲ ಐಪಿಎಲ್‌ ಸೆಂಚುರಿಯನ್ನು ಪೂರ್ತಿಗೊಳಿಸಿದರು. ಇದು ಕೇವಲ 60 ಎಸೆತಗಳಲ್ಲಿ ಬಂತು. 5 ಸಿಕ್ಸರ್‌ ಹಾಗೂ 9 ಫೋರ್‌ ಬಾರಿಸಿದ್ದರು.

IPL 2021, KKR vs SRH: ಹೈದರಾಬಾದ್​ಗೆ ಔಪಚಾರಿಕ ಪಂದ್ಯ: ಕೆಕೆಆರ್ ಗೆದ್ದರೆ ಪ್ಲೇ ಆಫ್​ಗೆ ಮತ್ತಷ್ಟು ಸನಿಹ

RCB vs PBKS, IPL 2021: ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಆರ್​ಸಿಬಿಗೆ ಬೇಕು ಗೆಲುವು: ಪಂಜಾಬ್ ಸೋತರೆ ಟೂರ್ನಿಯಿಂದ ಔಟ್

(MS Dhoni talked After RR vs CSK IPL 2021 post-match presentation Rajasthan Royals chased down the 190-run target)

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ