IPL 2024: ಐಪಿಎಲ್​ನಲ್ಲಿ ಧೋನಿಯ ಹೊಸ ‘ಪಾತ್ರ’ ಬಹಿರಂಗ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಇದೀಗ ಜಿಯೋ ಸಿನಿಮಾ ಐಪಿಎಲ್ ಜಾಹೀರಾತು ಪ್ರಕಟಿಸಿದೆ. ಈ ಜಾಹೀರಾತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿ ಜಿಯೋ ಜಾಹೀರಾತಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದರು.

IPL 2024: ಐಪಿಎಲ್​ನಲ್ಲಿ ಧೋನಿಯ ಹೊಸ ಪಾತ್ರ ಬಹಿರಂಗ
MS Dhoni
Edited By:

Updated on: Mar 06, 2024 | 5:27 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಕ್ಕೆ  (IPL 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ದಿನಗಣನೆಯ ನಡುವೆ ಮಹೇಂದ್ರ ಸಿಂಗ್ ಧೋನಿ (MS Dhoni) ಐಪಿಎಲ್ ಕುರಿತಾದ ಪೋಸ್ಟ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದರು. ಈ ಬಾರಿಯ ಐಪಿಎಲ್​ಗಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ. ಅಲ್ಲದೆ ಈ ಸಲ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಫೇಸ್​ಬುಕ್​ನಲ್ಲಿ ಧೋನಿ ತಿಳಿಸಿದ್ದರು.

ಧೋನಿ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಾನಾ ಊಹಾಪೋಹಗಳು ಹರಿದಾಡಿದ್ದವು. ಆದರೀಗ ಈ ಬಾರಿಯ ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಪಾತ್ರವೇನು ಎಂಬುದು ಬಹಿರಂಗವಾಗಿದೆ. ಅದು ಕೂಡ ಜಾಹೀರಾತಿನ ಮೂಲಕ ಎಂಬುದು ವಿಶೇಷ.

ಹೌದು, ಜಿಯೋ ಸಿನಿಮಾದ ಐಪಿಎಲ್ ಜಾಹೀರಾತಿನಲ್ಲಿ ಮಹೇಂದ್ರ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ವಿಡಿಯೋವನ್ನು ಧೋನಿ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗೆ ನ್ಯೂ ಸೀಸನ್…ಡಬಲ್ ರೋಲ್ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಈ ಜಾಹೀರಾತಿನ ವಿಚಾರವಾಗಿಯೇ ಧೋನಿ ಐಪಿಎಲ್ 2024 ರಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಈ ಜಾಹೀರಾತಿನಲ್ಲಿ ಧೋನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೀಗಾಗಿ ಹೊಸ ಸೀಸನ್​ನಲ್ಲಿ ಡಬಲ್​ ರೋಲ್ ಎಂದು ಬರೆದುಕೊಂಡಿದ್ದಾರೆ. ಅಂದರೆ ಧೋನಿಯ ಫೇಸ್​ಬುಕ್ ಪೋಸ್ಟ್ ಕೇವಲ ಜಾಹೀರಾತಿನ ಗಿಮಿಕ್ ಆಗಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

ಐಪಿಎಲ್ ಉಚಿತ ಪ್ರಸಾರ:

ಕಳೆದ ಬಾರಿಯಂತೆ ಈ ಸಲ ಕೂಡ ಜಿಯೋ ಸಿನಿಮಾ ಆ್ಯಪ್​ನಲ್ಲಿ ಐಪಿಎಲ್​ ಉಚಿತ ಪ್ರಸಾರ ಇರಲಿದೆ. ಈ ಜಾಹೀರಾತಿನ ವಿಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದು, ಈ ಮೂಲಕ ಈ ಸಲ ಕೂಡ ಎಲ್ಲರೂ ಉಚಿತವಾಗಿ ಐಪಿಎಲ್ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಐಪಿಎಲ್ ಯಾವಾಗ ಶುರು?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಮುಂಬರುವ ಲೋಕಸಭಾ ಚುನಾವಣಾ ನಿಮಿತ್ತ ಕೇವಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದ್ದು, ಚುನಾವಣಾ ದಿನಾಂಕ ಘೋಷಣೆಯ ಬೆನ್ನಲ್ಲೇ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿIPL 2024: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಐಪಿಎಲ್​ನಿಂದ ಔಟ್..!

RCB vs CSK ಮುಖಾಮುಖಿ:

ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ 17ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ದೊರೆಯಲಿದೆ.

 

Published On - 3:00 pm, Wed, 6 March 24