ಟಿ20 ವಿಶ್ವಕಪ್ (T20 World Cup) ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು ಎಲ್ಲಾ ತಂಡಗಳು ತಮ್ಮ ತಮ್ಮ ಅಂತಿಮ ಹಂತದ ಸಿದ್ದತೆಗಳನ್ನು ಪೂರ್ಣಗೊಳಿಸುವುದರಲ್ಲಿ ತೊಡಗಿಕೊಂಡಿವೆ. ಆದರೆ ಈ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಮಾತ್ರ ಹಿನ್ನಡೆ ಅನುಭವಿಸಿದೆ. ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ (Mark Boucher) ಆಫ್ರಿಕಾ ತಂಡವನ್ನು ತೊರೆಯಲು ನಿರ್ಧರಿಸಿದ್ದು, ರೋಹಿತ್ (Rohit Sharma) ತಂಡವನ್ನು ಸೇರಲು ಸಿದ್ದತೆ ನಡೆಸಿದ್ದಾರೆ. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ (Mumbai Indians) ಶುಕ್ರವಾರ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾರ್ಕ್ ಬೌಚರ್ ಅವರು ತಮ್ಮ ತಂಡದ ಹೊಸ ಮುಖ್ಯ ಕೋಚ್ ಆಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ. ಈ ಹಿಂದೆ ಮುಂಬೈ ತಂಡದ ಜವಬ್ದಾರಿವಹಿಸಿಕೊಂಡಿದ್ದ ಮಹೇಲಾ ಜಯವರ್ಧನೆ ಬದಲಿಗೆ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.
ಮುಂದಿನ ಐಪಿಎಲ್ನಲ್ಲಿ ಮುಂಬೈಗೆ ಬೌಚರ್ ಮಾರ್ಗದರ್ಶನ
ಮುಂಬರುವ ಐಪಿಎಲ್ 2023 ರಲ್ಲಿ, ಮುಂಬೈ ತಂಡವು ಮಾರ್ಕ್ ಬೌಚರ್ ಮಾರ್ಗದರ್ಶನದಲ್ಲಿ ಮೈದಾನಕ್ಕಿಳಿಯಲಿದೆ. ಈ ವಾರದ ಆರಂಭದಲ್ಲಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ T20 ವಿಶ್ವಕಪ್ ನಂತರ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂದು ದೃಢಪಡಿಸಿತ್ತು. 2019 ರಲ್ಲಿ, ಬೌಚರ್ ಅವರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಮುಖ್ಯ ತರಬೇತುದಾರರನ್ನಾಗಿ ನೇಮಿಸಿತ್ತು. ಅಲ್ಲಿಂದ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಆಫ್ರಿಕಾ 11 ಟೆಸ್ಟ್, 12 ODI ಮತ್ತು 23 T20 ಪಂದ್ಯಗಳನ್ನು ಗೆದ್ದಿದೆ. ಮುಂದಿನ ವರ್ಷ ಅಂದರೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ವರೆಗೆ ಬೌಚರ್‌ನೊಂದಿಗೆ ಆಫ್ರಿಕಾ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿತ್ತು. ಆದರೆ ಮಾರ್ಕ್ ಬೌಚರ್ ಅವರು ಈಗಾಗಲೇ ತಂಡವನ್ನು ತೊರೆಯಲು ನಿರ್ಧರಿಸಿರುವುದರಿಂದ ಈ ಒಪ್ಪಂದ ರದ್ದಾಗಿದೆ.
Presenting आपले नवीन Head Coach – ???? ??????? ?
Paltan, drop a ? to welcome the ?? legend to our #OneFamily ?#DilKholKe #MumbaiIndians @markb46 @OfficialCSA pic.twitter.com/S6zarGJmNM
— Mumbai Indians (@mipaltan) September 16, 2022
ಕಳೆದೆರಡು ಸೀಸನ್ಗಳು ಮುಂಬೈ ತಂಡಕ್ಕೆ ಉತ್ತಮವಾಗಿಲ್ಲ
ಮುಂಬೈ ಇಂಡಿಯನ್ಸ್ ನೀಡಿದ ಹೇಳಿಕೆಯಲ್ಲಿ ಬೌಚರ್, ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿರುವುದು ನಮಗೆ ಸಂತಸ ತಂದಿದೆ ಎಂದಿದೆ. ಮುಂಬೈ ಇಂಡಿಯನ್ಸ್ ಬಗ್ಗೆ ಮಾತನಾಡುವುದಾದರೆ, 5 ಬಾರಿಯ ಚಾಂಪಿಯನ್ ಮುಂಬೈ ತಂಡ ತನ್ನ ಕೊನೆಯ 2 ಸೀಸನ್‌ಗಳಲ್ಲಿ ಸಾಕಷ್ಟು ನಿರಾಶಾದಾಯಕ ಪ್ರದರ್ಶನ ನೀಡಿತ್ತು. 2021 ರಲ್ಲಿ, ತಂಡವು 5 ನೇ ಸ್ಥಾನದಲ್ಲಿದ್ದರೆ, ಕಳೆದ ಸೀಸನ್ನಲ್ಲಿ ಮುಂಬೈ ತಂಡ 10 ತಂಡಗಳಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಅಲ್ಲದೆ 2022ರಲ್ಲಿ ರೋಹಿತ್ ಪಡೆ 10 ಪಂದ್ಯಗಳಲ್ಲಿ ಸೋಲನ್ನು ಎದುರಿಸಿ ಕೇವಲ 4 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿತ್ತು.