T20 Max Clubs: ಆಸ್ಟ್ರೇಲಿಯಾ ಟಿ20 ಲೀಗ್​ನಲ್ಲಿ ಅವಕಾಶ ಪಡೆದ ಭಾರತದ ಎಡಗೈ ವೇಗಿಗಳು..!

| Updated By: ಝಾಹಿರ್ ಯೂಸುಫ್

Updated on: Jul 23, 2022 | 1:54 PM

Mukesh Choudhary-Chetan Sakariya: ಈ ಇಬ್ಬರು ಆಟಗಾರರು ಟೂರ್ನಿಯಲ್ಲಿ ಭಾಗವಹಿಸುವುದಲ್ಲದೆ ಬೂಪಾ ನ್ಯಾಷನಲ್ ಕ್ರಿಕೆಟ್ ಸೆಂಟರ್​ನಲ್ಲಿ ತರಬೇತಿ ಪಡೆಯಲಿದ್ದಾರೆ. ಇದಾದ ಬಳಿಕ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

T20 Max Clubs: ಆಸ್ಟ್ರೇಲಿಯಾ ಟಿ20 ಲೀಗ್​ನಲ್ಲಿ ಅವಕಾಶ ಪಡೆದ  ಭಾರತದ ಎಡಗೈ ವೇಗಿಗಳು..!
Mukesh Choudhary-Chetan Sakariya
Follow us on

ಐಪಿಎಲ್​ ಮೂಲಕ ಸಂಚಲನ ಸೃಷ್ಟಿಸಿದ್ದ ಭಾರತದ ಯುವ ಬೌಲರ್​ಗಳಾದ ಚೇತನ್ ಸಕರಿಯಾ (Chetan Sakariya)  ಮತ್ತು ಮುಖೇಶ್ ಚೌಧರಿ (Mukesh Choudhary) ಆಸ್ಟ್ರೇಲಿಯಾದ ಟಿ20 ಮ್ಯಾಕ್ಸ್ ಟೂರ್ನಿಯ ಆರಂಭಿಕ ಸೀಸನ್​ನಲ್ಲಿ ಆಡಲಿದ್ದಾರೆ. ಚೇತನ್ ಸಕರಿಯಾ ಮತ್ತು ಮುಖೇಶ್ ಚೌಧರಿ ಇಬ್ಬರೂ IPL ನ ಕೊನೆಯ ಸೀಸನ್​ನಲ್ಲಿ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಇದೀಗ ಈ ಇಬ್ಬರು ಎಡಗೈ ವೇಗಿಗಳಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಮ್ಯಾಕ್ಸ್​​ ಟೂರ್ನಿಯಲ್ಲಿ ಆಡುವ ಅವಕಾಶ ದೊರೆತಿದೆ. MRF ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ವಿನಿಮಯ ಕಾರ್ಯಕ್ರಮದ ಭಾಗವಾಗಿ ಇಬ್ಬರು ಆಟಗಾರರು ಬ್ರಿಸ್ಬೇನ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶ ಸಿಕ್ಕಿದೆ.

ಅಲ್ಲದೆ ಈ ಅಭ್ಯಾಸದ ಭಾಗವಾಗಿ ಮುಂದಿನ ತಿಂಗಳು ನಡೆಯಲಿರುವ ಟಿ20 ಮ್ಯಾಕ್ಸ್ ಟೂರ್ನಿಯಲ್ಲೂ ಆಡುವ ಅವಕಾಶ ನೀಡಲಾಗುತ್ತದೆ. ಅದರಂತೆ ಭಾರತ ಯುವ ಎಡಗೈ ವೇಗಿಗಳು ಆಸ್ಟ್ರೇಲಿಯಾ ಟಿ20 ಮ್ಯಾಕ್ಸ್​ ಟೂರ್ನಿಯಲ್ಲಿ ತಮ್ಮ ಬೌಲಿಂಗ್ ಅಸ್ತ್ರಗಳನ್ನು ಪ್ರಯೋಗಿಸಲಿದ್ದಾರೆ.

ಎಂಆರ್‌ಎಫ್ ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವೆ ಆಟಗಾರರ ವಿನಿಮಯ ಮತ್ತು ತರಬೇತಿ ಸುಮಾರು 20 ವರ್ಷಗಳಿಂದ ನಡೆಯುತ್ತಿದೆ. ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಪುನರಾರಂಭಿಸಲಾಗುತ್ತಿದ್ದು, ಈ ಬಾರಿ ಇಬ್ಬರು  ಭಾರತೀಯ ಯುವ ಬೌಲರ್​ಗಳು ಸ್ಥಾನ ಪಡೆದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಚೇತನ್ ಸಕರಿಯಾ ಕಳೆದ ವರ್ಷ ನಡೆದ ಶ್ರೀಲಂಕಾ ವಿರುದ್ಧದ ODI ಮತ್ತು T20 ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು.  ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮುಖೇಶ್ ಚೌಧರಿ 13 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಇಬ್ಬರಿಗೂ ಎಂಆರ್​ಎಫ್ ಪೇಸ್ ಫೌಂಡೇಷನ್ ಮೂಲಕ ಅವಕಾಶ ಸಿಕ್ಕಿದ್ದು, ಅದರಂತೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಸಕಾರಿಯಾ ಸನ್ ಶೈನ್ ಕೋಸ್ಟ್ ತಂಡದ ಪರ ಆಡಲಿದ್ದಾರೆ. ಹಾಗೆಯೇ ಮುಖೇಶ್ ಚೌಧರಿ ಅವರು ವಿನ್ನಮ್-ಮ್ಯಾನ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇನ್ನು ಈ ಇಬ್ಬರು ಆಟಗಾರರು ಟೂರ್ನಿಯಲ್ಲಿ ಭಾಗವಹಿಸುವುದಲ್ಲದೆ ಬೂಪಾ ನ್ಯಾಷನಲ್ ಕ್ರಿಕೆಟ್ ಸೆಂಟರ್​ನಲ್ಲಿ ತರಬೇತಿ ಪಡೆಯಲಿದ್ದಾರೆ. ಇದಾದ ಬಳಿಕ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟಿ20 ಟೂರ್ನಿಯು ಆಗಸ್ಟ್ 18ರಿಂದ ಸೆಪ್ಟೆಂಬರ್ 4ರವರೆಗೆ ನಡೆಯಲಿದ್ದು, ಭಾರತದ ಯುವ ಎಡಗೈ ಬೌಲರ್​ಗಳು ಹೇಗೆ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ.